Friday, April 19, 2024
spot_imgspot_img
spot_imgspot_img

ಜಯಕರ್ನಾಟಕ ಜನಪರ ವೇದಿಕೆಯ ದಕ್ಷಿಣ ಕನ್ನಡ ಜಿಲ್ಲಾಧ್ಯಕ್ಷರಾಗಿ ಪವೀಣ್ ಶೆಟ್ಟಿ ತಿಂಗಳಾಡಿ ಆಯ್ಕೆ: ಪ್ರಜ್ಞಾ ಆಶ್ರಮದಲ್ಲಿ ಗುಣರಂಜನ್ ಶೆಟ್ಟಿಯವರ ಹುಟ್ಟುಹಬ್ಬ ಆಚರಣೆ

- Advertisement -G L Acharya panikkar
- Advertisement -

ಪುತ್ತೂರು: ಜಯಕರ್ನಾಟಕ ಜನಪರ ವೇದಿಕೆಯ ದಕ್ಷಿಣ ಕನ್ನಡ ಜಿಲ್ಲಾ ನೂತನ ಅಧ್ಯಕ್ಷರ ನೇಮಕ ಕಾರ್ಯಕ್ರಮ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ನಡೆಯಿತು. ಕಾರ್ಯಕ್ರಮದಲ್ಲಿ ನೂತನ ಜಿಲ್ಲಾಧ್ಯಕ್ಷ ಸ್ಥಾನಕ್ಕೆ ಕೆದಂಬಾಡಿ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ಉದ್ಯಮಿ ಪವೀಣ್ ಶೆಟ್ಟಿಯವರನ್ನು ನೇಮಕ ಮಾಡಲಾಯಿತು.

ಪ್ರವೀಣ್ ಶೆಟ್ಟಿ ತಿಂಗಳಾಡಿ ಅವರ ಸಾಮಾಜಿಕ ಸೇವೆ ಮತ್ತು ಸಂಘಟನೆಯ ಮೇಲಿನ ಅಭಿಮಾನವನ್ನು ಗಮನಿಸಿ ಜಯಕರ್ನಾಟಕ ಜನಪರ ವೇದಿಕೆ ಸಂಘಟನೆಯ ಪರವಾಗಿ ನಾಡಿನ ನೆಲ, ಜಲ, ಭಾಷೆ, ಪರಿಸರ ಸಂರಕ್ಷಣೆಯ ಜೊತೆಗೆ ಸಾಮಾಜಿಕ ಕಳಕಳಿಯೊಂದಿಗೆ ಕಾನೂನಿನ ಮತ್ತು ಸಂವಿಧಾನದ ಚೌಕಟ್ಟಿನಲ್ಲಿ ಹೋರಾಟ ಕಟ್ಟಲು ಮತ್ತು ಸಮಾಜದ ಜನರಿಗೆ ಧ್ವನಿಯಾಗಿ, ಜನರಿಂದ, ಜನರಿಗಾಗಿ, ಜನರಿಗೋಸ್ಕರ ಎಂಬ ಹೊಸ ಹುರುಪಿನೊಂದಿಗೆ ಸೇವೆ ಸಲ್ಲಿಸಲು ಸಂಸ್ಥಾಪಕ ಅಧ್ಯಕ್ಷ ಬಿ. ಗುಣರಂಜನ್ ಶೆಟ್ಟಿಯವರ ಮತ್ತು ರಾಜ್ಯ ಸಮಿತಿಯ ಆದೇಶದ ಮೇರೆಗೆ ದಕ್ಷಿಣ ಕನ್ನಡ ಜಿಲ್ಲೆಯ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಯಿತು.

ರಾಜ್ಯ ಸಂಚಾಲಕರಾದ ರಾಮದಾಸ್ ಶೆಟ್ಟಿ ಯವರು ನೂತನ ಜಿಲ್ಲಾಧ್ಯಕ್ಷರಾಗಿ ಪ್ರವೀಣ್ ಶೆಟ್ಟಿ ತಿಂಗಳಾಡಿಯವರ ಹೆಸರನ್ನು ಘೋಷಣೆ ಮಾಡಿ, ಜಯಕರ್ನಾಟಕ ಜನಪರ ವೇದಿಕೆಯ ಧ್ವಜ ನೀಡಿ ನೂತನ ಜಿಲ್ಲಾಧ್ಯಕ್ಷರನ್ನು ನೇಮಕ ಮಾಡಿದರು.

