Thursday, June 4, 2026
spot_imgspot_img
spot_imgspot_img

ಟ್ರಯಲ್ ರೂಮ್‍ನಲ್ಲಿ ಯುವತಿ ಅಶ್ಲೀಲ ಫೋಟೋ ತೆಗೆದು ಬ್ಲ್ಯಾಕ್‍ಮೇಲ್ – ಆರೋಪಿ ಅರೆಸ್ಟ್

- Advertisement -
- Advertisement -

ಬಟ್ಟೆ ಅಂಗಡಿಯ ಟ್ರಯಲ್ ರೂಮ್‍ನಲ್ಲಿ ಯುವತಿಯ ಅಶ್ಲೀಲ ಫೋಟೋ ತೆಗೆದುಕೊಂಡು ಆಕೆಗೆ ಬ್ಲ್ಯಾಕ್‍ಮೇಲ್ ಮಾಡುತ್ತಿದ್ದ ಆರೋಪಿಯನ್ನು ಹಾವೇರಿಯ, ಹಾನಗಲ್ ಪೊಲೀಸರು ಬಂಧಿಸಿದ್ದಾರೆ.

ಬಂಧಿತ ಆರೋಪಿಯನ್ನ ಮೈನುದ್ದೀನ್ ಮುಂಡಗೋಡ (32) ಎಂದು ಗುರುತಿಸಲಾಗಿದೆ. ಮಕರವಳ್ಳಿ ಗ್ರಾಮದ ಯುವತಿಯೊಬ್ಬಳು ಬಟ್ಟೆ ಖರೀದಿಗೆ ನಗರದ ಅಂಗಡಿಯೊಂದಕ್ಕೆ ತೆರಳಿದ್ದ ವೇಳೆ ಆರೋಪಿ, ಯುವತಿಯ ಅಶ್ಲೀಲ ಫೋಟೋ ತೆಗೆದುಕೊಂಡಿದ್ದ. ಬಳಿಕ ಯುವತಿಯ ಮೊಬೈಲ್ ನಂಬರ್ ಪಡೆದು ವೀಡಿಯೋ ಕಾಲ್ ಮಾಡಿ ನಗ್ನವಾಗುವಂತೆ ಪೀಡಿಸುತ್ತಿದ್ದ ಎಂದು ಆರೋಪಿಸಲಾಗಿದೆ.

ಇಷ್ಟೇ ಅಲ್ಲದೇ ಆರೋಪಿ, ಯುವತಿಯಿಂದ 50 ಸಾವಿರ ರೂ. ಹಾಗೂ ಚಿನ್ನದ ಸರ ಪಡೆದಿದ್ದಾನೆ. ದಿನೇ ದಿನೇ ಆತನಿಂದ ಕಿರುಕುಳ ಹೆಚ್ಚಾಗುತ್ತಿದ್ದಂತೆ ಯುವತಿ ಪೊಲೀಸರ ಮೊರೆ ಹೋಗಿದ್ದಾಳೆ. ಆರೋಪಿಯನ್ನು ಬಂಧಿಸಲಾಗಿದ್ದು, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ಈ ಸಂಬಂಧ ಹಾನಗಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ.

- Advertisement -

Related news

error: Content is protected !!