Tuesday, April 23, 2024
spot_imgspot_img
spot_imgspot_img

ಗುರುವಿಗಾಗಿ ಕ್ಷೇತ್ರ ತ್ಯಾಗ ಮಾಡಿ, ಹಿಂದುತ್ವ ಏನು ಎನ್ನುವುದನ್ನು ತೋರಿಸಿಕೊಡುತ್ತೇನೆ; ಶಿಷ್ಯನಿಗೆ ಪ್ರಮೋದ್‌ ಮುತಾಲಿಕ್‌ ಸವಾಲ್‌

- Advertisement -G L Acharya panikkar
- Advertisement -
vtv vitla

ಕಾರ್ಕಳ: ರಾಜ್ಯದ ಒಬ್ಬನೇ ಒಬ್ಬ ಸಂಸದರಾಗಲಿ, ಶಾಸಕರಾಗಲಿ ಸದನದಲ್ಲಿ ಹಿಂದುತ್ವದ ಪರ ಧ್ವನಿ ಎತ್ತುತ್ತಿಲ್ಲ ಎಂದು ತೀವ್ರ : ಆಕ್ರೋಶ ವ್ಯಕ್ತಪಡಿಸಿರುವ ಶ್ರೀರಾಮ ಸೇನೆಯ ಸಂಸ್ಥಾಪಕ ಪ್ರಮೋದ್ ಮುತಾಲಿಕ್, ನನಗೊಮ್ಮೆ ಕಾರ್ಕಳದಲ್ಲಿ ಶಾಸಕನಾಗುವ ಅವಕಾಶ ಕೊಟ್ಟು ನೋಡಿ, ಗೋಹತ್ಯೆ, ಮತಾಂತರ, ಲವ್ ಜಿಹಾದ್ ಎಲ್ಲವನ್ನು ಹೆಡೆಮುರಿ ಕಟ್ಟಿ ಹಿಂದುತ್ವ ಎಂದರೇನಂದು ತೋರಿಸುತ್ತೇನೆ ಎಂದು ಹೇಳಿದ್ದಾರೆ.

ಅವರು ಇಲ್ಲಿನ ಅಜೆಕಾರಿನಲ್ಲಿ ಅಭಿಮಾನಿ ಬಳಗದ ಸಭೆಯನ್ನು ಉದ್ದೇಶಿಸಿ ಮಾತನಾಡಿದರು. ನಾನು ಕಾರ್ಕಳದಿಂದ ವಿಧಾನಸಭೆಗೆ ಸ್ಪರ್ಧಿಸುವುದಾಗಿ ಹೇಳಿದಾಗಿನಿಂದ ನನ್ನ ಬಗ್ಗೆ ಅಪಪ್ರಚಾರ ನಡೆಸಲಾಗುತ್ತಿದೆ. ಹಿಂದುತ್ವಕ್ಕಾಗಿ ನಾನು ಸಾಕಷ್ಟು ಆರೋಪಗಳನ್ನು ಎದುರಿಸಿದ್ದೇನೆ, ಸಂಕಷ್ಟ ಅನುಭವಿಸಿದ್ದೇನೆ, ಮುಖಕ್ಕೆ ಬಳಿಸಿಕೊಂಡಿದ್ದೇನೆ, ಆದರೆ ಅದಕ್ಕೆಲ್ಲಾ ಚುನಾವಣೆಯಲ್ಲಿ ಉತ್ತರ ನೀಡುತ್ತೇನೆ ಎಂದರು.

ರಾಜ್ಯದಲ್ಲಿ ಅಭಿವೃದ್ಧಿಯ ಹಿಂದೆ ಭಾರಿ ಭ್ರಷ್ಟಾಚಾರ ಈ ನಡೆಯುತ್ತಿದೆ. ಗೆದ್ದವರು ಬೇನಾಮಿ ಆಸ್ತಿ, ಅಕ್ರಮ ಕ್ರಷರ್, ಭ್ರಷ್ಟಾಚಾರಗಳಲ್ಲಿ ತೊಡಗಿಕೊಂಡಿದ್ದಾರೆ ಎಂದು ಆರೋಪಿಸಿದ ಮುತಾಲಿಕ್, ತಾನು ಶಾಸಕನಾದರೆ ಮುಂದಿನ ದಿನಗಳಲ್ಲಿ ಸಾಲುಸಾಲು ಭ್ರಷ್ಟಾಚಾರ ಹೊರಬರಲಿದೆ ಎಂದರು.

