Saturday, September 26, 2026
spot_imgspot_img
spot_imgspot_img

ಸೆ. 27 ರಂದು ಸಹ್ಯಾದ್ರಿ ಫ್ರೆಂಡ್ಸ್ (ರಿ) ಕೈಕಾರ, ಪುತ್ತೂರು ದ.ಕ ಇದರ ಆಶ್ರಯದಲ್ಲಿ ಯು. ಆರ್. ಪ್ರಾಪರ್ಟಿಸ್ ಪುತ್ತೂರು ಹಾಗೂ ರೋಟರಿ ಕ್ಲಬ್ ಪುತ್ತೂರು ಸ್ವರ್ಣ ಇವರ ಸಹಯೋಗದೊಂದಿಗೆ “ನಮ್ಮ ಕೈಕಾರಡ್ ಕೆಸರ್‌ಡೊಂಜಿ ದಿನ”

- Advertisement -
- Advertisement -

ಪುತ್ತೂರು: ಸಹ್ಯಾದ್ರಿ ಫ್ರೆಂಡ್ಸ್ (ರಿ) ಕೈಕಾರ, ಪುತ್ತೂರು ದ.ಕ. ಇದರ ಆಶ್ರಯದಲ್ಲಿ ಯು.ಆರ್‍. ಪ್ರಾಪರ್ಟಿಸ್ ಪುತ್ತೂರು ಹಾಗೂ ರೋಟರಿ ಕ್ಲಬ್ ಪುತ್ತೂರು ಸ್ವರ್ಣ ಇವರ ಸಹಯೋಗದೊಂದಿಗೆ “ನಮ್ಮ ಕೈಕಾರ್‌ಡ್ ಕೆಸರ್‌ಡೊಂಜಿ ದಿನ” ಕಾರ್ಯಕ್ರಮವು ಸೆ. 27 ರಂದು ಭಾನುವಾರ ಬೆಳಿಗ್ಗೆ 9.30ಕ್ಕೆ ಪಳ್ಳತ್ತಾರಿನ ಶ್ರೀ ಜುಮಾದಿ ದೈವಸ್ಥಾನದ ಬಳಿಯ ದಿ. ಸರಸ್ವತಿ ಹೊಸಲಕ್ಕೆ ಅವರ ಗದ್ದೆಯಲ್ಲಿ ಜರುಗಲಿದೆ.

ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ ಕೋಡಿಂಬಾಡಿ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ. ವಿಧಾನ ಪರಿಷತ್ ಸದಸ್ಯ ಕಿಶೋರ್ ಕುಮಾರ್ ಬೊಟ್ಟಾಡಿ ದೀಪ ಪ್ರಜ್ವಲನೆ ನೆರವೇರಿಸಲಿದ್ದಾರೆ. ಮಾಜಿ ಶಾಸಕಿ ಶಕುಂತಳಾ ಟಿ. ಶೆಟ್ಟಿ ಅವರು ಕ್ರೀಡಾ ಕೂಟಕ್ಕೆ ಚಾಲನೆ ನೀಡಲಿದ್ದಾರೆ.ಪರಮಪೂಜ್ಯ ಶ್ರೀ ಶ್ರೀ ಗುರುದೇವಾನಂದ ಸ್ವಾಮೀಜಿ, ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನಮ್ ಅವರು ಆಶೀರ್ವಚನ ನೀಡಲಿದ್ದಾರೆ.

ಕಾರ್ಯಕ್ರಮದಲ್ಲಿ ಜನಪ್ರತಿನಿಧಿಗಳು, ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು, ಗಣ್ಯರು ಉಪಸ್ಥಿತರಿರಲಿದ್ದಾರೆ.

"ಸಹ್ಯಾದ್ರಿ ಸಿರಿ" 2026 ಪ್ರಶಸ್ತಿ ಪುರಸ್ಕೃತರು:

*ಶಶಿಕುಮಾರ್ ರೈ ಬಾಲ್ಯೊಟ್ಟು – ಕರ್ನಾಟಕ ರಾಜ್ಯ ಸಹಕಾರ ಸಂಘದ ನಿರ್ದೇಶಕರು (ಮೈಸೂರು ವಿಭಾಗ)
*ದಿವಾಕರ್ ದಾಸ್ ನೇರ್ಲಾಜೆ – ಎಸ್.ಎಲ್.ವಿ ಬುಕ್ಸ್ ಇಂಡಿಯಾ ಪ್ರೈ.ಲಿ. ಮೈಸೂರು
*ಸುಂದರ ರೈ ಮಂದಾರ – ಕಲಾಕ್ಷೇತ್ರ
*ಶಶಾಂಕ ಶಂಕರ ನೆಲ್ಲಿತ್ತಾಯ – ದೈವಾರಾಧನೆ (ಮಧ್ಯಸ್ಥರು)
*ಬಾಲಕೃಷ್ಣ ಪೊರ್ದಾಳ್ – ನಿರೂಪಕರು

ಕಾರ್ಯಕ್ರಮದಲ್ಲಿ ವಾಲಿಬಾಲ್, ಹಗ್ಗಜಗ್ಗಾಟ, ಹಿಮ್ಮುಖ ಓಟ, ಕೆಸರುಗದ್ದೆ ಓಟ, ಹಾಳೆ ಎಳೆತ, ಉಪ್ಪಿನ ಮೂಟೆ ಹೊರುವುದು, ಕಂಬ ಸುತ್ತು ಓಟ, ಅಪ್ಪಂಗಾಯಿ ಓಟ ಹಾಗೂ ರೀಲ್ಸ್ ಸ್ಪರ್ಧೆಗಳು ನಡೆಯಲಿವೆ.

ಸಮಾರೋಪ ಸಮಾರಂಭವು ಸಂಜೆ 6 ಗಂಟೆಯ ನಂತರ ನಡೆಯಲಿದೆ ಎಂದು ಪ್ರಕಟನೆಯಲ್ಲಿ ತಿಳಿಸಿದ್ದಾರೆ

- Advertisement -

Related news

error: Content is protected !!