Saturday, May 18, 2024
spot_imgspot_img
spot_imgspot_img

ಜನೋತ್ಸವ ಮತ್ತು ಸರ್ಕಾರದ ಎಲ್ಲಾ ಕಾರ್ಯಕ್ರಮ ರದ್ದು; ಸಿಎಂ

- Advertisement -G L Acharya panikkar
- Advertisement -

ಬಿಜೆಪಿಯ ಕಾರ್ಯಕರ್ತ ಹಾಗೂ ಹಿಂದೂ ಕಾರ್ಯಕರ್ತನಾಗಿದ್ದ ಪ್ರವೀಣ್ ನೆಟ್ಟಾರು ಬರ್ಬರ, ಕೊಲೆಯ ಹಿನ್ನೆಲೆಯಲ್ಲಿ ಬಿಜೆಪಿಯ ಜನೋತ್ಸವ ಕಾರ್ಯಕ್ರಮವನ್ನು ರದ್ದು ಮಾಡಿಲಾಗಿದೆ. ಸಿಎಂ ಬಸವರಾಜ ಬೊಮ್ಮಾಯಿ ತಡರಾತ್ರಿಯಲ್ಲಿ ತುರ್ತ ಸುದ್ದಿಗೋಷ್ಠಿಯನ್ನು ನಡೆಸಿ ಈ ವಿಷಯವನ್ನು ತಿಳಿಸಿದ್ದಾರೆ.

ನನ್ನ ಸರ್ಕಾರಕ್ಕೆ 1 ವರ್ಷ ಯಡಿಯೂರಪ್ಪ ಸರ್ಕಾರಕ್ಕೆ 3 ವರ್ಷ ತುಂಬುತ್ತಿದೆ. ಜನಪರವಾಗಿ ಮಾಡಿರುವ ಕೆಲಸಕ್ಕೆ ಜನೋತ್ಸವ ಮಾಡ್ತಿದ್ದೇವೆ. ರಾಜ್ಯಾಧ್ಯಕ್ಷರ ಕಾರ್ಯ ಅತ್ಯಂತ ಶ್ಲಾಘನೀಯ. ಇಡೀ ದಿನ ಬೇರೆ ಬೇರೆ ಕಾರ್ಯಕ್ರಮದಲ್ಲಿ ಇದ್ದರು. ಮನಸ್ಸಿಗೆ ಶಾಂತಿ ಇರಲಿಲ್ಲ, ಕುಟುಂಬಸ್ಥರ ಆಕ್ರಂದನ ನೋಡಿ ನೋವಾಗಿದೆ. ಜನೋತ್ಸವ ಕಾರ್ಯಕ್ರಮ ರದ್ದು ಮಾಡುವ ತೀರ್ಮಾನ ಕೈಗೊಂಡೆ, ಭರವಸೆ ಬದುಕನ್ನ ಜನ ಬದುಕಬೇಕು. ಜನರಿಗಾಗಿ ಜನೋತ್ಸವ ಮಾಡ್ತಿದ್ದೇವೆ. ದೊಡ್ಡಬಳ್ಳಾಪುರ ಜನೋತ್ಸವ ಕಾರ್ಯಕ್ರಮ ರದ್ದು ಮಾಡಿದ್ದೇನೆ ಎಂದು ಹೇಳಿದರು.

“ಇದೊಂದು ದೊಡ್ಡ ಜಾಲ, ದೇಶದ್ರೋಹದ ಕೆಲಸ ಮಾಡ್ತಾ, ಜನಸಾಮಾನ್ಯರಲ್ಲಿ ಕೋಮು ಕೋಮುಗಳಲ್ಲಿ ದಂಗೆ ಎಬ್ಬಿಸ್ತಿದ್ದಾರೆ. ಈ ರೀತಿ ಕೃತ್ಯ ಕರ್ನಾಟಕ ಕೇರಳ ಮಧ್ಯಪ್ರದೇಶ ಉತ್ತರಪ್ರದೇಶದಲ್ಲಿ ಆಗ್ತಿದೆ. ದೇಶವ್ಯಾಪ್ತಿ ಈ ರೀತಿ ಕೃತ್ಯ ನಡಿತಿದೆ. ಕಾಂಗ್ರೆಸ್ ಸರ್ಕಾರ ಇದ್ದಾಗ 22 ಕ್ಕೂ ಹೆಚ್ಚು ಯುವಕರ ಹತ್ಯೆಯಾಯ್ತು. ನಾವು ದೃಢವಾದ ಸಂಕಲ್ಪ ಮಾಡಿದ್ದೇವೆ. ಯಾರ ಮೇಲೆ ಕೇಸ್ ಇತ್ತೊ ಅಂತಹ 200 ಕ್ಕೂ ಹೆಚ್ಚು ಕೇಸ್ ವಿತ್ ಡ್ರಾ ಮಾಡಲಾಯ್ತು, ಮಾಮೂಲು ಕ್ರಮಗಳ ಹೊರತಾಗಿ ಕಠಿಣ ಕ್ರಮ ಹಾಗೂ ಕಾನೂನುಗಳನ್ನ ತರ್ತಿವಿ, ಈಗಿರುವ ವ್ಯವಸ್ಥೆಯ ಹೊರತಾಗಿ ಸಂಪೂರ್ಣವಾಗಿ ಕಮಾಂಡೋ ಪೊರ್ಸ್ ಹಾಗೂ ಇಂಟೆಲಿಜೆನ್ಸ್ ಆಂಟಿ ಟೆರರಿಸ್ಟ್ ಕಮಾಂಡೊ ಸ್ಕ್ವಾಡ್ ರಾಜ್ಯದಲ್ಲಿ ಮಾಡ್ತಿದ್ದೇವೆ. ಕೇರಳ ಹೈ ಕೊರ್ಟ್ ಪಿ.ಎಫ್.ಐ ನ್ನ ಟೆರರಿಸ್ಟ್ ಅಂತೇಳಿದೆ. ನನ್ನ ಪ್ರತಿಯೊಬ್ಬ ಕಾರ್ಯಕರ್ತ ಹಾಗೂ ನಾಗರೀಕನ ಜೀವ ಕೂಡ ಮಹತ್ವವಾದದ್ದು,” ಎಂದು ಬೊಮ್ಮಾಯಿ ವಿವರಿಸಿದರು.

