Saturday, April 27, 2024
spot_imgspot_img
spot_imgspot_img

ಹಕ್ಕಿಜ್ವರ ಭೀತಿಯಲ್ಲಿ ಕ್ರಿಕೆಟಿಗ ಮಹೇಂದ್ರ ಸಿಂಗ್ ಧೋನಿ!

- Advertisement -G L Acharya panikkar
- Advertisement -

ಮುಂಬೈ: ಹಕ್ಕಿಜ್ವರ ಭೀತಿಯಿಂದಾಗಿ ಇದಾಗಲೇ ದೇಶದ ವಿವಿಧ ಭಾಗಗಳಲ್ಲಿ ಲಕ್ಷಾಂತರ ಕೋಳಿಗಳನ್ನು ಕೊಲ್ಲಲಾಗಿದೆ. ಕೆಲವು ಕೋಳಿಗಳಲ್ಲಿ ಜ್ವರವು ಕಾಣಿಸಿಕೊಂಡಿದ್ದ ಹಿನ್ನೆಲೆಯಲ್ಲಿ ಮುಂಜಾಗರೂಕತಾ ಕ್ರಮವಾಗಿ ಕೋಳಿಗಳ ಮಾರಣಹೋಮ ಮಾಡಲಾಗುತ್ತಿದೆ.


ಇದೀಗ ಇದೇ ಜ್ವರ ಕ್ರಿಕೆಟಿಗ ಮಹೇಂದ್ರ ಸಿಂಗ್ ಧೋನಿ ಅವರಿಗೂ ಎದುರಾಗಿದೆ. ಬಹು ಬೆಲೆಬಾಳುವ ಕಡಕನಾಥ್ ಕೋಳಿ ಸಾಕಣಿಕೆ ಮಾಡುತ್ತಿರುವ ಧೋನಿ ಅವರ ಕೋಳಿ ಫಾರ್ಮ್​ನಲ್ಲಿಯೂ ಹಕ್ಕಿಜ್ವರದ ಸಂಕಷ್ಟ ಎದುರಾಗಿದೆ.

ಏಕೆಂದರೆ ಕಡಕನಾಥ್​ ತಳಿಯ ಬಹುಬೆಲೆಬಾಳುವ ಕೋಳಿಯನ್ನು ಧೋನಿಯವರು ಖರೀದಿಸಿದ್ದರು. ಅದನ್ನು ತಮ್ಮ ಕೋಳಿ ಫಾರ್ಮ್​ನಲ್ಲಿ ಸಾಕಾಣಿಕೆಗಾಗಿ ಇಟ್ಟಿದ್ದರು. ಇದಾಗಲೇ ಇವರ ಫಾರ್ಮ್​ನಲ್ಲಿ ಸುಮಾರು ಎರಡೂವರೆ ಕೋಟಿಯಷ್ಟು ಕೋಳಿಗಳಿವೆ.

ಆದರೆ ದುರದೃಷ್ಟವಶಾತ್​ ಇವು ಕಡಕನಾಥ್​ ಕೋಳಿ ಖರೀದಿ ಮಾಡಿರುವ ಕೋಳಿಫಾರ್ಮ್​ನಲ್ಲಿರುವ ಇತರ ಕೋಳಿಗಳಲ್ಲಿ ಹಕ್ಕಿಜ್ವರ ಕಾಣಿಸಿಕೊಂಡಿದೆ. ಅವುಗಳನ್ನು ಇದಾಗಲೇ ಸಾಯಿಸಲಾಗಿದೆ. ಅಲ್ಲಿರುವ ಕೋಳಿಗಳಲ್ಲಿ ಹಕ್ಕಿಜ್ವರ ಕಾಣಿಸಿಕೊಂಡಿದ್ದರೆ ಸಹಜವಾಗಿ ಅವುಗಳ ಜತೆ ಇರುವ ಧೋನಿಯವರು ಖರೀದಿಸಿದ್ದ ಕೋಳಿಗಳಲ್ಲಿಯೂ ಕಾಣಿಸಿಕೊಂಡಿರುವ ಸಾಧ್ಯತೆ ಇದೆ ಎನ್ನಲಾಗಿದೆ.

ಒಂದು ವೇಳೆ ಈ ಕೋಳಿಗಳಿಗೆ ಹಕ್ಕಿಜ್ವರ ಬಂದಿದ್ದರೆ, ಅವುಗಳ ಒಡನಾಟದಲ್ಲಿದ್ದ ಇತರ ಕೋಳಿಗಳಿಗೂ ಅವುಗಳ ಹರಡಿರುವ ಸಾಧ್ಯತೆ ಇದೆ.


ಇದೇ ಕಾರಣಕ್ಕೆ ಧೋನಿಯವರು ತಮ್ಮ ಫಾರ್ಮ್​ನಲ್ಲಿರುವ ಎಲ್ಲಾ ಕೋಳಿಗಳನ್ನು ಸಾಯಿಸಬೇಕಾಗಿ ಬಂದಿದೆ.

.ಇನ್ನು ಕಡಕನಾಥ್ ಕೋಳಿಗಳ ಬಗ್ಗೆ ಹೇಳುವುದಾದರೆ, ಸಾಮಾನ್ಯ ಕೋಳಿಗಿಂತ ಕಡಕನಾಥ್ ಕೋಳಿ ಆರೋಗ್ಯಕ್ಕೆ ಒಳ್ಳೆಯದು. ಇವುಗಳ ಮಾಂಸದಲ್ಲಿ ಕಡಿಮೆ ಕೊಲೆಸ್ಟ್ರಾಲ್ ಇರುವ ಕಾರಣ ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುವ ರೋಗಿಗಳ ಕೂಡ ಇದನ್ನು ಸೇವನೆ ಮಾಡಬಹುದು ಎನ್ನಲಾಗಿದೆ.

ಆದ್ದರಿಂದ ಇವುಗಳಿಗೆ ಮಾರುಕಟ್ಟೆಯಲ್ಲಿ ಮೂರರಿಂದ ನಾಲ್ಕು ಸಾವಿರ ರೂಪಾಯಿಯಿದೆ. ಕಡಕನಾಥ್ ಕೋಳಿ ಮಾಂಸಕ್ಕೆ ಹೆಚ್ಚಿನ ಬೆಲೆಯಿದೆ. ಕೆ.ಜಿಯೊಂದಕ್ಕೆ ಒಂದು ಸಾವಿರದಿಂದ ಒಂದೂವರೆ ಸಾವಿರ ರೂಪಾಯಿ ಬೆಲೆ ಇದೆ. ಕೋಳಿ ಮರಿಗಳು 6-7 ತಿಂಗಳಲ್ಲಿ ಮೊಟ್ಟೆ ಇಡಲು ಶುರು ಮಾಡುತ್ತವೆ. ಒಂದು ಕೋಳಿ ಮರಿ ಬೆಲೆ 80ರಿಂದ 100 ರೂಪಾಯಿಯಿದೆ. ಸದ್ಯ ಇದರ ಒಂದು ಮೊಟ್ಟೆಯ ಬೆಲೆ 30 ರೂಪಾಯಿ.

- Advertisement -

Related news

error: Content is protected !!