Thursday, June 18, 2026
spot_imgspot_img
spot_imgspot_img

‘ಗರುಡ ಗಮನ ವೃಷಭ ವಾಹನ’ ಚಿತ್ರಕ್ಕೆ ಪರಭಾಷೆಗಳಿಂದ ಬೇಡಿಕೆ.!

- Advertisement -
- Advertisement -

vtv vitla

‘ಗರುಡ ಗಮನ ವೃಷಭ ವಾಹನ’ ಸಿನಿಮಾ ಯಶಸ್ಸು ಕಂಡಿದೆ. ಆಂಧ್ರಪ್ರದೇಶದಲ್ಲಿ ಹೌಸ್ ಫುಲ್ ಪ್ರದರ್ಶನ ಆಗುತ್ತಾ ಇದೆ. ಇದು ದೊಡ್ಡ ಸಾಧನೆ ಅನ್ನಿಸುತ್ತಿದೆ. ಬೆಂಗಳೂರು, ಮೈಸೂರು ಮತ್ತು ಕರಾವಳಿಯಲ್ಲಿ ಚಿತ್ರ ಹೌಸ್​​ಫುಲ್ ಪ್ರದರ್ಶನ ಆಗುತ್ತಾ ಇದೆ ಎಂದರು ರಿಷಬ್​ ಶೆಟ್ಟಿ.

ಚಿತ್ರತಂಡ ಪರಭಾಷೆಯಿಂದ ಸಿನಿಮಾಗೆ ಬೇಡಿಕೆ ಬರುತ್ತಿರುವ ವಿಚಾರವನ್ನು ಬಹಿರಂಗ ಮಾಡಿದರು.’ಬೇರೆ ಬೇರೆ ಭಾಷೆಗಳಿಂದ ಡಬ್ಬಿಂಗ್ ರೈಟ್ಸ್​ ಹಾಗೂ ರಿಮೇಕ್​​ಗೆ ಬೇಡಿಕೆ ಬರುತ್ತಿದೆ. ಮುಂದಿನ ವಾರದಲ್ಲಿ ಈ ಬಗ್ಗೆ ಮಾತುಕತೆ ನಡೆಯಲಿದೆ. ನಾವು ಬಹಳಷ್ಟು ಕಷ್ಟಪಟ್ಟು ಚಿತ್ರವನ್ನು ತಯಾರು ಮಾಡಿದ್ದೇವೆ. ಕೆಲ ವ್ಯಕ್ತಿಗಳು ಮೊಬೈಲ್​​ನಲ್ಲಿ ಶೂಟಿಂಗ್ ಮಾಡಿ ಪೈರಸಿ ಮಾಡಿಬಿಟ್ಟಿದ್ದಾರೆ. ಚಿತ್ರ ಬಿಡುಗಡೆಗೆ ಮುನ್ನವೇ ನಾವು ಕಾನೂನು ರೀತಿಯಲ್ಲಿ ಎಲ್ಲಾ ಸಿದ್ಧತೆಗಳನ್ನು ಮಾಡಿಕೊಂಡಿದ್ದೇವೆ. ತಪ್ಪಿತಸ್ಥರಿಗೆ ಶಿಕ್ಷೆ ಆಗುತ್ತದೆ. ಪೈರಸಿ ಚಿತ್ರಗಳನ್ನು ನೋಡಬೇಡಿ. ಥಿಯೇಟರ್​​ಗೆ ಬಂದು ಶ್ರಮಕ್ಕೆ ಬೆಂಬಲ ಕೊಡಿ’ ಎಂದು ರಾಜ್ ಬಿ. ಶೆಟ್ಟಿ ಮನವಿ ಮಾಡಿದರು.

‘ಮುಂದಿನ ಪ್ರಾಜೆಕ್ಟ್ ಬಗ್ಗೆ ಸದ್ಯ ಯಾವುದೇ ಯೋಚನೆ ಇಲ್ಲ. ತಿರುಗಾಟ ಮುಗಿಸಿ 15 ದಿನ ರಿಲೀಫ್ ಮಾಡಿಕೊಳ್ಳಬೇಕಾಗಿದೆ. ಮಂಗಳೂರಿನಲ್ಲಿ ಗೆಳೆಯರ ಜೊತೆ ವಾಲಿಬಾಲ್ ಆಡುತ್ತೇನೆ’ ಎಂದು ರಾಜ್ ಶೆಟ್ಟಿ ಹೇಳಿದ್ದಾರೆ.

- Advertisement -

Related news

error: Content is protected !!