Monday, May 20, 2024
spot_imgspot_img
spot_imgspot_img

ಕೋವಿಡ್ ಲಸಿಕೆ ಅಭಿಯಾನ: 200 ಕೋಟಿ ಡೋಸ್ ಮೈಲಿಗಲ್ಲು ಸಾಧಿಸಿದ ಭಾರತ; ಪ್ರಧಾನಿ ಮೋದಿ ಶ್ಲಾಘನೆ

- Advertisement -G L Acharya panikkar
- Advertisement -

ನವದೆಹಲಿ: ಇಡೀ ಜಗತ್ತನ್ನೇ ಕಂಗೆಡಿಸಿದ ಕೋವಿಡ್-19 ಸಾಂಕ್ರಾಮಿಕದ ವಿರುದ್ಧ ಹೋರಾಡಲು ಭಾರತ ಸರ್ಕಾರ ನೀಡಿದ ಕೋವಿಡ್ ಲಸಿಕೆ ಅಭಿಯಾನ ಮತ್ತೊಂದು ಮೈಲಿಗಲ್ಲು ಮುಟ್ಟಿದೆ. ಇಂದಿಗೆ ಭಾರತ 200 ಕೋಟಿ ಡೋಸ್ ಕೋವಿಡ್-19 ಲಸಿಕೆಯನ್ನು ನೀಡಿದ ಗುರಿ ಸಾಧಿಸಿದೆ.

ಭಾರತದಲ್ಲಿ 200 ಕೋಟಿ ಡೋಸ್ ಲಸಿಕೆ ನೀಡಿದ ಸಂದರ್ಭದಲ್ಲಿ ಪ್ರಧಾನಿ ಮೋದಿ ಶ್ಲಾಘಿಸಿದ್ದಾರೆ. 18 ತಿಂಗಳ ಅವಧಿಯಲ್ಲೇ ಭಾರತ ಈ ಸಾಧನೆ ಮಾಡಿದ ಪ್ರಪಂಚದ ಮೊದಲ ರಾಷ್ಟ್ರ ಎನಿಸಿಕೊಂಡಿದೆ.

ಈ ಮೈಲಿಗಲ್ಲನ್ನು ಸಾಧಿಸಿ ಇತಿಹಾಸ ಸೃಷ್ಟಿಸಿದ್ದಕ್ಕಾಗಿ ರಾಷ್ಟ್ರವನ್ನು ಅಭಿನಂದಿಸಿರುವ ಪ್ರಧಾನಿ ನರೇಂದ್ರ ಮೋದಿ ಟ್ವಿಟ್ಟರ್‌ನಲ್ಲಿ, “ಭಾರತ ಮತ್ತೆ ಇತಿಹಾಸವನ್ನು ಸೃಷ್ಟಿಸಿದೆ! 200 ಕೋಟಿ ಲಸಿಕೆ ಡೋಸ್‌ಗಳ ವಿಶೇಷ ಅಂಕಿ ಅಂಶವನ್ನು ದಾಟಿದ್ದಕ್ಕಾಗಿ ಎಲ್ಲಾ ಭಾರತೀಯರಿಗೆ ಅಭಿನಂದನೆಗಳು. ಲಸಿಕೆ ತಯಾರಿಸಲು ಕೊಡುಗೆ ನೀಡಿದವರಿಗೆ ಹೆಮ್ಮೆಯಿದೆ. ವ್ಯಾಕ್ಸಿನೇಷನ್ ಡ್ರೈವ್ ಪ್ರಮಾಣ ಮತ್ತು ವೇಗದಲ್ಲಿ ಭಾರತಕ್ಕೆ ಸಾಟಿಯಿಲ್ಲ. ಇದು ಕೋವಿಡ್-19 ವಿರುದ್ಧದ ಜಾಗತಿಕ ಹೋರಾಟವನ್ನು ಬಲಪಡಿಸಿದೆ.” ಎಂದು ಹೇಳಿದ್ದಾರೆ.

- Advertisement -

Related news

error: Content is protected !!