ಜಯಕರ್ನಾಟಕ ಜನಪರ ವೇದಿಕೆ ಈಗಾಗಲೇ ರಾಜ್ಯದ ೧೭ ಜಿಲ್ಲೆಗಳಲ್ಲಿ ತಮ್ಮ ಕಾರ್ಯಚಟುವಟಿಕೆಗಳನ್ನು ನಡೆಸುತ್ತಾ ಬಂದಿದೆ. ಯುವ ಸಂಸ್ಥಾಪಕ ಅಧ್ಯಕ್ಷ ಬಿ ಗುಣರಂಜನ್ ಶೆಟ್ಟಿಯವರ ನೇತೈತ್ವದಲ್ಲಿ, ರಾಜ್ಯಾಧ್ಯಕ್ಷ ಆರ್. ಚಂದ್ರಪ್ಪನವರ ಮಾರ್ಗದರ್ಶನದಲ್ಲಿ ಈಗಾಗಲೇ ಬೆಂಗಳೂರು ಸೇರಿದಂತೆ ರಾಜ್ಯದ ಹಲವು ಜಿಲ್ಲೆಗಳಲ್ಲಿ ಉತ್ತಮ ಜನಪರ ಯೋಜನೆಗಳನ್ನು ನಡೆಸುತ್ತಾ ಬಂದಿದೆ.

ಜೊತೆಗೆ ಜಯಕರ್ನಾಟಕ ಜನರಪ ವೇದಿಕೆ ನಡಿಗೆ.. ನಿಸರ್ಗದ ಕಡೆಗೆ ಎಂಬ ಶೀರ್ಷಕೆ ಅಡಿಯಲ್ಲಿ ಮನೆಗೊಂದು ಮರ ಊರಿಗೊಂದು ಕೆರೆ ಎಂಬ ಧ್ಯೇಯ ವಾಕ್ಯದೊಂದಿಗೆ ಹಲವು ಪರಿಸರ ಸ್ನೇಹಿ ಕಾರ್ಯಗಳನ್ನು ಮಾಡುತ್ತಾ ಬಂದಿದೆ.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಎಪಿಎಂಸಿ ಮಾಜಿ ಅಧ್ಯಕ್ಷ ಬಿಜೆಪಿ ಹಿರಿಯ ಮುಖಂಡ ಬೂಡಿಯಾರ್ ರಾಧಾಕೃಷ್ಣ ರೈ ಮಾತನಾಡಿ, ದೇಶಕ್ಕೆ ಕಪ್ಪುಚುಕ್ಕೆಯಾಗಿರುವ ಭ್ರಷ್ಟಾಚಾರವನ್ನು ನಿರ್ಮೂಲನೆ ಮಾಡಲು ಯುವಕರು ಮುಂದೆ ಬರಬೇಕು ಎಂದು ಕರೆ ನೀಡಿದರು. ಇದೀಗ ಯುವ ನಾಯಕ, ಪುತ್ತೂರಿನವರೇ ಆಗಿರುವ ಗುಣರಂಜನ್ ಶೆಟ್ಟಿಯವರ ನೇತೃತ್ವದಲ್ಲಿ ಜಯಕರ್ನಾಟಕ ಜನಪರ ವೇದಿಕೆ ರಾಜ್ಯದ ೧೭ ಜಿಲ್ಲೆಗಳಲ್ಲಿ ಹಲವು ಜನಪರ ಕಾರ್ಯಕ್ರಮಗಳನ್ನು ನಡೆಸಿ ಜನರ ಮೆಚ್ಚುಗೆಗೆ ಪಾತ್ರವಾಗಿದೆ, ಪುತ್ತೂರಿನಲ್ಲಿಯೂ ಜನಸ್ನೇಹಿ ಕಾರ್ಯಗಳನ್ನು ಮಾಡುವಂತಾಗಲಿ ಎಂದು ಶುಭ ಹಾರೈಸಿದರು.

ಹಿರಿಯರಾದ ವಿಶ್ವಹಿಂದೂ ಪರಿಷತ್ ಮಾಜಿ ಜಿಲ್ಲಾಧ್ಯಕ್ಷ ದಂಬೆಕಾನ ಸದಾಶಿವ ರೈ ಮಾತನಾಡಿ, ನನ್ನ ಬಾಲ್ಯ, ಸ್ನೇಹಿತರೂ, ಸಹಪಾಠಿಯೂ ಆಗಿದ್ದ ಮುತ್ತಪ್ಪ ರೈಯವರ ನೇತೃತ್ವದಲ್ಲಿ ಜಯಕರ್ನಾಟಕ ಸಂಘಟನೆ ಹಲವು ಕಾರ್ಯಗಳನ್ನು ನಡೆಸಿದೆ. ಯುವನಾಯಕ ಗುಣರಂಜನ್ ಶೆಟ್ಟಿಯವರ ನೇತೃತ್ವದ ಜಯಕರ್ನಾಟಕ ಜನಪರ ವೇದಿಕೆ ಕೂಡ ಬಹಳಷ್ಟು ಅರ್ಥಪೂರ್ಣ ಕಾರ್ಯಕ್ರಮಗಳನ್ನು ರಾಜ್ಯದ ಹಲವೆಡೆ ನಡೆಸುತ್ತಿದೆ, ಈ ಸಂಘಟನೆಯ ಮೂಲಕ ಪುತ್ತೂರಿನಲ್ಲಿಯೂ ಜನಪರ ಕಾರ್ಯಗಳನ್ನು ಮಾಡುವಂತಾಗಲಿ ಎಂದು ಹಾರೈಸಿದರು.

