Monday, August 31, 2026
spot_imgspot_img
spot_imgspot_img

ಗಂಡನನ್ನು ಬಿಟ್ಟು ತವರು ಸೇರಿದ್ದ ಯುವತಿಗಾಗಿ ಇಬ್ಬರು ಸ್ನೇಹಿತರ ಮಧ್ಯೆ ಜಗಳ; ಕೊಲೆಯಲ್ಲಿ ಅಂತ್ಯ..!

- Advertisement -
- Advertisement -
vtv vitla
vtv vitla

ಕಲಬುರಗಿ: ಗಂಡನನ್ನು ತೊರೆದು ತವರು ಸೇರಿದ್ದ ಯುವತಿಗಾಗಿ ಇಬ್ಬರು ಸ್ನೇಹಿತರ ಮಧ್ಯೆ ವೈಷಮ್ಯಕ್ಕೆ ಕಾರಣವಾಗಿ ಕೊಲೆಯಲ್ಲಿ ಅಂತ್ಯವಾದ ಘಟನೆ ಸಂಭವಿಸಿದೆ.

vtv vitla

ಕೊಲೆಯಾದ ಯುವಕ ಚಿಂಚೋಳಿ ತಾಲೂಕಿನ ಕುಪನೂರು ಗ್ರಾಮದ ಯುವಕ ಸಮೀರ್ ಮುಜಾವರ್ (23) ಎನ್ನಲಾಗಿದೆ.

ಹತ್ಯೆಯಾದ ಸಮೀರ್ ಮತ್ತು ಕಾಶಿನಾಥ ಇಬ್ಬರು ಕುಪನೂರು ಗ್ರಾಮದ ವಿವಾಹಿತೆಯನ್ನು ಪ್ರೀತಿಸುತ್ತಿದ್ದರು. ಇದೇ ವಿಚಾರವಾಗಿ ಇಬ್ಬರ ಮಧ್ಯೆ ಸಾಕಷ್ಟು ಬಾರಿ ಜಗಳ ಕೂಡ ನಡೆದಿತ್ತು. ಅವಳು ನನ್ನ ಹುಡುಗಿ ಬಿಟ್ಟು ಬಿಡು.. ಅಂತಾ ಸಮೀರ್ ಹೇಳಿದ್ರೆ.. ಇತ್ತ ಕಾಶಿನಾಥ ಸಹ.. ಅವಳು ನನ್ ಹುಡುಗಿ.‌. ನೀನ್ಯಾಕೇ ಅವಳ ಹಿಂದೆ ಬಿದ್ದಿಯಾ ಅಂತಾ ತಗಾದೆ ತೆಗೆದಿದ್ದಾನೆ.

vtv vitla

ಹೀಗಾಗಿ ಇಬ್ಬರ ಮಧ್ಯೆ ಜಗಳ ಕಂಡು, ಸಮೀರ್ ಪೋಷಕರು ಸಮೀರನ್ನ ಹೈದ್ರಾಬಾದ್‌ನಲ್ಲಿ ಸೆಂಟ್ರಿಂಗ್ ಕೆಲಸ ಮಾಡಲು ಕಳುಹಿಸಿರುತ್ತಾರೆ. ಆದರೆ ಹೈದ್ರಾಬಾದ್ ಹೋದರು ಸಹ ಯುವತಿಗೆ ಫೋನ್ ಮಾಡೋದು, ಮಾತಾಡೋದು ಮಾಡುತ್ತಿದ್ದ ಇದರಿಂದ ಕಾಶಿನಾಥ್ ಸಿಕ್ಕಾಪಟೆ ತಲೆ ಕೆಡಿಸಿಕೊಂಡಿದ್ದ.

ಸಮೀರ್ ಸಂಬಂಧಿಯೊಬ್ಬರ ನಿಧನ ಹಿನ್ನಲೆಯಲ್ಲಿ ಅಂತ್ಯಕ್ರಿಯೆಯಲ್ಲಿ ಭಾಗಿಯಾಗಲು ಸೇಡಂ ತಾಲೂಕಿನ ನಿಡಗುಂದ ಗ್ರಾಮಕ್ಕೆ ಬಂದಿದ್ದ. ಅಂತ್ಯಕ್ರಿಯೆಯಲ್ಲಿ ಭಾಗವಹಿಸಿ ಕುಪನೂರು ಗ್ರಾಮಕ್ಕೆ ಆಗಮಿಸಿದ್ದ. ಈ ವೇಳೆ ಮನೆ ಸಮೀಪವೇ ಕಾಶಿನಾಥ್, ತನ್ನ ಸ್ನೇಹಿತ ವೀರೇಶ್ ಎಂಬಾತನ ಜೊತೆಗೂಡಿ ಚಾಕುವಿನಿಂದ ಇರಿದು ಸಮೀರ್‌ನನ್ನ ಬರ್ಬರವಾಗಿ ಹತ್ಯೆ ಮಾಡಿದ್ದಾರೆ.‌‌ 

vtv vitla
vtv vitla
- Advertisement -

Related news

error: Content is protected !!