Sunday, May 19, 2024
spot_imgspot_img
spot_imgspot_img

ಚಿಕನ್ ತಂದೂರಿ ಹಾಗೂ ಫ್ರೈಡ್ ರೈಸ್ ತಿಂದ ವಿದ್ಯಾರ್ಥಿ ಸಾವು

- Advertisement -G L Acharya panikkar
- Advertisement -

ಚೆನ್ನೈ: ತಮಿಳುನಾಡಿನಲ್ಲಿ ದ್ವಿತೀಯ ಪಿಯುಸಿ ವಿದ್ಯಾರ್ಥಿಯೋರ್ವ ತಂದೂರಿ ಚಿಕನ್ ಮತ್ತು ಫ್ರೈಡ್ ರೈಸ್ ತಿಂದ ಬಳಿಕ ವಾಂತಿ-ಭೇದಿ ಕಾಣಿಸಿಕೊಂಡು ಮೃತಪಟ್ಟಿದ್ದಾನೆ.

ತಿರುಮುರುಗನ್(17) ಮೃತ ವಿದ್ಯಾರ್ಥಿ. ಈತ ತಿರುವಣ್ಣಾಮಲೈ ಜಿಲ್ಲೆಯ ಅರಣಿ ಪಟ್ಟಣದ ಗಣೇಶ್ ಎಂಬವರ ಪುತ್ರ.

ತಿರುಮುರುಗನ್​ ದ್ವಿತೀಯ ಪಿಯು ಪರೀಕ್ಷೆ ಬರೆದಿದ್ದ. ಫಲಿತಾಂಶಕ್ಕಾಗಿ ಕಾಯುತ್ತಿದ್ದ. ಮೇ 24ರಂದು ಅರಣಿ ಟೌನ್ ಗಾಂಧಿ ರಸ್ತೆಯ 5 ಸ್ಟಾರ್ ಎಲೈಟ್ ಹೋಟೆಲ್​ನಲ್ಲಿ ಸ್ನೇಹಿತರೊಂದಿಗೆ ಚಿಕನ್ ತಂದೂರಿ ಮತ್ತು ಫ್ರೈಡ್ ರೈಸ್ ಸೇವಿಸಿದ್ದ. ಅಂದು ರಾತ್ರಿ ಹೊಟ್ಟೆ ನೋವು ಕಾಣಿಸಿಕೊಂಡು ವಾಂತಿಯಾಗಿದೆ. ಮರುದಿನ ಬೆಳಗ್ಗೆ ಕುಟುಂಬಸ್ಥರು ತಿರುಮುರುಗನ್​ನನ್ನು ಸಮೀಪದ ಖಾಸಗಿ ಕ್ಲಿನಿಕ್​ಗೆ ದಾಖಲಿಸಿದ್ದಾರೆ. ಆದರೆ ಆತ‌ ಮೃತಪಟ್ಟಿದ್ದಾನೆ.

ಘಟನೆ ಬೆನ್ನಲ್ಲೇ ಹೋಟೆಲ್​ನಲ್ಲಿ ತಿಂದ ತಂದೂರಿ ಚಿಕನ್ ವಿಷಪೂರಿತ ಆಗಿದ್ದರಿಂದಲೇ ಮಗ ಮೃತಪಟ್ಟಿದ್ದಾನೆ ಎಂದು ಮೃತನ ಕುಟುಂಬಸ್ಥರು ಆರೋಪಿಸಿದ್ದಾರೆ.

- Advertisement -

Related news

error: Content is protected !!