Saturday, April 27, 2024
spot_imgspot_img
spot_imgspot_img

LPG ಸಿಲಿಂಡರ್ ದರದಲ್ಲಿ ಇಳಿಕೆ!

- Advertisement -G L Acharya panikkar
- Advertisement -

ನವದೆಹಲಿ: ಪೆಟ್ರೋಲ್, ಡೀಸೆಲ್ ಜೊತೆ ಎಲ್​ಪಿಜಿ ಸಿಲಿಂಡರ್ ರೇಟ್ ಏರಿಕೆಯಿಂದ ಜನ ಬೇಸತ್ತು ಹೋಗಿದ್ದಾರೆ. ಈಗ ಜನರಿಗೆ ಗುಡ್​ ನ್ಯೂಸ್ ಸಿಕ್ಕಿದ್ದು, ಇಂದಿನಿಂದ ಡೊಮೆಸ್ಟಿಕ್ ಎಲ್​ಪಿಜಿ ಸಿಲಿಂಡರ್​ ಬೆಲೆಯಲ್ಲಿ 10 ರೂಪಾಯಿ ಇಳಿಕೆಯಾಗಲಿದೆ.

ಈ ಬಗ್ಗೆ ಇಂಡಿಯನ್ ಆಯಿಲ್ ಕಾರ್ಪೊರೇಷನ್ ಲಿಮಿಟೆಡ್ ಪ್ರಕಟಣೆ ಹೊರಡಿಸಿದ್ದು, ಪ್ರತಿ ಸಿಲಿಂಡರ್​ಗೆ 10 ರೂಪಾಯಿ ಇಳಿಕೆ ಮಾಡುವಂತೆ ಆದೇಶಿಸಿದೆ. ಕಳೆದ ಒಂದೇ ತಿಂಗಳಿನಲ್ಲಿ ಎಲ್​ಪಿಜಿ ಸಿಲಿಂಡರ್ ಬೆಲೆ 4 ಬಾರಿ ಏರಿಕೆ ಕಂಡಿತ್ತು. ಡಿಸೆಂಬರ್​ನಿಂದ ಈವರೆಗೆ ಸಿಲಿಂಡರ್ ಬೆಲೆ ಒಟ್ಟು ₹225 ಏರಿಕೆ ಕಂಡಿದೆ. ಈಗ ಗ್ಯಾಸ್ ಸಿಲಿಂಡರ್ ದರದಲ್ಲಿ 10 ರೂಪಾಯಿ ಇಳಿಕೆಯಾಗಿದೆ.

driving

ಕಚ್ಚಾ ತೈಲ ಮತ್ತು ಪೆಟ್ರೋಲಿಯಂ ಉತ್ಪನ್ನಗಳ ಬೆಲೆ 2020ರ ನವೆಂಬರ್​​ನಿಂದ ನಿರಂತರವಾಗಿ ಏರಿಕೆಯಾಗುತ್ತಿವೆ. ಭಾರತವು ಹೆಚ್ಚಾಗಿ ಕಚ್ಚಾ ತೈಲದ ಇಂಪೋರ್ಟ್​ ಮೇಲೆ ಅವಲಂಬಿತವಾಗಿರುವುದರಿಂದ ಮತ್ತು ಬೆಲೆಗಳು ಮಾರುಕಟ್ಟೆಗೆ ಸಂಬಂಧಿಸಿರುವುದರಿಂದ, ಅಂತರಾಷ್ಟ್ರೀಯ ಬೆಲೆ ಹೆಚ್ಚಳವಾದಾಗ ಪೆಟ್ರೋಲಿಯಂ ಉತ್ಪನ್ನಗಳ ದೇಶೀಯ ಬೆಲೆಯಲ್ಲಿ ಹೆಚ್ಚಳಕ್ಕೆ ಕಾರಣವಾಯಿತು. ಆದ್ರೆ ಕೊರೊನಾ ಪ್ರಕರಣಗಳ ಏರಿಕೆಯಿಂದ ಹೆಚ್ಚುತ್ತಿರುವ ಆತಂಕ ಮತ್ತು ಲಸಿಕೆಯ ಅಡ್ಡಪರಿಣಾಮಗಳ ಬಗ್ಗೆ ಇರುವ ಆತಂಕಗಳಿಂದಾಗಿ, ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಮತ್ತು ಪೆಟ್ರೋಲಿಯಂ ಉತ್ಪನ್ನಗಳ ಬೆಲೆಗಳು 2021ರ ಮಾರ್ಚ್​ನ ಕೊನೆಯ ಹದಿನೈದು ದಿನಗಳಲ್ಲಿ ಕಡಿಮೆಯಾಗಿದೆ ಎಂದು ಅಧಿಕೃತ ಹೇಳಿಕೆಯಲ್ಲಿ ತಿಳಿಸಲಾಗಿದೆ.

- Advertisement -

Related news

error: Content is protected !!