Sunday, April 28, 2024
spot_imgspot_img
spot_imgspot_img

ಚಿರಸ್ವಿ ಫೌಂಡೇಶನ್ ಟ್ರಸ್ಟ್ (ರಿ)ಬಂಟ್ವಾಳ ಇದರ ವತಿಯಿಂದ ಶೈಕ್ಷಣಿಕ ಪ್ರಗತಿಗೆ ಸಹಾಯ ಯೋಜನೆಯಡಿಯಲ್ಲಿ ಮಕ್ಕಳಿಗೆ ಪುಸ್ತಕ ವಿತರಣೆ ಕಾರ್ಯಕ್ರಮ

- Advertisement -G L Acharya panikkar
- Advertisement -

ಬಂಟ್ವಾಳ: ಚಿರಸ್ವಿ ಫೌಂಡೇಶನ್ ಟ್ರಸ್ಟ್ (ರಿ)ಬಂಟ್ವಾಳ ಇದರ ವತಿಯಿಂದ ಶೈಕ್ಷಣಿಕ ಪ್ರಗತಿಗೆ ಸಹಾಯ ಯೋಜನೆಯಡಿಯಲ್ಲಿ ಇಂದು ಮಕ್ಕಳಿಗೆ ಪುಸ್ತಕ ವಿತರಣೆ ಕಾರ್ಯಕ್ರಮವು ಬಿ. ಸಿ. ರೋಡಿನ ಸರ್ಕಾರಿ ನೌಕರರ ಸಭಾ ಭವನದಲ್ಲಿ ನಡೆಯಿತು.

ಕುಮಾರಿ ಸಂಪ್ರೀತಾ ಮತ್ತು ಮನ್ವಿತಾ ಪ್ರಾರ್ಥನೆಗೈದು, ಗಣ್ಯರಿಂದ ದೀಪ ಪ್ರಜ್ವಲನೆ ಮೂಲಕ ಕಾರ್ಯಕ್ರಮವು ಉದ್ಘಾಟನೆಗೊಂಡಿತು.

ಟ್ರಸ್ಟಿನ ಕಾರ್ಯದರ್ಶಿಯಾಗಿರುವ ಶ್ರೀ ಸತೀಶ್ ತಲಗೂರು ರವರು ಪ್ರಾಸ್ತಾವಿಕ ಮಾತುಗಳನ್ನಾಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಟ್ರಸ್ಟಿನ ಅಧ್ಯಕ್ಷರಾದ ಶ್ರೀ ಗಣೇಶ್ ಅವರು ವಹಿಸಿದ್ದು ಶ್ರೀ ಆನಂದ ಸೇರಿದಂತೆ ಅಗ್ನಿಶಾಮಕದಳದ ಸಿಬ್ಬಂದಿ ಶ್ರೀ ಸುರೇಂದ್ರ ಮತ್ತು ಪೋಷಕರಾದ ಶ್ರೀ ಶ್ರೀನಿವಾಸ ಮತ್ತು ಚಿರಸ್ವಿ ಮಾಸಪತ್ರಿಕೆಯ ಸಹ ಸಂಪಾದಕಿ ಶ್ರೀಮತಿ ನಾಗವೇಣಿ ಇವರು ವೇದಿಕೆಯನ್ನು ಅಲಂಕರಿಸಿ ವಿದ್ಯಾರ್ಥಿಗಳಿಗೆ ಶುಭ ನುಡಿಗಳನ್ನಾಡಿದರು.

ಈ ಸಂದರ್ಭದಲ್ಲಿ ಹೆತ್ತವರ ವಿದ್ಯಾರ್ಥಿಗಳ ಮತ್ತು ನೆರೆದ ಜನಸ್ತೋಮಗಳ ಸಮ್ಮುಖದಲ್ಲಿ ಅರ್ಹ ವಿದ್ಯಾರ್ಥಿಗಳಿಗೆ ಟ್ರಸ್ಟಿನ ವತಿಯಿಂದ ಉಚಿತ ಪುಸ್ತಕ ವಿತರಿಸಲಾಯಿತು. ಜೊತೆಗೆ ಲಘು ಉಪಹಾರದ ವ್ಯವಸ್ಥೆಯನ್ನು ಮಾಡಲಾಗಿತ್ತು.

ಟ್ರಸ್ಟಿನ ಸದಸ್ಯರಾದ ಶ್ರೀ ಆನಂದ ಸ್ವಾಗತಿಸಿ, ಟ್ರಸ್ಟಿಯಾದ ಶ್ರೀ ಸುಧೀರ್ ಧನ್ಯವಾದ ಸಮರ್ಪಿಸಿದರು. ಯುವ ಸಾಹಿತಿ ಶ್ರೀ ಜಗದೀಶ್ ಬೆಳ್ಳಾರೆ ಕಾರ್ಯಕ್ರಮವನ್ನು ನಿರೂಪಿಸಿದರು.

ವಿದ್ಯಾರ್ಥಿ ಪದಾಧಿಕಾರಿಗಳ ಸಭೆ

ಟ್ರಸ್ಟಿನ ಹಾಗೂ ಪೋಷಕರ ಸಮ್ಮುಖದಲ್ಲಿ ವಿದ್ಯಾರ್ಥಿ ಪದಾಧಿಕಾರಿಗಳ ಸಭೆ ಹಾಗೂ ಚರ್ಚಾಕೂಟ ನಡೆಯಿತು. ಈ ಸಂದರ್ಭ ಎಲ್ಲಾ ವಿದ್ಯಾರ್ಥಿಗಳ ಸಲಹೆ ಸೂಚನೆಗಳನ್ನು ಪರಿಗಣಿಸಿ ಅವರ ಇಚ್ಚೆಗೆ ಅನುಸಾರವಾಗಿ ಮುಂದಿನ ದಿನಗಳಲ್ಲಿ ಶೈಕ್ಷಣಿಕ ಹಾಗೂ ಶೈಕ್ಷಣಿಕೇತರ ಚಟುವಟಿಕೆಗಳನ್ನು ನಡೆಸುವುದೆಂದು ತೀರ್ಮಾನಿಸಲಾಯಿತು.

ಪತ್ರಿಕಾ ಮಂಡಳಿ ಸಭೆ

ಕಾರ್ಯಕ್ರಮದ ಸಂದರ್ಭ ಪತ್ರಿಕಾ ಮಂಡಳಿಯ ಜವಾಬ್ದಾರಿ ಹಾಗೂ ಪತ್ರಿಕೆಯನ್ನು ನೂತನವಾಗಿ ಪ್ರಕಾಶನ ಗೊಳಿಸಲು ಕಾರ್ಯಯೋಜನೆ ಹಮ್ಮಿಕೊಳ್ಳಲಾಯಿತು.

ಈ ಸಂದರ್ಭದಲ್ಲಿ ಹಾಜರಿದ್ದ ಎಲ್ಲಾ ವಿದ್ಯಾರ್ಥಿಗಳು, ಪೋಷಕರು ಮತ್ತು ವಿದ್ಯಾರ್ಥಿ ಪದಾಧಿಕಾರಿಗಳು ಹಾಗೂ ಉದಯೋನ್ಮುಖ ನಿರೂಪಕ ಪುನೀತ್ ಸರ್ಕಳ, ಸದಾ ಟ್ರಸ್ಟಿನ ಕಾರ್ಯಕ್ರಮ ಕ್ಕೆ ಸಹಕಾರ ನೀಡುತ್ತಿರುವ ಶ್ರೀಧರ್ ಸರ್ಕಳ ಮತ್ತು ಛಾಯಾಗ್ರಾಹಕರಾದ ಶ್ರೀ ಯತೀಶ್ ಪರ್ಪುಂಜ ಮತ್ತು ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಸಹಕರಿಸಿದ ಎಲ್ಲರಿಗೂ ಚಿರಸ್ವಿ ಫೌಂಡೇಶನ್ ಟ್ರಸ್ಟ್ ( ರಿ ) ಬಂಟ್ವಾಳ ಧನ್ಯವಾದಗಳನ್ನು ಸಲ್ಲಿಸಿದೆ.

- Advertisement -

Related news

error: Content is protected !!