ಜಯಕರ್ನಾಟಕ ಜನಪರ ವೇದಿಕೆಯ ರಾಜ್ಯ ಸಂಚಾಲಕ, ವಿಟಿವಿ ಮುಖ್ಯಸ್ಥ ರಾಮದಾಸ್ ಶೆಟ್ಟಿ ವಿಟ್ಲರವರು ಸ್ವಾಗತಿಸಿ, ನೂತನ ಜಿಲ್ಲಾಧ್ಯಕ್ಷರನ್ನು ನೇಮಕ ಮಾಡಿ ಬಳಿಕ ಪ್ರಾಸ್ತಾವಿಕವಾಗಿ ಮಾತನಾಡಿದರು.

ನೂತನ ಜಿಲ್ಲಾಧ್ಯಕ್ಷ ಪ್ರವೀಣ್ ಶೆಟ್ಟಿ ತಿಂಗಳಾಡಿ ಮಾತನಾಡಿ ಜಿಲ್ಲೆಯಲ್ಲಿ ಜನಪರ ಯೋಜನೆಗಳನ್ನು ನಡೆಸಲು ಎಲ್ಲರ ಸಹಕಾರ ಕೋರಿದರು. ನವೀನ್ ಕುಮಾರ್ ರೈ, ಕೈಕಾರ ಅತಿಥಿಗಳಿಗೆ ಪುಷ್ಪಗುಚ್ಛ ನೀಡಿ ಸ್ವಾಗತಿಸಿದರು.

ವಿಟಿವಿ ನಿರೂಪಕಿ, ಜಯಕರ್ನಾಟಕ ಜನಪರ ವೇದಿಕೆಯ ದಕ್ಷಿಣ ಕನ್ನಡ ಜಿಲ್ಲಾ ಮಹಿಳಾ ಕಾರ್ಯಕಾರಿಣಿ ಸದಸ್ಯೆ ಅಶ್ವಿನಿ ಪೆರುವಾಯಿ ಕಾರ್ಯಕ್ರಮ ನಿರೂಪಿಸಿದರು. ಪ್ರಮುಖರಾದ ಪುರುಷೋತ್ತಮ ಶೆಟ್ಟಿ ನುಳಿಯಾಲು, ಕಾವ್ಯ ಶೆಟ್ಟಿ, ಸತೀಶ್ ರೈ ನಡುಬೈಲು, ಸಮರ್ಥ್ ಭಂಢಾರಿ, ಕಾರ್ತಿಕ್ ರೈ ಸುಳ್ಯ, ಜಗನ್ನಾಥ್ ರೈ ಬಿ.ಸಿ ರೋಡ್, ಶ್ರೀಧರ್‍ ರೈ ಸುಳ್ಯ, ಕೆದಂಬಾಡಿ ಗ್ರಾಮ ಪಂ ಸದಸ್ಯ ಭಾಸ್ಕರ್‍ ರೈ ಮಿತ್ರಂಪಾಡಿ, ಅಮರ್‍ ರೈ, ದರ್ಬೆ ಬೊಟ್ಯಾಡಿ, ಮನೋಜ್ ರೈ ಮಠ, ಸದಾಶಿವ ಶೆಟ್ಟಿ, ತಾರಾನಾಥ್ ರೈ ಕೆದಂಬಾಡಿ ಮಠ, ನಿಶಾಂತ್ ರೈ ತಿಂಗಳಾಡಿ, ಜಗನ್ನಾಥ್ ರೈ, ಲೋಕನಾಥ ಪಕ್ಕಳ ಸೇರಿದಂತೆ ಹಲವು ಜನರು ಉಪಸ್ಥಿತರಿದ್ದರು.

