Friday, May 3, 2024
spot_imgspot_img
spot_imgspot_img

ಗೋವಾ ಸ್ವಾತಂತ್ರ್ಯ ಹೋರಾಟದಲ್ಲಿ ಹುತಾತ್ಮರಾದವರಿಗೆ ಪ್ರಧಾನಿ ಮೋದಿಯವರಿಂದ ಪುಷ್ಪನಮನ

- Advertisement -G L Acharya panikkar
- Advertisement -
vtv vitla
vtv vitla

ಗೋವಾ ವಿಮೋಚನಾ ದಿನ ಕಾರ್ಯಕ್ರಮದಲ್ಲಿ ಭಾಗಿಯಾಗಿರುವ ಪ್ರಧಾನಮಂತ್ರಿ ನರೇಂದ್ರ ಮೋದಿ ವಿವಿಧ ಅಭಿವೃದ್ಧಿ ಯೋಜನೆಗಳನ್ನು ಉದ್ಘಾಟಿಸಿದರು. ಹಾಗೇ, ಗೋವಾ ಸ್ವಾತಂತ್ರ್ಯ ಹೋರಾಟದಲ್ಲಿ ಹುತಾತ್ಮರಾದವರ ಸ್ಮಾರಕಕ್ಕೆ ಆಜಾದ್ ಮೈದಾನಲ್ಲಿ ಪುಷ್ಪನಮನ ಸಲ್ಲಿಸಿದರು. 1961ರ ಡಿಸೆಂಬರ್​ 19ರಂದು ಗೋವಾ ಪೋರ್ಚುಗೀಸರ ಆಡಳಿತದಿಂದ ಮುಕ್ತವಾಗಿದೆ. ಹೀಗಾಗಿ ಇಲ್ಲಿ ಪ್ರತಿವರ್ಷವೂ ಡಿಸೆಂಬರ್​ 19ರಂದು ವಿಮೋಚನಾ ದಿನವನ್ನು ಆಚರಿಸಲಾಗುತ್ತದೆ. ಈ ಬಾರಿ 60ನೇ ವರ್ಷದ ಸ್ವಾತಂತ್ರ್ಯ ದಿನ ನಡೆಯುತ್ತಿದ್ದು, ಮಧ್ಯಾಹ್ನದ ಹೊತ್ತಿಗೆ ಪ್ರಧಾಗಿ ಮೋದಿ ಗೋವಾ ತಲುಪಿ, ಕಾರ್ಯಕ್ರಮಗಳಲ್ಲಿ ಪಾಲ್ಗೊಂಡಿದ್ದಾರೆ. ಮುಂದಿನ ವರ್ಷ ನಡೆಯಲಿರುವ ಗೋವಾ ವಿಧಾನಸಭೆ ಚುನಾವಣೆ ದೃಷ್ಟಿಯಿಂದ, ಪ್ರಧಾನಿ ಮೋದಿಯವರ ಈ ಭೇಟಿ ಮಹತ್ವದ್ದಾಗಿದೆ.

ನಿನ್ನೆ ಮಧ್ಯಾಹ್ನ 1.30ರ ಹೊತ್ತಿಗೆ ತಲುಪಿದ ಪ್ರಧಾನಮಂತ್ರಿ ನರೇಂದ್ರ ಮೋದಿಯವರನ್ನು ಗೋವಾ ಮುಖ್ಯಮಂತ್ರಿ ಪ್ರಮೋದ್ ಸಾವಂತ್ ಬರಮಾಡಿಕೊಂಡರು. ಅಲ್ಲಿಂದಲೇ ಪಣಜಿಯ ಆಜಾದ್ ಮೈದಾನಕ್ಕೆ ತೆರಳಿದ ಅವರು, ಸ್ವಾತಂತ್ರ್ಯ ಹೋರಾಟದಲ್ಲಿ ಹುತಾತ್ಮರಾದವರಿಗೆ ಗೌರವ ಸಲ್ಲಿಸಿದರು. ಅಲ್ಲಿಂದ ಮಿರಾಮರ್ ಬೀಚ್​​ಗೆ ತೆರಳಿ, ಸೇಲ್ ಪರೇಡ್​ ಮತ್ತು ಫ್ಲೈಪಾಸ್ಟ್ (ಏರ್​ಕ್ರಾಫ್ಟ್ ಗೌರವಾನ್ವಿತ ಹಾರಾಟ) ಗೌರವ ಪಡೆದರು. ಅಲ್ಲಿಂದ, ಗೋವಾ ವಿಮೋಚನಾ ದಿನದ ಮುಖ್ಯ ಕಾರ್ಯಕ್ರಮದಲ್ಲಿ ಭಾಗವಹಿಸಲು ಡಾ. ಶ್ಯಾಮ ಪ್ರಸಾದ್ ಮುಖರ್ಜಿ ಸ್ಟೇಡಿಯಂಗೆ ತೆರಳಿದ್ದಾರೆ. ಇಲ್ಲಿ ನಡೆದ ಸಮಾರಂಭದಲ್ಲಿ ನರೇಂದ್ರ ಮೋದಿ ಸ್ವಾತಂತ್ರ್ಯ ಹೋರಾಟಗಾರರನ್ನು ಸನ್ಮಾನಿಸಿದರು. ಹಾಗೇ, ನಬಾರ್ಡ್​, ಎನ್​ಜಿಒಗಳ ಸಿಬ್ಬಂದಿಗೆ ಪ್ರಶಸ್ತಿ ಪುರಸ್ಕಾರ ಮಾಡಿದರು.

vtv vitla
vtv vitla

ಐದು ಯೋಜನೆಗಳಿಗೆ ಚಾಲನೆ
ಹಾಗೇ, ಗೋವಾ ವಿಮೋಚನಾ ದಿನ (ಆಪರೇಶನ್​ ವಿಜಯ್​) ವಾದ ನಿನ್ನೆ ಪ್ರಧಾನಿ ನರೇಂದ್ರ ಮೋದಿ ಐದು ಯೋಜನೆಗಳಿಗೆ ವರ್ಚ್ಯುವಲ್ ಆಗಿ ಚಾಲನೆ ನೀಡಿದ್ದಾರೆ. ನವೀಕರಿಸಲಾದ ಫೋರ್ಟ್ ಅಗುಡಾ ಜೈಲ್​ ಮ್ಯೂಸಿಯಂ, ಗೋವಾ ಮೆಡಿಕಲ್​ ಕಾಲೇಜಿನ ಸೂಪರ್ ಸ್ಪೆಶಾಲಿಟಿ ಬ್ಲಾಕ್​, ದಕ್ಷಿಣ ಗೋವಾ ಜಿಲ್ಲಾ ಹೊಸದಾದ ಆಸ್ಪತ್ರೆ, ಮೋಪಾ ಏರ್​ಪೋರ್ಟ್​ನಲ್ಲಿ ನಿರ್ಮಾಣವಾಗಿರುವ ವಿಮಾನಯಾನ ಕೌಶಲಾಭಿವೃದ್ಧಿ ಕೇಂದ್ರ ಮತ್ತು ಮಾರ್ಗೋದ ಡಬೋಲಿಮ್​ ನವೇಲಿಮ್​​ನಲ್ಲಿ ​ಗ್ಯಾಸ್ ಇನ್ಸುಲೇಟೆಡ್ ಸಬ್ ಸ್ಟೇಷಬನ್​ಗಳನ್ನು ಮೋದಿಯವರು ಉದ್ಘಾಟಿಸಿದ್ದಾರೆ.

vtv vitla
vtv vitla
- Advertisement -

Related news

error: Content is protected !!