Thursday, April 25, 2024
spot_imgspot_img
spot_imgspot_img

ಗಡಿಯ ಮೇಲೆ ಅರ್ಜುನನ ಕಣ್ಣು..! ಪಾಕ್‌ ಡ್ರೋನ್‌ಗಳ ಬೇಟೆಗೆ ಗಿಡುಗನ ಬಳಕೆ

- Advertisement -G L Acharya panikkar
- Advertisement -

ಔಲಿ: ಗಡಿಯಲ್ಲಿ ಇನ್ನು ಮುಂದೆ ಭಾರತೀಯ ಸೇನೆಯಿಂದ ತರಬೇತಿ ಪಡೆದ ಗಿಡುಗಗಳು ಶತ್ರುಗಳ ಮೇಲೆ ಕಣ್ಣಿಡಲಿದೆ..!

ಉತ್ತರಾಖಂಡದ ಔಲಿಯಲ್ಲಿ ಭಾರತ ಮತ್ತು ಅಮೆರಿಕ ಜಂಟಿ ಸಮರಾಭ್ಯಾಸ ನಡೆಸುತ್ತಿದ್ದು, ಇದರಲ್ಲಿ ಗಿಡುಗನ ಸಾಮರ್ಥ್ಯವನ್ನು ಅನಾವರಣ ಮಾಡಲಾಗಿದೆ. ಇದೇ ಮೊದಲ ಬಾರಿಗೆ ಭಾರತೀಯ ಸೇನೆಯು ಡ್ರೋನ್‌ಗಳನ್ನು ಬೇಟೆಯಾಡಲು ಇವುಗಳನ್ನು ಬಳಸಿಕೊಳ್ಳುತ್ತಿರುವುದು ವಿಶೇಷ. ಸದ್ಯ ಸೇನೆಯಿಂದ ತರಬೇತಿ ಪಡೆದ ಗಿಡುಗಕ್ಕೆ “ಅರ್ಜುನ” ಎಂಬ ಹೆಸರಿಡಲಾಗಿದೆ.

ಈ ಯುದ್ಧಾಭ್ಯಾಸದ ವೇಳೆ ಸೇನೆಯು ಶತ್ರು ಡ್ರೋನ್‌ ಬರುವ ಒಂದು ಅಣಕು ಸನ್ನಿವೇಶ ಸೃಷ್ಟಿಸಿತ್ತು. ಮೊದಲಿಗೆ ತರಬೇತಿ ಪಡೆದಿರುವ ನಾಯಿ ಡ್ರೋನ್ ಶಬ್ದ ಕೇಳಿದೊಡನೆ ಎಚ್ಚರಿಕೆ ನೀಡಿತು. ಬಳಿಕ ಗಿಡುಗ ಡ್ರೋನ್ ಹಾರುತ್ತಿರುವ ಸ್ಥಳದ ಮಾಹಿತಿ ನೀಡಿತು. ಇಲ್ಲಿ ಅತೀ ಎತ್ತರದಲ್ಲಿ ಹಾರುವ ಗಿಡುಗನ ಸಾಮರ್ಥ್ಯವನ್ನು ಬಳಸಿಕೊಳ್ಳಲಾಗುತ್ತಿದೆ. ಜತೆಗೆ ಆಗಸದಲ್ಲೇ ಡ್ರೋನ್‌ ನಾಶ ಮಾಡುವ ತರಬೇತಿಯನ್ನೂ ನೀಡಲಾಗಿದೆ.

ಇದುವರೆಗೆ ಸೇನೆಯು ಶ್ವಾನಗಳನ್ನು ಮಾತ್ರ ಶತ್ರುಗಳ ಸಂಹಾರ, ಬಾಂಬ್ ಪತ್ತೆ, ಉಗ್ರರ ಅಡಗುತಾಣಗಳ ಪತ್ತೆಗಾಗಿ ಬಳಸಿಕೊಳ್ಳುತ್ತಿತ್ತು. ಇದೇ ಮೊದಲ ಬಾರಿಗೆ ಗಿಡುಗವನ್ನು ಶತ್ರು ರಾಷ್ಟ್ರಗಳ ಉಪಟಳ ನಿಯಂತ್ರಣಕ್ಕೆ ಬಳಸಿಕೊಳ್ಳಲಾಗುತ್ತಿದೆ.

ಗಿಡುಗನ ಬಳಕೆಯಿಂದ ಭಾರತೀಯ ಸೇನೆಗೆ ಡ್ರೋನ್‌ ನಿಯಂತ್ರಣದಲ್ಲಿ ದೊಡ್ಡ ಬಲ ಬಂದಂತಾಗಿದೆ. ಪಾಕಿಸ್ತಾನದೊಂದಿಗೆ ಗಡಿ ಹಂಚಿಕೊಂಡಿರುವ ರಾಜ್ಯಗಳಾದ ಪಂಜಾಬ್, ಜಮ್ಮು ಕಾಶ್ಮೀರದಲ್ಲಿ ಹೆಚ್ಚು ಅನುಕೂಲವಾಗಲಿದೆ ಎಂದು ಸೇನಾಧಿಕಾರಿಗಳು ಹೇಳಿದ್ದಾರೆ.

ಇತ್ತೀಚೆಗೆ ಅಂತಾರಾಷ್ಟ್ರೀಯ ಗಡಿ ರೇಖೆಯಲ್ಲಿ ಪಾಕ್ ಡ್ರೋನ್‌ ಉಪಟಳ ಹೆಚ್ಚಾಗಿದ್ದು, ಗಡಿಯೊಳಗೆ ಶಸ್ತ್ರಾಸ್ತ್ರ `ಡ್ರಗ್ಸ್‌, ಹಣವನ್ನು ಎಸೆದು ಉಗ್ರರಿಗೆ ಅನುಕೂಲ ಮಾಡಿಕೊಡಲಾಗುತ್ತಿದೆ. ನ. 24ರಂದು ಜಮ್ಮು ಕಾಶ್ಮೀರದ ಪೊಲೀಸರು ಸಂಭಾ ಜಿಲ್ಲೆಯಲ್ಲಿ ಶಸ್ತ್ರಾಸ್ತ್ರಗಳನ್ನು ಹೊತ್ತು ತಂದಿದ್ದ ಪಾಕ್ ಡ್ರೋನ್‌ನ್ನು ಹೊಡೆದುಹಾಕಿದ್ದರು.

vtv vitla
- Advertisement -

Related news

error: Content is protected !!