ಬೀರಮಲೆ ಪ್ರಜ್ಞಾ ವಿಕಲ ಚೇತನ ಆಶ್ರಮದಲ್ಲಿ ಗುಣರಂಜನ್ ಶೆಟ್ಟಿಯವರ ಹುಟ್ಟುಹಬ್ಬ ಆಚರಣೆ

ಜಯಕರ್ನಾಟಕ ಜನಪರ ವೇದಿಕೆಯ ಯುವ ಸಂಸ್ಥಾಪಕ ಅಧ್ಯಕ್ಷ ಬಿ. ಗುಣರಂಜನ್ ಶೆಟ್ಟಿಯವರ ಹುಟ್ಟುಹಬ್ಬವನ್ನು ಬೀರಮಲೆಯಲ್ಲಿರುವ ಪ್ರಜ್ಞಾ ವಿಕಲ ಚೇತನ ಆಶ್ರಮದಲ್ಲಿ ವಿಕಲಚೇತನರೊಂದಿಗೆ ಆಚರಿಸಲಾಯಿತು.

ಜಯಕರ್ನಾಟಕ ಜನಪರ ವೇದಿಕೆಯ ರಾಜ್ಯ ಸಂಚಾಲಕ ರಾಮದಾಸ್ ಶೆಟ್ಟಿ, ನೂತನ ಜಿಲ್ಲಾಧ್ಯಕ್ಷ ಪುವೀಣ್ ಕುಮಾರ್ ಶೆಟ್ಟಿ ತಿಂಗಳಾಡಿ ಸಹಿತ ಹಲವರು ಉಪಸ್ಥಿತರಿದ್ದರು.

ಸುದ್ದಿ ಜನಾಂದೋಲನ ವೇದಿಕೆಯ ನೇತೃತ್ವದಲ್ಲಿ ಭ್ರಷ್ಟಾಚಾರದ ವಿರುದ್ಧ ನಿರಂತರವಾಗಿ ನಡೆಯುತ್ತಿರುವ ಅಭಿಯಾನಕ್ಕೆ ಜಯಕರ್ನಾಟಕ ಜನಪರ ವೇದಿಕೆಯ ಕಾರ್ಯಕ್ರಮದಲ್ಲಿ ಬೆಂಬಲ ಘೋಷಿಸಲಾಯಿತು. ಭ್ರಷ್ಟಾಚಾರಕ್ಕೆ ಬಹಿಷ್ಕಾರ-ಉತ್ತಮ ಸೇವೆಗೆ ಪುರಸ್ಕಾರ’ ಫಲಕ ಸ್ವೀಕರಿಸಿದ ಬಿಜೆಪಿಯ ಹಿರಿಯ ಮುಖಂಡ ಬೂಡಿಯಾರ್ ರಾಧಾಕೃಷ್ಣ, ರೈ, ವಿಶ್ವಹಿಂದೂ ಪರಿಷತ್ ಮಾಜಿ ಜಿಲ್ಲಾಧ್ಯಕ್ಷ ದಂಬೆಕಾನ ಸದಾಶಿವ ರೈ, ಜಯಕರ್ನಾಟಕ ಜನಪರ ವೇದಿಕೆಯ ರಾಜ್ಯ ಸಂಚಾಲಕ ರಾಮದಾಸ್ ಶೆಟ್ಟಿ ವಿಟ್ಲ. ಪುರುಷೋತ್ತಮ ಶೆಟ್ಟಿ ನುಳಿಯಾಲು, ನೂತನ ಜಿಲ್ಲಾಧ್ಯಕ್ಷ ಪ್ರವೀಣ್ ಕುಮಾರ್ ಶೆಟ್ಟಿ ತಿಂಗಳಾಡಿ, ಜಿಲ್ಲಾ ಕಾರ್ಯಕಾರಿಣಿ ಸದಸ್ಯ ಕಾವ್ಯ ಶೆಟ್ಟಿ ನುಳಿಯಾಲು, ಮತ್ತಿತರರು ಬೆಂಬಲ ವ್ಯಕ್ತಪಡಿಸಿದರು.

ಸುದ್ದಿ ಬಿಡುಗಡೆಯ ಪ್ರಧಾನ ವರದಿಗಾರ ಸಂತೋಷ್ ಕುಮಾರ್ ಶಾಂತಿನಗರರವರು ಸುದ್ದಿ ಜನಾಂದೋಲನದ ಕುರಿತು ಮಾಹಿತಿ ನೀಡಿದರು. ಸುದ್ದಿ ಬಳಗದ ಮೋಹನ್ ಶೆಟ್ಟಿ ಉರುವಾಲು ಮತ್ತು ವಸಂತ ಸಾಮೆತ್ತಡ್ಕ ಉಪಸ್ಥಿತರಿದ್ದರು.

- Advertisement -

Related news

error: Content is protected !!