- Advertisement -
- Advertisement -



ಮೈಸೂರು: ಮೈಸೂರು-ಬೆಂಗಳೂರು ಹೈವೇ ಬಳಿಯ, ಮೈಸೂರು ಹೊರ ವಲಯ ಆಗಿರುವ ಕೆಸರೆ ಬಡಾವಣೆಯಲ್ಲಿ ಇಂದು ಬೆಳಗ್ಗೆ 3:30ರ ವೇಳೆಗೆ ಬೆಂಕಿ ಬಿದ್ದ ಪರಿಣಾಮ 12 ಕ್ಕೂ ಹೆಚ್ಚು ಗೋದಾಮುಗಳು ಹೊತ್ತಿ ಉರಿದ ಘಟನೆ ನಡೆದಿದೆ.
ಹಳೆ ವಸ್ತುಗಳು ಸಂಗ್ರಹಿಸಿಡಲಾದ ಗೋದಾಮುಗಳಲ್ಲಿ ಈ ಅವಘಡ ಸಂಭವಿಸಿದೆ. ಅಗ್ನಿಶಾಮಕ ದಳದ ಸಿಬ್ಬಂದಿಗಳು ಬೆಂಕಿ ನಂದಿಸಲು ಹರಸಾಹಸಪಟ್ಟಿದ್ದಾರೆ ಎನ್ನಲಾಗಿದೆ.
ಕುಡಿದ ಮತ್ತಿನಲ್ಲಿ ಯಾರೋ ಬೆಂಕಿ ಹಚ್ಚಿರುವ ಶಂಕೆ ವ್ಯಕ್ತವಾಗಿದ್ದು, 12ಕ್ಕೂ ಹೆಚ್ಚು ವಿವಿಧ ರೀತಿಯ ಗೋದಾಮುಗಳು ಬೆಂಕಿನ ಕೆನ್ನಾಲಿಗೆಗೆ ಸುಟ್ಟು ಭಸ್ಮವಾಗಿವೆ. ಮೈಸೂರಿನ ಎನ್.ಆರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
- Advertisement -








