Tuesday, April 23, 2024
spot_imgspot_img
spot_imgspot_img

ಗ್ರಾಮ ಸುರಕ್ಷಾ ಯೋಜನೆಯಲ್ಲಿ ದಿನಕ್ಕೆ 50 ರೂ. ಠೇವಣಿ; ಏನಿದು ಯೋಜನೆ ಇಲ್ಲಿದೆ ಮಾಹಿತಿ

- Advertisement -G L Acharya panikkar
- Advertisement -

ಗ್ರಾಮ ಸುರಕ್ಷಾ ಯೋಜನೆ ಈ ಯೋಜನೆಯಲ್ಲಿ ಪ್ರತಿದಿನ 50 ರೂಪಾಯಿಗಳನ್ನು ಠೇವಣಿ ಮಾಡಿ, ನೀವು 35 ಲಕ್ಷದವರೆಗೆ ಹಿಂತಿರುಗಿ ಹಣ ಪಡೆದುಕೊಳ್ಳಬಹುದು. ಗ್ರಾಮ ಸುರಕ್ಷಾ ಯೋಜನೆಯಲ್ಲಿ ನೀವು ಸುರಕ್ಷಿತ ಹೂಡಿಕೆಯನ್ನು ಮಾಡಲು ಬಯಸಿದರೆ, ಅಂಚೆ ಕಚೇರಿ ಯೋಜನೆಗಳಲ್ಲಿ ಈ ಯೋಜನೆಗಳು ನಿಮಗೆ ಉತ್ತಮವಾಗಿವೆ.

ಇದು ನಿಮಗೆ ಹಣ ಕಳೆದುಕೊಳ್ಳುವ ಅಪಾಯವಿಲ್ಲದೆ ಹಾಗೂ ಸರ್ಕಾರದ ಮುಕ್ತ ವ್ಯವಹಾರವಾಗಿದೆ ಮತ್ತು ಉತ್ತಮ ಆದಾಯವನ್ನು ನೀಡುತ್ತದೆ. ಗ್ರಾಮ ಸುರಕ್ಷಾ ಯೋಜನೆಯಡಿಯಲ್ಲಿ ನೀವು ಪ್ರತಿದಿನ 50 ರೂ. ಠೇವಣಿ ಮಾಡಿದರೆ, ನೀವು ರೂ 35 ಲಕ್ಷದವರೆಗೆ ರಿಟರ್ನ್ಸ್ ಪಡೆಯಬಹುದು.

ಗ್ರಾಮ ಸುರಕ್ಷಾ ಯೋಜನೆಯಲ್ಲಿ ಪ್ರತಿಯೊಬ್ಬ ವ್ಯಕ್ತಿಯು ತನ್ನ ಜೀವನದಲ್ಲಿ ಹಣ ಉಳಿಸಬೇಕು ಎಂದರೆ ಈ ಯೋಜನೆ ನಿಮಗೆ ಸೂಕ್ತವಾಗಿದೆ. ಸರ್ಕಾರಿ ಪೋಸ್ಟ್ ಆಫೀಸ್‌ನಲ್ಲಿ ಜಾರಿ ಇರುವ ಈ ಯೋಜನೆಯು ಪೋಸ್ಟ್ ಆಫೀಸ್ ಅನೇಕ ಉಳಿತಾಯ ಯೋಜನೆಗಳನ್ನು ನಡೆಸುತ್ತದೆ. ಈ ಉಳಿತಾಯ ಯೋಜನೆಗಳು ಹಣವನ್ನು ಉಳಿಸಲು ಜನರಿಗೆ ಸುಲಭಗೊಳಿಸುತ್ತದೆ. ಈ ಯೋಜನೆಗಳಲ್ಲಿ ಹಣವನ್ನು ಹೂಡಿಕೆ ಮಾಡುವುದರಿಂದ, ನಿಮ್ಮ ಹಣವು ಸುರಕ್ಷಿತವಾಗಿ ಉಳಿಯುತ್ತದೆ.

ಪೋಸ್ಟ್ ಆಫೀಸ್ ಉಳಿತಾಯ ಯೋಜನೆಯಲ್ಲಿ ಹೂಡಿಕೆ ಮಾಡುವ ಮೂಲಕ ಹೂಡಿಕೆದಾರರು ಹೆಚ್ಚಿನ ಬಡ್ಡಿದರಗಳು ಮತ್ತು ತೆರಿಗೆ ವಿನಾಯಿತಿಗಳ ಲಾಭವನ್ನು ಪಡೆಯಬಹುದು. ಅಂಚೆ ಕಛೇರಿಯ ಗ್ರಾಮೀಣ ಅಂಚೆ ಜೀವ ವಿಮಾ ಯೋಜನೆಗಳ ಕಾರ್ಯಕ್ರಮದ ಅಡಿಯಲ್ಲಿ ಹಲವಾರು ಯೋಜನೆಗಳನ್ನು ಪ್ರಾರಂಭಿಸಲಾಗಿದೆ. ಇವುಗಳಲ್ಲಿ ಗ್ರಾಮ ಸುರಕ್ಷಾ ಯೋಜನೆಯೂ ಸೇರಿದೆ. ಈ ಪೋಸ್ಟ್ ಆಫೀಸ್ ಯೋಜನೆಯಡಿ ನೀವು ಪ್ರತಿದಿನ 50 ರೂಪಾಯಿಗಳನ್ನು ಠೇವಣಿ ಮಾಡಿದರೆ, ನೀವು 35 ಲಕ್ಷ ರೂಪಾಯಿಗಳವರೆಗೆ ರಿಟರ್ನ್ಸ್ ಪಡೆಯಬಹುದು.

ಅಂಚೆ ಕಛೇರಿಯ ಈ ಯೋಜನೆ ಹೆಸರು ಗ್ರಾಮ ಸುರಕ್ಷಾ ಯೋಜನೆ
ಈ ಯೋಜನೆಯಲ್ಲಿ ಹೂಡಿಕೆ ಮಾಡುವ ಮೂಲಕ, ನೀವು ಮುಕ್ತಾಯದ ಸಮಯದಲ್ಲಿ ಉತ್ತಮ ಪ್ರಮಾಣದ ಹಣವನ್ನು ಸಂಗ್ರಹಿಸಬಹುದು. ಮುಕ್ತಾಯದ ಸಮಯದಲ್ಲಿ ಸ್ವೀಕರಿಸಿದ ಮೊತ್ತದೊಂದಿಗೆ, ನಿಮ್ಮ ಭವಿಷ್ಯದ ಪ್ರಮುಖ ಉದ್ದೇಶಗಳನ್ನು ನೀವು ಪೂರೈಸಬಹುದು. ಈ ಹಣವು ನಿಮ್ಮ ಭವಿಷ್ಯವನ್ನು ಆರ್ಥಿಕವಾಗಿ ಸುರಕ್ಷಿತಗೊಳಿಸಲು ಕೆಲಸ ಮಾಡುತ್ತದೆ. ಈ ರೀತಿಯಾಗಿ, ನೀವು ಬೇರೆ ಯಾವುದೇ ವ್ಯಕ್ತಿಯ ಮೇಲೆ ಆರ್ಥಿಕವಾಗಿ ಅವಲಂಬಿತರಾಗಬೇಕಾಗಿಲ್ಲ. ಗ್ರಾಮ ಸುರಕ್ಷಾ ಯೋಜನೆಯಲ್ಲಿ ಪ್ರತಿ ತಿಂಗಳು ರೂ 1411 ಹೂಡಿಕೆ ಮಾಡುವ ಮೂಲಕ ನೀವು ಮುಕ್ತಾಯದ ಸಮಯದಲ್ಲಿ ರೂ 34.60 ಲಕ್ಷವನ್ನು ಸಂಗ್ರಹಿಸಬಹುದು. ದೇಶದಲ್ಲಿ ಹೆಚ್ಚಿನ ಸಂಖ್ಯೆಯ ಜನರು ಗ್ರಾಮ ಸುರಕ್ಷಾ ಯೋಜನೆಯಲ್ಲಿ ಹೂಡಿಕೆ ಮಾಡಲು ಬಯಸುತ್ತಾರೆ.

ಗ್ರಾಮ ಸುರಕ್ಷಾ ಯೋಜನೆ ಸೌಲಭ್ಯ
ಅಂಚೆ ಕಛೇರಿಯ ‘ಗ್ರಾಮ ಸುರಕ್ಷಾ ಯೋಜನೆ’ಯಿಂದ ಕಡಿಮೆ ಅಪಾಯದೊಂದಿಗೆ ಉತ್ತಮ ಆದಾಯವನ್ನು ಪಡೆಯಬಹುದು. ಈ ಯೋಜನೆಯಲ್ಲಿ ನೀವು ದಿನಕ್ಕೆ 50 ರೂಪಾಯಿಗಳನ್ನು ಹೂಡಿಕೆ ಮಾಡಬೇಕು. ಅಂದರೆ ತಿಂಗಳಿಗೆ 1500 ರೂಪಾಯಿ ಠೇವಣಿ ಇಟ್ಟರೆ 35 ಲಕ್ಷ ರೂಪಾಯಿ ಪಡೆಯಬಹುದು. ಹೂಡಿಕೆದಾರರು 80ನೇ ವಯಸ್ಸಿನಲ್ಲಿ ಈ ಮೊತ್ತವನ್ನು ಮರಳಿ ಪಡೆಯುತ್ತಾರೆ. ಈ ಯೋಜನೆ ಗ್ರಾಮೀಣ ಪ್ರದೇಶದಲ್ಲಿ ಈಗಾಗಲೇ ಪರಿಚಯಸಲಾಗಿದ್ದು, ನಾಗರಿಕರು ಈ ಯೋಜನೆಯನ್ನು ಪಡೆದುಕೊಳ್ಳಬಹುದು.

ಹೂಡಿಕೆ ಹೇಗೆ, ಯಾರು ಹೂಡಿಕೆ ಮಾಡಬಹುದು
ಭಾರತದ ನಾಗರಿಕರು(ಮಹಿಳೆ ಮತ್ತು ಪುರುಷ ಹಾಗೂ ಇತರೆ) ಈ ಯೋಜನೆಯಲ್ಲಿ 19ರಿಂದ 55 ವರ್ಷಗಳವರೆಗೆ ಹೂಡಿಕೆ ಮಾಡಬಹುದು. ಇದರಲ್ಲಿ ಕನಿಷ್ಠ ರೂ.10,000 ಮತ್ತು ಗರಿಷ್ಠ ರೂ.10,00,000 ಹೂಡಿಕೆ ಮಾಡಬಹುದು.ಇದಕ್ಕಿಂತ ಮುಖ್ಯವಾಗಿ ಪ್ರೀಮಿಯಂ ಪಾವತಿಸಲು ಹಲವು ಆಯ್ಕೆಗಳಿವೆ. ಈ ಯೋಜನೆಯಲ್ಲಿ ನೀವು ಮಾಸಿಕ, ತ್ರೈಮಾಸಿಕ, ಅರ್ಧ ವಾರ್ಷಿಕ ಅಥವಾ ವಾರ್ಷಿಕವಾಗಿ ಕಂತು ಪಾವತಿಸಬಹುದು.

ಈ ಯೋಜನೆ ಪ್ರಯೋಜನಕಾರಿ ಹೇಗೆ?
19ನೇ ವಯಸ್ಸಿನಲ್ಲಿ ಒಬ್ಬ ವ್ಯಕ್ತಿಯು ಅಂಚೆ ಕಛೇರಿಯ ಈ ಯೋಜನೆಯಲ್ಲಿ ಹೂಡಿಕೆ ಮಾಡುತ್ತಾನೆ. ಆ ಮಾಸಿಕ ಪ್ರೀಮಿಯಂ 55 ವರ್ಷಗಳಿಗೆ ರೂ 1515, 58 ವರ್ಷಗಳಿಗೆ ರೂ 1463 ಮತ್ತು 60 ವರ್ಷಗಳಿಗೆ ರೂ 1411 ಆಗಿರುತ್ತದೆ. ಈ ರೀತಿಯಾಗಿ, ನೀವು 55 ವರ್ಷಗಳಲ್ಲಿ ರೂ 31.60 ಲಕ್ಷ, 58 ವರ್ಷಗಳಿಗೆ ರೂ 33.40 ಲಕ್ಷ ಮತ್ತು 60 ವರ್ಷಗಳಿಗೆ ರೂ 34.60 ಲಕ್ಷದ ಮೆಚುರಿಟಿ ಲಾಭವನ್ನು ಪಡೆಯುತ್ತೀರಿ.

- Advertisement -

Related news

error: Content is protected !!