Saturday, May 4, 2024
spot_imgspot_img
spot_imgspot_img

ಕೋವಿಡ್ ಲಸಿಕಾ ಅಭಿಯಾನದಲ್ಲಿ ಶತಕೋಟಿ ಲಸಿಕಾ ಸಾಧನೆ; ದೇಶದ ಸಾಧನೆಗೆ ಪ್ರಧಾನಿ ಮೋದಿ ಶ್ಲಾಘನೆ!

- Advertisement -G L Acharya panikkar
- Advertisement -

ಭಾರತವು ಕೊವಿಡ್ ಲಸಿಕಾ ಅಭಿಯಾನದಲ್ಲಿ 100 ಕೋಟಿ ಡೋಸ್ ಲಸಿಕೆ ನೀಡಿ ಸಾಧನೆ ಮಾಡಿದೆ. ಚೀನಾದ ನಂತರ ಈ ಸಾಧನೆ ಮಾಡಿದ ವಿಶ್ವದ ಎರಡನೇ ರಾಷ್ಟ್ರವಾಗಿ ಭಾರತ ಹೊರಹೊಮ್ಮಿದೆ. ಈ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ದೇಶವನ್ನು ಉದ್ದೇಶಿಸಿ ಭಾಷಣ ಮಾಡಿದ್ದಾರೆ. ಪ್ರಧಾನಿ ಭಾಷಣದ ಸಂಪೂರ್ಣ ಮಾಹಿತಿ ಇಲ್ಲಿ ಲಭ್ಯವಿದೆ.

ಭಾರತವು ಅ.21ರಂದು ಶತಕೋಟಿ ಡೋಸ್ ಲಸಿಕೆ ನೀಡಿಕೆಯ ಮೈಲಿಗಲ್ಲನ್ನು ತಲುಪಿತ್ತು. ಆಗ ಪ್ರಧಾನಿ ಮೋದಿ ಟ್ವೀಟ್ ಮಾಡಿ ಅಭಿನಂದನೆ ಸಲ್ಲಿಸಿದ್ದರು. ದೇಶದ 130 ಕೋಟಿ ಭಾರತೀಯರ ಸಾಮೂಹಿಕ ಚೈತನ್ಯ, ಉದ್ಯಮಶೀಲತೆ, ಭಾರತೀಯ ವಿಜ್ಞಾನದ ಸಾಧನೆಗೆ 100 ಕೋಟಿ ಡೋಸ್ ಲಸಿಕೆ ನೀಡಿಕೆಯ ಮೈಲಿಗಲ್ಲು ಸಾಕ್ಷಿಯಾಗಿದೆ. ಈ ಸಾಧನೆ ಮಾಡಿದ ಭಾರತಕ್ಕೆ ಅಭಿನಂದನೆ. ಇದಕ್ಕೆ ಕಾರಣರಾದ ವೈದ್ಯರು, ನರ್ಸ್ ಗಳು, ದಾದಿಯರಿಗೂ ಅಭಿನಂದನೆಗಳು ಎಂದು ಟ್ವೀಟ್ ಮೂಲಕ ಪ್ರಧಾನಿ ಮೋದಿ ಅಭಿನಂದನೆ ಸಲ್ಲಿಸಿದ್ದರು.

- Advertisement -

Related news

error: Content is protected !!