Tuesday, April 30, 2024
spot_imgspot_img
spot_imgspot_img

ಗೋಣಿಚೀಲದಲ್ಲಿ ಖ್ಯಾತ ನಟಿಯ ಶವ ಕೊಳೆತ ಸ್ಥಿತಿಯಲ್ಲಿ ಪತ್ತೆ..!

- Advertisement -G L Acharya panikkar
- Advertisement -

ಕೆಲವು ದಿನಗಳ ಹಿಂದೆ ನಾಪತ್ತೆಯಾಗಿದ್ದ ಖ್ಯಾತ ನಟಿಯೊಬ್ಬರ ಶವ ಢಾಕಾದ ಹೊರವಲಯದಲ್ಲಿ ಗೋಣಿಚೀಲವೊಂದರಲ್ಲಿ ಅರೆಬರೆ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದೆ. ಕೊಲೆಯಾದ ಮಹಿಳೆ ಬಾಂಗ್ಲಾದೇಶದ ನಟಿ ರೈಮಾ ಇಸ್ಲಾಂ ಶಿಮು ಎಂದು ಗುರುತಿಸಲಾಗಿದೆ

ರೈಮಾ ಇಸ್ಲಾಂ ಶಿಮು ನಾಪತ್ತೆಯಾದ ಹಿನ್ನೆಲೆಯಲ್ಲಿ ಅವರ ಸಂಬಂಧಿಕರು ಭಾನುವಾರ ಕಲಬಾಗನ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಸ್ಥಳೀಯರು ಈ ಕುರಿತು ಮಾಹಿತಿ ನೀಡಿದ ನಂತರ ಕೆರಣಿಗಂಜ್ ಮಾದರಿ ಠಾಣೆಯ ಪೊಲೀಸರ ತಂಡ ಮೃತದೇಹವನ್ನು ಹೊರತೆಗೆದಿದೆ.

ರೈಮಾ ಇಸ್ಲಾಂ ಶಿಮು – Public TV
vtv vitla

ಬಾಂಗ್ಲಾದೇಶದ ನಟಿ ರೈಮಾ ದೇಹದ ಮೇಲೆ ಹಲವು ಗಾಯದ ಗುರುತುಗಳಿವೆ. ರೈಮಾ ಇಸ್ಲಾಂ ಶಿಮು ಅವರನ್ನು ಕೊಲೆ ಮಾಡಿ, ನಂತರ ಅವರ ಮೃತದೇಹವನ್ನು ಸೇತುವೆಯ ಬಳಿ ಎಸೆದಿದ್ದು, ಶವವನ್ನು ಮರಣೋತ್ತರ ಪರೀಕ್ಷೆಗಾಗಿ ಸರ್ ಸಲೀಮುಲ್ಲಾ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ (ಎಸ್‌ಎಸ್‌ಎಂಸಿಎಚ್) ಕಳುಹಿಸಲಾಗಿದೆ.

Raima Islam Shimu

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ರೈಮಾ ಇಸ್ಲಾಂ ಶಿಮು ಅವರ ಪತಿ ಶೇಖಾವತ್ ಅಲಿ ನೊಬೆಲ್ ಮತ್ತು ಅವರ ಚಾಲಕನನ್ನು ವಿಚಾರಣೆಗಾಗಿ ವಶಕ್ಕೆ ತೆಗೆದುಕೊಳ್ಳಲಾಗಿದ್ದು, ವಿಚಾರಣೆ ವೇಳೆ ನೊಬೆಲ್ ತಾನೇ ತನ್ನ ಹೆಂಡತಿ ರೈಮಾಳನ್ನು ಕೊಲೆ ಮಾಡಿರುವುದಾಗಿ ಒಪ್ಪಿಕೊಂಡಿದ್ದಾನೆ.

ಆದರೆ ಹತ್ಯೆಗೆ ಕಾರಣಗಳೇನು ಎಂಬುದು ಇನ್ನು ತಿಳಿದು ಬಂದಿಲ್ಲ. ಇನ್ನು ಈ ಕೃತ್ಯದಲ್ಲಿ ಹಲವು ಬಾಂಗ್ಲಾ ಕಲಾವಿದರ ಕೈವಾಡವಿದೆ ಎಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ.

vtv vitla
vtv vitla
- Advertisement -

Related news

error: Content is protected !!