- Advertisement -
- Advertisement -


ಬೆಂಗಳೂರು: ಗೃಹ ಸಚಿವರ ಹೆಸರಲ್ಲಿ ಡ್ಯಾನ್ಸ್ ಬಾರ್ಗಳಿಗೆ ಲೈಸೆನ್ಸ್ ಕೊಡಿಸುವುದಾಗಿ ಹೇಳಿ ವಂಚನೆ ಮಾಡುತ್ತಿದ್ದ ಆರೋಪಿಯನ್ನು ಸಿಸಿಬಿ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಬಂಧಿತ ಆರೋಪಿ ಭವಾನಿರಾವ್ ಮೋರೆ ಎಂದು ತಿಳಿದುಬಂದಿದೆ.

ಭವಾನಿರಾವ್ ಮೋರೆ ಎಂಬಾತ ಸುರೇಶ್ ಎಂಬುವರಿಂದ 25 ಲಕ್ಷ ರೂಪಾಯಿ ಪಡೆದು ವಂಚನೆ ಮಾಡಿದ್ದ ಎಂಬ ಆರೋಪ ಕೇಳಿಬಂದಿದೆ. ಸುರೇಶ್ ಅವರ ದೂರನ್ನು ಆಧರಿಸಿ ಶಿವಮೊಗ್ಗದಲ್ಲಿ ಆರೋಪಿಯನ್ನು ವಶಕ್ಕೆ ಪಡೆಯಲಾಗಿದೆ.
ಭವಾನಿರಾವ್ ಮೋರೆ ಎಂಬಾತ ಶಿವಮೊಗ್ಗದಲ್ಲಿ ಬಿಜೆಪಿ ನಾಯಕರ ಜತೆ ಗುರುತಿಸಿಕೊಂಡಿದ್ದ ಎಂದು ತಿಳಿದುಬಂದಿದೆ. ಆರ್.ಆರ್. ನಗರ ವಿಧಾನಸಭಾ ಕ್ಷೇತ್ರದ ವಿಸ್ತಾರಕನಾಗಿದ್ದ ಭವಾನಿರಾವ್ ಮೋರೆ, ಸದ್ಯ ಕೆಪಿಟಿಸಿಎಲ್ ನಿರ್ದೇಶಕನಾಗಿದ್ದ. ಇದೀಗ ಕಬ್ಬನ್ಪಾರ್ಕ್ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲು ಮಾಡಲಾಗಿದೆ.



- Advertisement -








