Thursday, April 25, 2024
spot_imgspot_img
spot_imgspot_img

ಗಡಿ ವಿವಾದದ ಹಿನ್ನಲೆ; ಕರ್ನಾಟಕಕ್ಕೆ ಸರ್ಕಾರಿ ಬಸ್ ಸಂಚಾರ ಸ್ಥಗಿತಗೊಳಿಸಿದ ಮಹಾರಾಷ್ಟ್ರ

- Advertisement -G L Acharya panikkar
- Advertisement -
vtv vitla

ಮುಂಬೈ: ಗಡಿ ವಿವಾದದ ಹಿನ್ನೆಲೆಯಲ್ಲಿ ನಡೆಯುತ್ತಿರುವ ಪ್ರತಿಭಟನೆ ಬೆನ್ನಲ್ಲೇ ಪೊಲೀಸರ ಸಲಹೆ ಮೇರೆಗೆ ಮಹಾರಾಷ್ಟ್ರ ರಾಜ್ಯ ಸಾರಿಗೆ ಸಂಸ್ಥೆಯು(ಎಂಎಸ್‌ಆರ್‌ಟಿಸಿ) ಕರ್ನಾಟಕಕ್ಕೆ ಬಸ್ ಸೇವೆಯನ್ನು ಸ್ಥಗಿತಗೊಳಿಸಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಪಿಟಿಐ ಜೊತೆ ಮಾತನಾಡಿದ ಎಂಎಸ್‌ಆರ್‌ಟಿಸಿ ಉಪಾಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ಶೇಖರ್ ಚನ್ನೆ, “ಕರ್ನಾಟಕಕ್ಕೆ ಪ್ರಯಾಣಿಸುವ ಪ್ರಯಾಣಿಕರ ಸುರಕ್ಷತೆ ಮತ್ತು ಅವರಿಗೆ ಆಗಬಹುದಾದ ನಷ್ಟ ತಡೆಗೆ ಈ ಕ್ರಮ ಕೈಗೊಳ್ಳಲಾಗಿದೆ” ಎಂದು ಅವರು ತಿಳಿಸಿದ್ದಾರೆ. ಪೊಲೀಸರ ಸಲಹೆ ಮೇರೆಗೆ ಮಂಗಳವಾರ ಮಧ್ಯಾಹ್ನದಿಂದ ಬಸ್ ಸೇವೆ ಸ್ಥಗಿತಗೊಳಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ. ಆದರೆ, ಬಸ್ ಸೌಲಭ್ಯ ಎಲ್ಲಿಯವರೆಗೆ ಸ್ಥಗಿತಗೊಳ್ಳಲಿದೆ ಎಂಬ ಬಗ್ಗೆ ಮಾಹಿತಿ ಸಿಕ್ಕಿಲ್ಲ.

ಗಡಿ ವಿಚಾರವಾಗಿ ಮಹಾರಾಷ್ಟ್ರದ ನಿಲುವು ಖಂಡಿಸಿ ಕರ್ನಾಟಕ ರಕ್ಷಣಾ ವೇದಿಕೆ ಹಿರೇಬಾಗೆವಾಡಿಯಲ್ಲಿ ಪ್ರತಿಭಟನೆ ನಡೆಸಿತು. ಕರವೇ ಅಧ್ಯಕ್ಷ ನಾರಾಯಣ ಗೌಡ ಸೇರಿದಂತೆ ಹಲವು ಕಾರ್ಯಕರ್ತರನ್ನು ಪೊಲೀಸರು ಇಲ್ಲಿನ ಟೋಲ್‌ಗೇಟ್‌ ಬಳಿಯೇ ವಶಕ್ಕೆ ಪಡೆದರು. ಕಾರ್‌, ಜೀಪ್‌ ಸೇರಿದಂತೆ 110 ವಾಹನಗಳಲ್ಲಿ ಬೆಳಗಾವಿಯತ್ತ ಬಂದ 400ಕ್ಕೂ ಹೆಚ್ಚು ಕಾರ್ಯಕರ್ತರನ್ನು ಪೊಲೀಸರು ಹಿರೇಬಾಗೇವಾಡಿಯ ರಾಷ್ಟ್ರೀಯ ಹೆದ್ದಾರಿ ಮೇಲೆ ತಡೆದರು. ದೂರದಲ್ಲೇ ವಾಹನ ನಿಲ್ಲಿಸಿ ಪ್ರತಿಭಟನಾ ರ್‍ಯಾಲಿ ಆರಂಭಿಸಿದ ಕಾರ್ಯಕರ್ತರು, ಟೋಲ್‌ಗೇಟ್‌ ದಾಟಿ ಬೆಳಗಾವಿಯತ್ತ ನುಗ್ಗಲು ಯತ್ನಿಸಿದರು. ಬ್ಯಾರಿಕೇಡ್‌ಗಳನ್ನು ಇಟ್ಟು, ಲಾಠಿ ಹಿಡಿದು ಸಜ್ಜುಗೊಂಡಿದ್ದ ಪೊಲೀಸರು ಎಲ್ಲರನ್ನೂ ತಡೆದರು. ತೀವ್ರ ಆಕ್ರೋಶಗೊಂಡ ಕಾರ್ಯಕರ್ತರು ಪೊಲೀಸರ ವಿರುದ್ಧ ಘೋಷಣೆ ಮೊಳಗಿಸಿದರು.‌

- Advertisement -

Related news

error: Content is protected !!