- Advertisement -
- Advertisement -
ಕಡಬ; ಶಿರಾಡಿ ಘಾಟ್ ನಲ್ಲಿ ಸಂಚರಿಸುತ್ತಿದ್ದ ಲಾರಿಯೊಂದು ಬೆಂಕಿಗಾಹುತಿಯಾದ ಘಟನೆ ಇಂದು ಬೆಳಗ್ಗೆ ನಡೆದಿದೆ.
ಮಂಗಳೂರು ಭಾಗದಿಂದ ಬೆಂಗಳೂರು ಹಾಗೂ ಆಂಧ್ರಪ್ರದೇಶದ ಕಡೆಗೆ ಬಾಕ್ಸೆಟ್ ಸಾಗಿಸುತ್ತಿದ್ದ ಲಾರಿಯಲ್ಲಿ ಈ ಬೆಂಕಿ ಕಾಣಿಸಿಕೊಂಡಿದ್ದು, ಲಾರಿಯಲ್ಲಿ ಬೆಂಕಿ ಕಾಣಿಸಿಕೊಂಡ ಪರಿಣಾಮ ಕೆಲ ಸಮಯ ರಾಷ್ಟ್ರೀಯ ಹೆದ್ದಾರಿಯಲ್ಲಿ ವಾಹನ ಸಂಚಾರ ಸ್ಥಗಿತಗೊಂಡಿತ್ತು.
ಬೆಂಕಿ ಕಾಣಿಸಿಕೊಳ್ಳುತ್ತಿದ್ದಂತೆ ಲಾರಿ ಚಾಲಕ ಲಾರಿಯಿಂದ ಹಾರಿ ಅಪಾಯದಿಂದ ಪಾರಾಗಿದ್ದಾನೆ.ಡಿಸೇಲ್ ಟ್ಯಾಂಕ್ ನಿಂದ ರಸ್ತೆಯ ತುಂಬಾ ಡಿಸೇಲ್ ಚೆಲ್ಲಿದ್ದು, ಆ ಡಿಸೇಲ್ ಗೆ ಬೆಂಕಿ ತಗುಲಿ ಲಾರಿಗೆ ಆವರಿಸಿದೆ ಎಂದು ಸ್ಥಳೀಯರು ಮಾಹಿತಿ ನೀಡಿದ್ದಾರೆ.
ಡೀಸೆಲ್ ಲಾರಿಯಿಂದ ಹೇಗೆ ಲೀಕ್ ಆಯಿತು ಮತ್ತು ಬೆಂಕಿ ಹೇಗೆ ಹಚ್ಚಿಕೊಂಡಿತು ಅನ್ನೋದು ಮಾತ್ರ ನಿಗೂಢವಾಗಿದ್ದು, ಉಪ್ಪಿನಂಗಡಿ ಪೋಲೀಸರು ಪರಿಶೀಲನೆ ನಡೆಸಿದ್ದಾರೆ.
- Advertisement -







