Sunday, April 28, 2024
spot_imgspot_img
spot_imgspot_img

ಕೋಲ್ಪೆ ಶ್ರೀ ಷಣ್ಮುಖ ಸುಬ್ರಹ್ಮಣ್ಯ ದೇವಸ್ಥಾನದ ಅಷ್ಟಬಂಧ ಬ್ರಹ್ಮ ಕಲಶ ಮಹೋತ್ಸವದ ಹೊರ ಕಾಣಿಕೆ ಸಂಭ್ರಮ

- Advertisement -G L Acharya panikkar
- Advertisement -
vtv vitla

ಕಾರ್ತಿಕ ಕಾರ್ಯಾಲಯ, ಷಣ್ಮುಖ ಮಾಹಿತಿ ಕೇಂದ್ರ, ಸ್ಕಂದ ಸೇವಾ ವಿಭಾಗ, ಸಭಾಂಗಣ ಉದ್ಘಾಟನೆ

ವಿಟ್ಲ: ಬಂಟ್ವಾಳ ತಾಲೂಕು ಇಡ್ಕಿದು ಗ್ರಾಮದ ಕೋಲ್ಪೆ ಶ್ರೀ ಷಣ್ಮುಖ ಸುಬ್ರಹ್ಮಣ್ಯ ಕ್ಷೇತ್ರದಲ್ಲಿ ಬ್ರಹ್ಮಶ್ರೀ ಕೆಮ್ಮಿಂಜೆ ನಾಗೇಶ ತಂತ್ರಿಗಳ ನೇತೃತ್ವದಲ್ಲಿ ಜ.3ರಿಂದ ಜ.8ರ ವರೆಗೆ ನಡೆಯಲಿರುವ ಅಷ್ಟಬಂಧ ಬ್ರಹ್ಮಕಲಶ ಮಹೋತ್ಸವದ ಅಂಗವಾಗಿ ಜ.3ರಂದು ಹಸಿರುವಾಣಿ ಹೊರೆಕಾಣಿಕೆ ಮೆರವಣಿಗೆ ನಡೆಯಿತು.

ಬೆಳಗ್ಗೆ ಶ್ರೀಧಾಮ ಮಾಣಿಲ, ಶ್ರೀ ಮಹಾಲಕ್ಷ್ಮೀ ಕ್ಷೇತ್ರದ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ ಹಾಗೂ ತಿರುಮಲೇಶ್ವರ ಭಟ್ ಅನುಚಾನ ನಿಲಯರವರು ಧ್ವಜಾರೋಹಣಗೈದರು.

ಬಳಿಕ ಸಾಮೂಹಿಕ ಪ್ರಾರ್ಥನೆ ನಡೆಯಿತು. ಸುಬ್ರಹ್ಮಣ್ಯ ಭಟ್ ಉರಿಮಜಲುರವರು ದೀಪ ಬೆಳಗಿಸಿ ಉಗ್ರಾಣ ಮುಹೂರ್ತ ನಡೆಸಿದರು. ಪುತ್ತೂರು ಶಾಸಕರಾದ ಸಂಜೀವ ಮಠಂದೂರುರವರು ಕ್ಷೇತ್ರದ ಕಾರ್ಯಾಲಯವನ್ನು ದೀಪಬೆಳಗಿಸಿ ಉದ್ಘಾಟಿಸಿದರು.

ಹಸಿರುವಾಣಿ ಮೆರವಣಿಗೆಯು ಸೂರ್ಯ, ಧರ್ಮನಗರ, ಅಳಕೆಮಜಲು, ಕಬಕ, ಬೀಡಿನಮಜಲು ಮೊದಲಾದ ಕಡೆಗಳಿಂದ ಆಗಮಿಸಿದ ವಾಹನಗಳು ಮಿತ್ತೂರು ರಾಮನಗರದಲ್ಲಿರುವ ಶ್ರೀ ಸೀತಾರಾಮಾಂಜನೇಯ ಭಜನಾ ಮಂದಿರಕ್ಕೆ ತಲುಪಿತು. ಅಲ್ಲಿ ಶ್ರೀಧಾಮ ಮಾಣಿಲ ಶ್ರೀ ಮಹಾಲಕ್ಷ್ಮೀ ಕ್ಷೇತ್ರದ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿಯವರು ತೆಂಗಿನ ಕಾಯಿ ಒಡೆದು ಹಸಿರುವಾಣಿ ಮೆರವಣಿಗೆಗೆ ಚಾಲನೆ ನೀಡಿದರು.

ಬಳಿಕ ಭಕ್ತಾಧಿಗಳು ಕಾಲ್ನಡಿಗೆ ಮೂಲಕ ಮೆರವಣಿಗೆಯು ದೇವಸ್ಥಾನ ತಲುಪಿತು. ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಸುರೇಶ್ ಕೆ.ಎಸ್. ಮುಕ್ಕುಡ, ಬ್ರಹ್ಮಕಲಶೋತ್ಸವ ಮತ್ತು ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಪಿ. ರಾಜಾರಾಮ ಶೆಟ್ಟಿ ಕೋಲ್ಪೆಗುತ್ತು, ಗೌರವಾಧ್ಯಕ್ಷ ಎಂ.ಹೆಚ್. ರಮೇಶ್ ಭಟ್ ಮಿತ್ತೂರು, ಕಾರ್ಯಾಧ್ಯಕ್ಷ ದಿವಾಕರ ದಾಸ್ ನೇರ್ಲಾಜೆ, ಪ್ರಧಾನ ಕಾರ್ಯದರ್ಶಿ ಪ್ರಪುಲ್ಲಚಂದ್ರ ಪಿ.ಜಿ.ಕೋಲ್ಪೆ, ಉಪಾಧ್ಯಕ್ಷ ಈಶ್ವರ ಗೌಡ ನಾಯ್ತೋಟ್ಟು, ಎಂ.ಸುಧೀರ್ ಕುಮಾರ್‌ ಶೆಟ್ಟಿ, ಕೋಶಾಧಿಕಾರಿ ವೆಂಕಟರಮಣ ಭಟ್ ಸೂರ್ಯ, ಕಾರ್ಯದರ್ಶಿ ಜಗದೀಶ್ ದೇವಸ್ಯ, ವ್ಯವಸ್ಥಾಪನಾ ಸಮಿತಿ ಸದಸ್ಯರಾದ ವಿಜಯಕುಮಾರ್ ಗೌಡ ಸೂರ್ಯ, ಚಂದ್ರಶೇಖರ ಕಂಬಳಿ‌ ಅರ್ಕೆಚ್ಚಾರು, ದೇಜಪ್ಪ ಕೋಲ್ಪೆ, ವಿ.ಕೆ.ಕುಟ್ಟಿ ಉರಿಮಜಲು, ಉಷಾ ಮುಂಡ್ರಬೈಲು, ಶಶಿಪ್ರಭ ಮಿತ್ತೂರು, ಇಡ್ಕಿದು‌ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಸುಧಾಕರ‌ ಶೆಟ್ಟಿ ಬೀಡಿನಮಜಲು ಸೇರಿದಂತೆ ಊರಪರವೂರ ಸಾವಿರಾರು ಭಕ್ತಾಧಿಗಳು ಉಪಸ್ಥಿತರಿದ್ದರು.

- Advertisement -

Related news

error: Content is protected !!