Thursday, June 25, 2026
spot_imgspot_img
spot_imgspot_img

ಚಲಿಸುತ್ತಿದ್ದ ಕಾರಿನಿಂದ ರಸ್ತೆಗೆಸೆದರು ಅರೆನಗ್ನ ಸ್ಥಿತಿಯಲ್ಲಿದ್ದ ಯುವತಿಯ ಮೃತದೇಹ!

- Advertisement -
- Advertisement -

ಚೆನ್ನೈ: ಮಹಿಳೆಯೊಬ್ಬಳ ದೇಹವನ್ನು ಸ್ಕಾರ್ಪಿಯೋ ವಾಹನದಲ್ಲಿ ರಸ್ತೆಗೆ ಎಸೆಯಲಾಗಿದ್ದು ಬಳಿಕ ಹಲವು ವಾಹನಗಳು ಆಕೆಯ ಮೇಲಿನಿಂದಲೇ ಚಲಿಸಿದ್ದರಿಂದ ಶವ ಅಪ್ಪಚ್ಚಿಯಾಗಿರುವ ಭೀಕರ ಘಟನೆ ತಮಿಳುನಾಡಿನ ಕೊಯಮತ್ತೂರಿನಲ್ಲಿ ಮಂಗಳವಾರ ಬೆಳಗಿನ ಜಾವ ನಡೆದಿದೆ.

ಚಲಿಸುತ್ತಿದ್ದ ಕಾರಿನಿಂದ ಎಸೆಯಲ್ಪಟ್ಟ ಮಹಿಳೆಯ ಮೃತದೇಹದ ಮೇಲೆ ಹಿಂದಿನಿಂದ ಬಂದ ವಾಹನಗಳೂ ಚಲಿಸಿದ್ದರಿಂದ ಆಕೆಯ ತಲೆ ಮತ್ತು ಮುಖ ಅಪ್ಪಚ್ಚಿಯಾಗಿದೆ. ಹೀಗಾಗಿ, ಮಹಿಳೆಯ ಶವದ ಗುರುತು ಸಿಕ್ಕದಂತಾಗಿದೆ.

ರಸ್ತೆಯಲ್ಲಿ ಸಾಗುತ್ತಿದ್ದ ಕೆಲ ವಾಹನ ಸವಾರರು ಈ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.ಬಳಿಕ ಘಟನಾ ಸ್ಥಳಕ್ಕೆ ಬಂದ ಪೊಲೀಸರು ಮಹಿಳೆ ರಸ್ತೆ ದಾಟುವಾಗ ಈ ಅಪಘಾತವಾಗಿದ್ದಿರಬಹುದು ಎಂದು ಶಂಕಿಸಿದ್ದರು. ಸಿಸಿಟಿವಿಯಲ್ಲಿ ಘಟನೆಯ ದೃಶ್ಯಾವಳಿಯನ್ನು ಪರಿಶೀಲಿಸಿದಾಗ, ಸ್ಕಾರ್ಪಿಯೋ ಕಾರಿನಿಂದ ಮಹಿಳೆಯ ಅರೆನಗ್ನ ಸ್ಥಿತಿಯಲ್ಲಿ ಮೃತ ದೇಹವನ್ನು ಹೊರಗೆ ಎಸೆದಿರುವುದು ಬೆಳಕಿಗೆ ಬಂದಿದೆ

ಇದೊಂದು ಅತ್ಯಾಚಾರ ಮತ್ತು ಕೊಲೆ ಪ್ರಕರಣ ಆಗಿರಬಹುದು ಎಂದು ಶಂಕಿಸಲಾಗಿದೆ. ಪೊಲೀಸರು ಈ ಅಪರಿಚಿತ ಮಹಿಳೆಯ ಮೃತ ದೇಹವನ್ನು ಕೊಯಮತ್ತೂರು ಮೆಡಿಕಲ್ ಕಾಲೇಜು ಆಸ್ಪತ್ರೆಯ ಶವಾಗಾರಕ್ಕೆ ಕಳುಹಿಸಿದ್ದಾರೆ. ಅಲ್ಲಿ ಶವಪರೀಕ್ಷೆ ನಡೆಸಲಾಗಿದೆ. ಪೀಲಮೇಡು ಠಾಣೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.

- Advertisement -

Related news

error: Content is protected !!