ಇಂದು ಕೇಂದ್ರದಿಂದ ಹಿಡಿದು ಹಳ್ಳಿಯವರೆಗೂ ನಿಮ್ಮದೇ ಸರಕಾರವಿದ್ದರೂ ನಿಮಗೆ ಮತಾಂತರ, ಗೋಹತ್ಯೆ , ಲವ್ ಜಿಹಾದ್ ಮಟ್ಟ ಹಾಕಲು ಸಾಧ್ಯವಾಗಿಲ್ಲ , ಗೋವುಗಳ ರಕ್ಷಣೆ ಮಾಡಿದವರ ವಿರುದ್ಧ ರೌಡಿಶೀಟರ್ ತೆರೆದು ಹಿಂದುತ್ವಕ್ಕೆ ದ್ರೋಹ ಮಾಡಿದ್ದೀರಿ,ಸಂಘ ಪರಿವಾರದಿಂದ ರಾಜಕಾರಣಕ್ಕೆ ಬಂದವರು ಇಂದು ರಾಜಕಾರಣಕ್ಕಾಗಿ, ವ್ಯವಹಾರಕ್ಕಾಗಿ ಹಿಂದುತ್ವವನ್ನು ಬಳಸಿಕೊಳ್ಳುತ್ತಿದ್ದಾರೆ, ಕಾರ್ಕಳದ ಬಿಜೆಪಿ ಮುಖಂಡ ಹಾಗೂ ವಕೀಲರೊಬ್ಬರು ಗೋರಕ್ಷಕರನ್ನು ಬಿಡಿಸುವ ಬದಲು ಗೋಕಳ್ಳತನ ಪ್ರಕರಣದಲ್ಲಿ ಭಾಗಿಯಾದ ಆರೋಪಿಗಳಿಗೆ ಜಾಮೀನು ಕೊಡಿಸುತ್ತಾರೆ, ಇದನ್ನು ಪ್ರಶ್ನಿಸಿದರೆ ವೃತ್ತಿಧರ್ಮ ಎನ್ನುವ ನೀವು ದುಡ್ಡು ಕೊಟ್ಟರೆ ನಾಳೆ ಬಾಂಬ್ ಹಾಕುವ ಉಗ್ರನಿಗೂ ಜಾಮೀನು ಕೊಡಿಸುತ್ತಿರಾ ಎಂದು ಖಾರವಾಗಿ ಪ್ರಶ್ನಿಸಿದರು.

ಸಾವಿರಾರು ಕಾರ್ಯಕರ್ತರ ಬೆವರಿನ ಹನಿ, ಪರಿಶ್ರಮದ ಫಲವಾಗಿ ನೀವು ಕಾರ್ಕಳದಲ್ಲಿ 20 ವರ್ಷಗಳಿಂದ ರಾಜಕಾರಣ ಮಾಡಿದ್ದೀರಿ, ಇಂದು ಎರಡೆರಡು ಸಚಿವ ಸ್ಥಾನವನ್ನು ಗಿಟ್ಟಿಸಿಕೊಂಡು ನಿಮ್ಮನ್ನು ಉನ್ನತ ಸ್ಥಾನಕ್ಕೆ ಏರಿಸಿರುವ ಕಾರ್ಯಕರ್ತರನ್ನು ಹಾಗೂ ಹಿಂದುತ್ವದ ಸಿದ್ದಾಂತವನ್ನು ಮರೆತ ಪರಿಣಾಮವಾಗಿ ಕಾರ್ಯಕರ್ತರ ಆಕ್ರೋಶವನ್ನು ಎದುರಿಸಲಾಗದೇ ಅವರನ್ನು ಬೆದರಿಸುವ ತಂತ್ರಕ್ಕೆ ಕೈ ಹಾಕುವ ದುಸ್ಸಾಹಸಕ್ಕೆ ಕೈ ಹಾಕಿದರೆ ಪರಿಣಾಮ ಎದುರಿಸಬೇಕಾದೀತು ಎಂದು ಪರೋಕ್ಷವಾಗಿ ಸಚಿವ ಸುನಿಲ್ ಕುಮಾರ್ ಅವರಿಗೆ ಶ್ರೀ ರಾಮ ಸೇನೆ ಸಂಸ್ಥಾಪಕ ಪ್ರಮೋದ್‌ ಮುತಾಲಿಕ್ ಎಚ್ಚರಿಸಿದರು.

ಕರೆ ಸಂಘವು ನನಗೆ ರಾಷ್ಟ್ರಪ್ರೇಮ, ಹಿಂದುತ್ವದ ರಕ್ಷಣೆಯ ಪಾಠವನ್ನು ಕಲಿಸಿದೆ. ಹಿಂದೂ ಕಾರ್ಯಕರ್ತರೇ ನನ್ನ ಆಸ್ತಿ, ಅವರ ನೋವಿಗೆ ಧ್ವನಿಯಾಗಲು ಕಾರ್ಕಳಕ್ಕೆ ಬಂದಿದ್ದೇನೆ. ನನಗೆ ಹಣ, ಆಸ್ತಿ ಮಾಡುವ ಉದ್ದೇಶವಿಲ್ಲ. ಆದ್ದರಿಂದ ಈ ಬಾರಿ ಗುರುವಿಗಾಗಿ ಕ್ಷೇತ್ರ ತ್ಯಾಗ ಮಾಡಿ ಮುಂದಿನ 5 ವರ್ಷಗಳಲ್ಲಿ ಹಿಂದುತ್ವ ಏನು ಎನ್ನುವುದನ್ನು ತೋರಿಸಿಕೊಡುತ್ತೇನೆ ಎಂದು ಪ್ರಮೋದ್‌ ಮುತಾಲಿಕ್‌, ಸಚಿವ ಸುನೀಲ್ ಕುಮಾರ್‌ ಹೇಳಿದರು.

- Advertisement -

Related news

error: Content is protected !!