Saturday, May 4, 2024
spot_imgspot_img
spot_imgspot_img

ಚಿನ್ನದ ನಾಣ್ಯವೆಂದು ತಾಮ್ರದ ನಾಣ್ಯ ನೀಡಿ ವಂಚನೆ; ಮೂವರು ಅಂದರ್‌

- Advertisement -G L Acharya panikkar
- Advertisement -

ಚಿಕ್ಕಮಗಳೂರು : ಚಿನ್ನದ ನಾಣ್ಯಗಳನ್ನು ನೀಡುವುದಾಗಿ ಆಮಿಷವೊಡ್ಡಿ, ಜನರಿಂದ ಹಣ ಪಡೆದು ನಂತರ ವಂಚಿಸುತ್ತಿದ್ದ ಖತರ್ನಾಕ್ ಗ್ಯಾಂಗ್ ಅನ್ನು ಬಂಧಿಸುವಲ್ಲಿ ಚಿಕ್ಕಮಗಳೂರು ಜಿಲ್ಲಾ ಪೊಲೀಸರು ಯಶಸ್ವಿಯಾಗಿದ್ದಾರೆ.

ಹರಪನಹಳ್ಳಿಯ ನಿವಾಸಿಗಳಾದ ಶ್ರೀನಿವಾಸ ನಾಯ್ಕ, ಕೋಟಿ ನಾಯ್ಕ್ ಹಾಗೂ ವೆಂಕಟೇಶ ನಾಯ್ಕ್ ಎಂಬವರೇ ಬಂಧಿತ ಆರೋಪಿಗಳಾಗಿದ್ದಾರೆ. ಬಂಧಿತ ಆರೋಪಿಗಳಿಂದ 5000 ರೂ. ನಗದು,1 ಕೆ.ಜಿ 955 ಗ್ರಾಂನಷ್ಟು ತಾಮ್ರದ ಕಾಯಿನ್ ಗಳು, ಕೃತ್ಯಕ್ಕೆ ಬಳಸಿದ ಮೂರು ಮೊಬೈಲ್ ಫೋನ್, ಕೃತ್ಯಕ್ಕೆ ಬಳಸಿದ ಸ್ವಿಪ್ಟ್ ಡಿಸೈರ್‌ ಕಾರು, ಆರೋಪಿಗಳು ದೂರುದಾರರಿಗೆ ನೀಡಿದ ಎರಡು ಅಸಲಿ ಚಿನ್ನದ ಕಾಯಿನ್ ಮತ್ತು 20 ನಕಲಿ ಚಿನ್ನದ ಕಾಯಿನ್‌ಗಳನ್ನು ವಶಕ್ಕೆ ಪಡೆಯಲಾಗಿದೆ.

ಕಾಫಿ ಎಸ್ಟೇಟ್‌ನಲ್ಲಿ ಚಿಕ್ಕಮಂಗಳೂರಿನ ಕೆ. ಮಹೇಶ್‌ ಮತ್ತು ಹರಪನಹಳ್ಳಿ ಶ್ರೀನಿವಾಸ್‌ ಪರಿಚಯವಾಗಿತ್ತು. ಈತ ಕರೆ ಮಾಡಿ ತನ್ನ ಬಳಿಯಲ್ಲಿ ಎರಡು ಕೆಜಿಯಷ್ಟು ಚಿನ್ನದ ಕಾಯಿನ್ ಇದೆ. ನಿಮಗೆ ಕಡಿಮೆ ಬೆಲೆಗೆ ಕೊಡುತ್ತೇನೆ. ಕೇವಲ 5 ಲಕ್ಷಕ್ಕೆ ಎರಡು ಕೆಜಿ ಚಿನ್ನದ ಕಾಯಿನ್ ನೀಡುವುದಾಗಿ ಆಮಿಷವೊಡ್ಡಿದ್ದ.

ಅಲ್ಲದೇ ನಂಬಿಕೆ ಬರಲಿ ಅನ್ನೋ ಕಾರಣಕ್ಕೆ ಮೂವರು ಆರೋಪಿಗಳು ಎರಡು ಅಸಲಿ ಚಿನ್ನದ ಕಾಯಿನ್ ನೀಡಿದ್ದರು. ಅದನ್ನು ಚೆಕ್ ಮಾಡಿದಾಗ ಅದು ಅಸಲಿಯಾಗಿತ್ತು. ಹೀಗಾಗಿ ಅಂದು ಸಂಜೆ ಪೋನ್ ಪೇ ಮೂಲಕ 5000 ಪಡೆದುಕೊಂಡಿದ್ದರು. ನಂತರದಲ್ಲಿ ಹಣವನ್ನು ಪಡೆದು ಇಪ್ಪತ್ತು ನಕಲಿ ಕಾಯಿನ್ ಗಳನ್ನು ನೀಡಿದ್ದರು. ಈ ಕಾಯಿನ್ ಗಳನ್ನು ಪರೀಕ್ಷೆಗೆ ಒಳಪಡಿಸಿದಾಗ, ಅವು ನಕಲಿ ಅನ್ನೋದು ಬಯಲಾಗಿದೆ. ತಕ್ಷಣ ಅವರು ಸಿಇಎನ್‌ ಪೊಲೀಸರಿಗೆ ದೂರು ನೀಡಿದ್ದಾರೆ. ದೂರು ದಾಖಲಿಸಿ ತನಿಖೆ ಕೈಗೊಂಡ ಪೊಲೀಸರು ಮೂವರು ಆರೋಪಿಗಳನ್ನು ಚಿಕ್ಕಮಗಳೂರು ಜಿಲ್ಲೆಯ ಸಖರಾಯಪಟ್ಟಣದ ಗೌಲಿಹಳ್ಳದ ಬಳಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದರೆ.

ಆರೋಪಿಗಳು ನಕಲಿ ಚಿನ್ನದ ಕಾಯಿನ್ ನೀಡಿ ವಂಚನೆ ನಡೆಸಿರೋದು ಇದೇ ಮೊದಲೇನಲ್ಲಾ. ಈ ಹಿಂದೆ ಕೂಡ ತಿರುಪತಿಯಲ್ಲಿ 50 ಸಾವಿರ, ಪಂಡರಾಪುರದಲ್ಲಿ 2 ಲಕ್ಷ ಹಾಗೂ ಹುಬ್ಬಳ್ಳಿಯಲ್ಲಿ1.17 ಲಕ್ಷ ರೂಪಾಯಿಯ ನಕಲಿ ಕಾಯಿನ್ ನೀಡಿ ವಂಚನೆ ನಡೆಸಿರುವುದು ಪೊಲೀಸ್ ತನಿಖೆಯಿಂದ ಬಯಲಾಗಿದೆ. ಸದ್ಯ ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರು ಪಡಿಸಲಾಗಿದ್ದು, ಪೊಲೀಸರು ಮತ್ತೆ ವಶಕ್ಕೆ ಪಡೆದುಕೊಂಡಿದ್ದಾರೆ.

- Advertisement -

Related news

error: Content is protected !!