Tuesday, June 23, 2026
spot_imgspot_img
spot_imgspot_img

ಗನ್​ ಜೊತೆ ಸೆಲ್ಫೀ ಕ್ಲಿಕ್ಕಿಸುವಾಗ ಹಣೆಗೆ ಆಕಸ್ಮಿಕವಾಗಿ ಗುಂಡು ಹಾರಿ ಬಾಲಕ ಸಾವು!

- Advertisement -
- Advertisement -
vtv vitla
vtv vitla

ಮೀರತ್: ಕೆಲವೊಮ್ಮೆ ಸೆಲ್ಫೀ ಹುಚ್ಚು ಪ್ರಾಣವನ್ನೇ ಬಲಿ ಪಡೆಯುತ್ತದೆ. ಜಲಪಾತ, ಬೆಟ್ಟದ ತುದಿಯಲ್ಲಿ ನಿಂತು ಸೆಲ್ಫೀ ಕ್ಲಿಕ್ಕಿಸಿಕೊಳ್ಳಲು ಹೋಗಿ ಕೆಳಗೆ ಬಿದ್ದು ಸಾವನ್ನಪ್ಪಿರುವ ಎಷ್ಟೋ ಘಟನೆಗಳು ನಡೆದಿವೆ. ಆದರೆ, ವಿಚಿತ್ರ ಪ್ರಕರಣವೊಂದರಲ್ಲಿ ಲೋಡ್ ಆಗಿರುವ ಗನ್​ ಜೊತೆ ನಿಂತು ಸೆಲ್ಫೀ ಕ್ಲಿಕ್ಕಿಸಿಕೊಳ್ಳುತ್ತಿದ್ದಾಗ ಅನಿರೀಕ್ಷಿತವಾಗಿ ಗುಂಡು ಹಾರಿ, ಬಾಲಕ ಸಾವನ್ನಪ್ಪಿರುವ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ. ಮೊಬೈಲ್ ಸೆಲ್ಫೀಯಿಂದ ಬಾಲಕನ ಪ್ರಾಣವೇ ಹಾರಿಹೋಗಿದೆ.

ಉತ್ತರ ಪ್ರದೇಶದ 14 ವರ್ಷದ ಬಾಲಕ ಉವೈಶ್​ ಅಹಮದ್ ತನ್ನ ಅಣ್ಣ 19 ವರ್ಷದ ಸುಹೇಲ್ ಅಹಮದ್ ಜೊತೆಗೆ ಶೇಂಗಾ ತಿನ್ನಲು ಹೋಗಿದ್ದ. ಅಣ್ಣ ಸುಹೇಲ್ ಶೇಂಗಾ ಖರೀದಿಸಲು ಹೋದಾಗ ಆತನ ತಮ್ಮ ಉವೈಶ್ ಅಹಮದ್ ಲೋಡೆಡ್​ ಗನ್​ನೊಂದಿಗೆ ಆಟವಾಡುತ್ತಿದ್ದ. ಗನ್ ಅನ್ನು ತನ್ನ ಹೆಣೆಯ ಬಳಿ ಇಟ್ಟುಕೊಂಡು ಸೆಲ್ಫೀ ಕ್ಲಿಕ್ಕಿಸಿಕೊಳ್ಳಲು ನೋಡಿದ್ದ. ಆಗ ಅನಿರೀಕ್ಷಿತವಾಗಿ ಗನ್​ನಿಂದ ಗುಂಡು ಹಾರಿದೆ. ಆತನ ಅಣ್ಣ ವಾಪಾಸ್ ಬರುವಷ್ಟರಲ್ಲಿ ಉವೈಶ್ ರಕ್ತದ ಓಕುಳಿಯಲ್ಲಿ ಬಿದ್ದಿದ್ದ.

vtv vitla
vtv vitla

ಮೀರತ್​​ನಲ್ಲಿ ಈ ಘಟನೆ ನಡೆದಿದ್ದು, ಗನ್​ನಿಂದ ಗುಂಡು ಹಾರಿ ಉವೈಶ್ ಅಹಮದ್ ಸಾವನ್ನಪ್ಪಿದ್ದಾನೆ. ಆದರೆ, ಮೂರನೇ ವ್ಯಕ್ತಿ ಗುಂಡು ಹಾರಿಸಿ ಉವೈಶ್​ ಅಹಮದ್​ನನ್ನು ಕೊಲೆ ಮಾಡಿದ್ದಾರೆ ಎಂಬ ವದಂತಿಗಳು ಹರಿದಾಡಿದ್ದವು. ಆದರೆ, ಪೊಲೀಸರ ತನಿಖೆಯಿಂದ ಆ ಬಾಲಕನೇ ಅನಿರೀಕ್ಷಿತವಾಗಿ ಟ್ರಿಗರ್ ಎಳೆದು ಗುಂಡು ಹಾರಿಸಿಕೊಂಡಿದ್ದಾನೆ ಎಂಬುದು ಖಚಿತವಾಗಿದೆ.

- Advertisement -

Related news

error: Content is protected !!