Monday, August 31, 2026
spot_imgspot_img
spot_imgspot_img

ವಿಟ್ಲ: ಪತಂಜಲಿ ಯೋಗ ಸಮಿತಿ(ರಿ) ವತಿಯಿಂದ ಮುಳಿಯ-ದಂಬೆಯಲ್ಲಿ ಉಚಿತ ಯೋಗ ಶಿಕ್ಷಣ ಶಿಬಿರದ ನೂತನ ಶಾಖೆ ಉದ್ಘಾಟನೆ

- Advertisement -
- Advertisement -

ವಿಟ್ಲ: ಶ್ರೀ ಪತಂಜಲಿ ಯೋಗ ಶಿಕ್ಷಣ ಸಮಿತಿ (ರಿ) ವತಿಯಿಂದ 48 ದಿನಗಳ ಉಚಿತ ಯೋಗ ಶಿಕ್ಷಣ ಶಿಬಿರದ ನೂತನ ಶಾಖೆಯು ಮುಳಿಯ-ದಂಬೆಯ ಶ್ರೀ ಅಯ್ಯಪ್ಪ ಸ್ವಾಮಿ ಭಜನಾ ಮಂದಿರದಲ್ಲಿ ಆ.30(ರವಿವಾರ) ರಂದು ಶುಭಾರಂಭಗೊಂಡಿತು.

ಜಿಲ್ಲಾ ಸಮಿತಿ, ಜಿಲ್ಲಾ ಸಹ ಸಂಚಾಲಕರು, ನಗರ ಸಂಚಾಲಕರು ಹಾಗೂ ಮುಖ್ಯ ಶಿಕ್ಷಕರ ಮಾರ್ಗದರ್ಶನದಲ್ಲಿ ನಡೆದ ಈ ಅವಿಸ್ಮರಣೀಯ ಕಾರ್ಯಕ್ರಮವನ್ನು ಆನಂದ ಶೆಟ್ಟಿ ತಾಳಿಪಡ್ಪು ಅವರು ದೀಪ ಪ್ರಜ್ವಲನೆ ಮಾಡಿ ಉದ್ಘಾಟಿಸಿ, ಎಲ್ಲಾ ಯೋಗ ಬಂಧುಗಳಿಗೆ ಶುಭ ಹಾರೈಸಿದರು.

ನಗರ ಶಿಕ್ಷಣ ಪ್ರಮುಖರಾದ ಮಂಜುನಾಥ ಅವರು ಸಮಿತಿಯ ಪರಿಚಯ ಹಾಗೂ ಧ್ಯೇಯೋದ್ದೇಶಗಳನ್ನು ಮನಮುಟ್ಟುವಂತೆ ವಿವರಿಸಿದರು. ಕಾರ್ಯಕ್ರಮದ ಅಧ್ಯಕ್ಷರಾದ ಶ್ರೀಮತಿ ಸೌಭದ್ರೆ ಅವರು ತಮ್ಮ ಅನುಭವಗಳನ್ನು ಹಂಚಿಕೊಂಡು, ಯೋಗದಿಂದಾಗುವ ಪ್ರಯೋಜನಗಳ ಬಗ್ಗೆ ತಿಳಿಸಿದರು.

ಭಜನೆಯೊಂದಿಗೆ ಪ್ರಾರಂಭವಾದ ಕಾರ್ಯಕ್ರಮದಲ್ಲಿ ಶಾಖೆಯ ಯೋಗ ಬಂಧುಗಳಾದ ನಾರಾಯಣ, ರಮೇಶ, ಜಯಂತಿ, ಲಕ್ಷ್ಮಿ, ಪ್ರಸನ್ನ, ದಯಾನಂದ ಅವರು ತಮ್ಮ ಅನುಭವಗಳನ್ನು ಹಂಚಿಕೊಂಡರು. ಹೊಸ ಯೋಗ ಬಂಧುಗಳಿಗೆ ಜಯಲಕ್ಷ್ಮಿ ಅವರು ಸೂಚನೆಗಳನ್ನು ನೀಡಿದರು.

ಶ್ರೀಮತಿ ಪ್ರಸನ್ನ ಅವರು ಕಾರ್ಯಕ್ರಮ ನಿರೂಪಿಸಿ, ಶ್ರೀಮತಿ ನಿರ್ಮಲ ಸ್ವಾಗತಿಸಿದರು ಹಾಗೂ ಗೋಪಾಲಕೃಷ್ಣ ಅವರು ವಂದನಾರ್ಪಣೆ ಮಾಡಿದರು. ಕಾರ್ಯಕ್ರಮದಲ್ಲಿ 89 ಯೋಗ ಬಂಧುಗಳೊಂದಿಗೆ ಕಾರ್ಯಕ್ರಮ ಸಂಪನ್ನಗೊಂಡಿತು.

- Advertisement -

Related news

error: Content is protected !!