Friday, March 29, 2024
spot_imgspot_img
spot_imgspot_img

‘ಜಿ 20 ಅಧ್ಯಕ್ಷ ಸ್ಥಾನ ಭಾರತಕ್ಕೆ ಸುವರ್ಣಾವಕಾಶ’-ಮನ್‌ ಕಿ ಬಾತ್‌ನಲ್ಲಿ ಪ್ರಧಾನಿ ಮೋದಿ

- Advertisement -G L Acharya panikkar
- Advertisement -

ನವದೆಹಲಿ: ಭಾರತವು ಜಿ 20 ಅಧ್ಯಕ್ಷ ಸ್ಥಾನ ಪಡೆದುಕೊಂಡಿರುವುದು ದೇಶದ ಸ್ವಾತಂತ್ರ್ಯದ ಅಮೃತ ಮಹೋತ್ಸವ ಸಂದರ್ಭದಲ್ಲಿ ಒಂದೊಳ್ಳೆ ಸುವರ್ಣಾವಕಾಶ ಎದೇಶದ ಸ್ವಾತಂತ್ರ್ಯದ ಅಮೃತ ಮಹೋತ್ಸವ ಸಂದರ್ಭದಲ್ಲಿ ಒಂದೊಳ್ಳೆ ಸುವರ್ಣಾವಕಾಶ ಎಂದು ಪ್ರಧಾನಿ ನರೇಮದ್ರ ಮೋದಿ ಪ್ರತಿಪಾದಿಸಿದ್ದಾರೆ.

ತಮ್ಮ ಮಾಸಿಕ ರೇಡಿಯೋ ಕಾರ್ಯಕ್ರಮ ