Tuesday, April 23, 2024
spot_imgspot_img
spot_imgspot_img

ಗಗನಸಖಿ ಕನಸು ನನಸು ಮಾಡಿಕೊಂಡ ಬುಡಕಟ್ಟು ಜನಾಂಗದ ದಿಟ್ಟ ಯುವತಿ..!

- Advertisement -G L Acharya panikkar
- Advertisement -

ಕೇರಳದ ಆ ಯುವತಿ 12 ವರ್ಷದವಳಿದ್ದಾಗಲೇ ಗಗನಸಖಿ ಆಗಬೇಕೆಂದು ಕನಸು ಕಂಡಿದ್ದ ಪರಿಶಿಷ್ಟ ಪಂಗಡ ಛಲಗಾತಿ ಹೆಣ್ಣು ಮಗಳು ಇಂದು ಈ ಕನಸನ್ನು ನನಸು ಮಾಡಿದ್ದಾಳೆ. ಗೋಪಿಕಾ ಗೋವಿಂದ್‌ ಕಣ್ಣೂರು ಜಿಲ್ಲೆಯ ಕವುಂಕುಡಿ ಎಸ್‌ಟಿ ಕಾಲೋನಿಯ ದಿಟ್ಟ ಹೆಣ್ಣುಮಗಳು. ಇನ್ನು ಕೆಲ ದಿನಗಳಲ್ಲಿ “ಏರ್‌ ಇಂಡಿಯಾ ಎಕ್ಸ್‌ಪ್ರೆಸ್‌’ ಸಂಸ್ಥೆಯ ಗಗನಸಖಿಯಾಗಲಿದ್ದಾರೆ.

ರಾಜ್ಯದಲ್ಲಿ ಗಗನಸಖಿಯಾದ ಮೊದಲ ಎಸ್‌ಟಿ ಮಹಿಳೆಯಾಗಿ ಹೊರಹೊಮ್ಮಲಿದ್ದಾರೆ. ಗಗನಸಖಿ ಕನಸು ಕಂಡಿದ್ದ ಗೋಪಿಕಾಗೆ ಅದರ ಕೋರ್ಸಿನ ಖರ್ಚು ವೆಚ್ಚದ ಮಾಹಿತಿ ತಿಳಿದು ನಿರಾಸೆಯಾಗಿತ್ತು. ಅದೇ ಕಾರಣಕ್ಕೆ ಅವರು ಬಿಎಸ್ಸಿ ವಿದ್ಯಾಭ್ಯಾಸ ಮಾಡಲಾರಂಭಿಸಿದ್ದಾರೆ.

ಆ ವೇಳೆ ಅವರಿಗೆ ರಾಜ್ಯ ಸರ್ಕಾರವು ಎಸ್‌ಟಿ ವಿದ್ಯಾರ್ಥಿನಿಯರ ವಿದ್ಯಾಭ್ಯಾಸದ ಖರ್ಚು ಭರಿಸುವ ಯೋಜನೆ ಬಗ್ಗೆ ಮಾಹಿತಿ ಸಿಕ್ಕಿದೆ. ಅದನ್ನು ಬಳಸಿಕೊಂಡ ಅವರು ವಯನಾಡಿನ ಡ್ರೀಮ್‌ ಸ್ಕೈ ಏವಿಯೇಷನ್‌ ತರಬೇತಿ ಅಕಾಡೆಮಿಯಲ್ಲಿ ಐಎಟಿಎ ಗ್ರಾಹಕ ಸೇವಾ ವಿಷಯದಲ್ಲಿ ಡಿಪ್ಲೊಮಾ ಮಾಡಿದ್ದಾರೆ. ನಂತರ ಮುಂಬೈನಲ್ಲಿ ಏರ್‌ ಇಂಡಿಯಾದಿಂದ ತರಬೇತಿ ಪಡೆದಿದ್ದಾರೆ. ತರಬೇತಿ ಪೂರ್ಣಗೊಳಿಸಿರುವ ಅವರು ಶೀಘ್ರವೇ ಗಗನಸಖಿಯಾಗಿ ಹಾರಲಿದ್ದಾರೆ.

astr
- Advertisement -

Related news

error: Content is protected !!