Friday, April 19, 2024
spot_imgspot_img
spot_imgspot_img

ಖಾರ್ಕಿವ್ ನಗರದಲ್ಲಿ ರಷ್ಯಾ ಸೇನೆಯಿಂದ ಏರ್ ಸ್ಟ್ರೈಕ್: ಮುಗಿಲೆತ್ತರದ ಕಟ್ಟಡ ಛಿದ್ರ

- Advertisement -G L Acharya panikkar
- Advertisement -

ಉಕ್ರೇನ್ : ರಷ್ಯಾದಿಂದ ಉಕ್ರೇನ್ ದೇಶದ ಮೇಲೆ ದಾಳಿ ಮುಂದುವರೆಸಲಾಗಿದೆ. ಇಂದು ಉಕ್ರೇನ್ ನ ಖಾರ್ಕಿವ್ ನಗರದ ಮೇಲೆ ರಷ್ಯಾ ಸೇನೆಯಿಂದ ಏರ್ ಸ್ಟ್ರೈಕ್ ನಡೆಸಲಾಗುತ್ತಿದೆ. ರಷ್ಯಾ ದಾಳಿಯಿಂದಾಗಿ ಮುಗಿಲೆತ್ತರದ ಕಟ್ಟಡಗಳೇ ಛಿದ್ರಗೊಳ್ಳುತ್ತಿರೋದಾಗಿ ತಿಳಿದು ಬಂದಿದೆ.

ರಷ್ಯಾ ಹಾಗೂ ಉಕ್ರೇನ್ ನಡುವಿನ ಯುದ್ಧ ಕ್ಷಣ ಕ್ಷಣಕ್ಕೂ ರೋಚಕ ತಿರುವು ಪಡೆಯುತ್ತಿದೆ. ಈ ಸಂದರ್ಭದಲ್ಲಿಯೇ ಉಕ್ರೇನ್ ನಲ್ಲಿರುವ ಭಾರತೀಯ ರಾಯಭಾರಿ ಡಾ.ಇಗೋ ಪೊಲಿಖಾ ಅವರು, ನಾವು ಸಾಕಷ್ಟು ನಾಗರಿಕ ಸಾವುನೋವುಗಳನ್ನು ಅನುಭವಿಸುತ್ತಿದ್ದೇವೆ. ನಮ್ಮ ಸಚಿವಾಲಯದ ಅಧಿಕೃತ ಮಾಹಿತಿಯ ಪ್ರಕಾರ, ರಷ್ಯಾದ ಶಾಂತಿ ಹೋರಾಟದ ಕಾರ್ಯಾಚರಣೆಯ ಪರಿಣಾಮವಾಗಿ ಈಗಾಗಲೇ 16 ಮಕ್ಕಳು ಬಾಂಬ್ ದಾಳಿ, ಶೆಲ್ ದಾಳಿಯಿಂದ ಕೊಲ್ಲಲ್ಪಟ್ಟಿದ್ದಾರೆ ಎಂದು ಹೇಳಿದ್ದಾರೆ.

ಮತ್ತೊಂದೆಡೆ ರಷ್ಯಾ ಸೇನೆಯಿಂದ ಉಕ್ರೇನ್ ನ ಖಾರ್ಕಿವ್ ನಗರದ ಮೇಲೆ ಏರ್ ಸ್ಟ್ರೈಕ್ ದಾಳಿಯನ್ನು ನಡೆಸಲಾಗುತ್ತಿದೆ. ಈ ದಾಳಿಯಿಂದಾಗಿ ದೊಡ್ಡ ದೊಡ್ಡ ಕಟ್ಟಡಗಳು ಛಿದ್ರಗೊಳ್ಳುತ್ತಿರೋದಾಗಿ ತಿಳಿದು ಬಂದಿದೆ.

- Advertisement -

Related news

error: Content is protected !!