ದೊಡ್ಡಬಳ್ಳಾಪುರದ ಕಾರ್ಯಕ್ರಮ ರದ್ದಿನ ಬಗ್ಗೆ ರಾಷ್ಟ್ರೀಯ ಅಧ್ಯಕ್ಷರಿಗೆ ತಿಳಿಸಿದ್ದೇನೆ. ದುಷ್ಟ ಶಕ್ತಿಗಳ ದಮನ ಆಗುವಂತ ಕಾಲ ಬಂದಿದೆ. ಅವರ ಪಾಪದ ಕೊಡ ತುಂಬಿದೆ, ನಾನು ಗೃಹ ಸಚಿವನಿದ್ದಾಗ 15 ಕ್ಕೂ ಹೆಚ್ಚು ಜನರನ್ನ ತಿಹಾರ್ ಜೈಲಿಗೆ ಕಳಿಸಿದ್ದೇನೆ. ಇಂದು ಯಾವುದೇ ಸೆಲಬ್ರೇಷನ್ ಇರುವುದಿಲ್ಲ. ನಾನು ಪ್ರಾಮಾಣಿಕವಾಗಿ ಹೇಳ್ತಿನಿ ಸಾಕಷ್ಟು ತೊಳಲಾಟದಲ್ಲಿ ಇದೆ. ಪ್ರವೀಣ್ ತಾಯಿ ಆಕ್ರಂದನ ನೋಡಿ. ಕಾರ್ಯಕ್ರಮ ಮಾಡೋದು ಸರಿಯಲ್ಲ ಅಂತ ರದ್ದು ಮಾಡಿದೆ. ಪಿ.ಎಫ್.ಐ ಸಂಘಟನೆ ಬ್ಯಾನ್ ಅನ್ನು ಛತ್ತಿಸ್‌ಘಡ ಸರ್ಕಾರ ಮಾಡಿತ್ತು ಆದರೆ ಹೈಕೊರ್ಟ್ ಒಂದೇ ತಿಂಗಳಲ್ಲಿ ಸ್ಟೇ ಕೊಡ್ತು ಹಾಗಾಗಿ ಯೋಚಿಸಿ ನಿರ್ಧಾರ ಕೈಗೊಳ್ತಿವಿ,” ಎಂದು ಸಿಎಂ ಬಸವರಾಜ ಬೊಮ್ಮಾಯಿ ಹೇಳಿದರು.

ಪ್ರವೀಣ್ ಹತ್ಯೆಯನ್ನು ಖಂಡಿಸಿ ಮಂಗಳೂರಿನಲ್ಲಿ ವ್ಯಾಪಕವಾದ ಖಂಡನೆ ವ್ಯಕ್ತವಾಗಿತ್ತು. ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲು ಸಾಂತ್ವಾನ ಹೇಳಲು ಹೋದ ಸಮಯದಲ್ಲಿ ಅವರ ಕಾರನ್ನು ಅಡ್ಡಗಟ್ಟಿ ಆಕ್ರೋಶ ವ್ಯಕ್ತಪಡಿಸಲಾಗಿತ್ತು. ಮಂಗಳೂರು ಭಾಗದ ಬಿಜೆಪಿ ಕಾರ್ಯಕರ್ತರು ಸಾಮೂಹಿಕ ರಾಜೀನಾಮೆಯನ್ನು ನೀಡಿದರು. ಈ ಎಲ್ಲಾ ಅಂಶಗಳನ್ನು ಗಮನಿಸಿ ತಮ್ಮ ಪಕ್ಷದ ಗಟ್ಟಿ ಬೇರುಳ್ಳ ಪ್ರದೇಶದಲ್ಲಿ ನಡೆಯುತ್ತಿರುವ ವಿದ್ಯಮಾನದಿಂದಾಗಿ ಸರ್ಕಾರ ತನ್ನ ಎಲ್ಲಾ ಕಾರ್ಯಕ್ರಮವನ್ನು ರದ್ದು ಮಾಡಿದೆ.

- Advertisement -

Related news

error: Content is protected !!