


ಕಬಕ: ಶ್ರೀ ಗುರು ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ ನಿ. ಪಾಣೆಮಂಗಳೂರು ಇದರ ನೂತನ 7ನೇ ಶಾಖೆಯ ಉದ್ಘಾಟನಾ ಸಮಾರಂಭವು ಸೆ. 26 ಶನಿವಾರದಂದು ಕಬಕದ ಬ್ರೈಟ್ ಕಾಂಪ್ಲೆಕ್ಸ್ ನಲ್ಲಿ ಅದ್ಧೂರಿಯಾಗಿ ಜರುಗಿತು.
ಪುತ್ತೂರು ವಿಧಾನಸಭಾ ಕ್ಷೇತ್ರದ ಶಾಸಕರಾದ ಅಶೋಕ್ ಕುಮಾರ್ ರೈ ಅವರು ನೂತನ ಕಚೇರಿಯನ್ನು ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿದರು.


ಈ ಸಂದರ್ಭದಲ್ಲಿ ಮಾತನಾಡಿದ ಶಾಸಕ ಅಶೋಕ್ ರೈ ಅವರು, “ನಮ್ಮ ವಿಧಾನಸಭಾ ಕ್ಷೇತ್ರದಲ್ಲಿ ಯಾವುದೇ ಸಂಸ್ಥೆಗಳು, ಉದ್ಯಮಗಳು ಬಂದರೂ ನಾವು ಪ್ರೋತ್ಸಾಹ ನೀಡುತ್ತೇವೆ. ಒಂದು ಸಂಸ್ಥೆ ಬಂದರೆ 4-5 ಜನರಿಗೆ ಉದ್ಯೋಗ ಸಿಗುತ್ತದೆ. ಮನುಷ್ಯನಿಗೆ ಬೇಕಾದ ಮೂಲಭೂತ ಅವಶ್ಯಕತೆಗಳಾದ ವಿದ್ಯಾಭ್ಯಾಸ, ಉದ್ಯೋಗ ಮತ್ತು ಆರೋಗ್ಯ ಸಿಕ್ಕರೆ ಅದು ಪರಿಪೂರ್ಣ ಬದುಕು. ನಮ್ಮ ಕಲ್ಪನೆಯೂ ಕ್ಷೇತ್ರದ ಅಭಿವೃದ್ಧಿ, ಉದ್ಯಮಗಳ ಆಗಮನ ಮತ್ತು ಉದ್ಯೋಗ ಸೃಷ್ಟಿಯೇ ಆಗಿದೆ” ಎಂದು ಹೇಳಿದರು.


ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಸ್ಥೆಯ ಅಧ್ಯಕ್ಷ ಕೆ. ಹರಿಕೃಷ್ಣ ಬಂಟ್ವಾಳ್ ವಹಿಸಿದ್ದರು. ಭದ್ರತಾ ಕೊಠಡಿಯನ್ನು ದ.ಕ ಜೇನು ವ್ಯವಸಾಯಗಾರರ ಸಹಕಾರಿ ಸಂಘ ಪುತ್ತೂರು ಉಪಾಧ್ಯಕ್ಷರು ರಾಜಾರಾಮ್ ಶೆಟ್ಟಿ ಕೊಲ್ಪೆಗುತ್ತು ಅವರು ಉದ್ಘಾಟಿಸಿದರು. ಸಭಾ ಕಾರ್ಯಕ್ರಮವನ್ನು ಪೊಳ್ಯ ಕಬಕದ ಮಾಜಿ ಗ್ರಾಮ ಪಂಚಾಯತ್ ಉಪಾಧ್ಯಕ್ಷರು ಹಾಗೂ ನಿವೃತ್ತ ಮುಖ್ಯ ಶಿಕ್ಷಕರಾದ ರುಕ್ಮಯ ಗೌಡ ಎಂ. ಅವರು ಉದ್ಘಾಟಿಸಿದರು.
ಮುಖ್ಯ ಅತಿಥಿಗಳಾಗಿ ಯುವವಾಹಿನಿ (ರಿ) ವಿಟ್ಲ ವಲಯದ ಅಧ್ಯಕ್ಷ ಕೆ.ಟಿ ಆನಂದ, ಜಿಲ್ಲಾ ಉತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕೃತ ನಿವೃತ್ತ ಮುಖ್ಯ ಶಿಕ್ಷಕ ನಾರಾಯಣ ಪೂಜಾರಿ ಎಸ್.ಕೆ ಕುಂಡಡ್ಕ, ಬ್ರೈಟ್ ಕಾಂಪ್ಲೆಕ್ಸ್ ಮಾಲಕ ಇಸ್ಮಾಯಿಲ್ ಪಿ. ಕಬಕ ಅವರು ಭಾಗವಹಿಸಿದರು.
ಕಾರ್ಯಕ್ರಮದಲ್ಲಿ ಸಂಘದ ಉಪಾಧ್ಯಕ್ಷರಾದ ರಮೇಶ್ ಅನ್ನಪ್ಪಾಡಿ, ಮುಖ್ಯಕಾರ್ಯನಿರ್ವಹಣಾಧಿಕಾರಿ ಚರಣ್ ಕಂರ್ಬಡ್ಕ, ನಿರ್ದೇಶಕರಾದ ಭುವನೇಶ್ ಪಚ್ಚಿನಡ್ಕ, ಶ್ರೀಮತಿ ತುಳಸಿ ಇರಾ, ಹರೀಶ್ ಸಿ.ಎಚ್. ವಿಟ್ಲ, ರತ್ನಾಕರ ಪೂಜಾರಿ ಮೆಲ್ಕಾರ್, ರತ್ನಾಕರ ಪೂಜಾರಿ ನಾಡಾರ್, ಶ್ರೀಮತಿ ಲಕ್ಷೀ ಪೆರ್ವ ಹಾಗೂ ಎಲ್ಲ ಸಿಬ್ಬಂದಿಗಳು ಉಪಸ್ಥಿತರಿದ್ದರು
ಕೆ. ಸಂಜೀವ ಪೂಜಾರಿ ಕುಚ್ಚಿಗುಡ್ಡೆ ಸ್ವಾಗತಿಸಿದರು, ಶೈಲೇಶ್ ಪೂಜಾರಿ ಕುಚ್ಚಿಗುಡ್ಡೆ ವಂದಿಸಿದರು. ವಿನೂತ ಮತ್ತು ಜ್ಯೋತಿ ಪ್ರಾರ್ಥಿಸಿದರು, ಅಶ್ವಿನಿ ಪೆರುವಾಯಿ ಕಾರ್ಯಕ್ರಮ ನಿರೂಪಿಸಿದರು.








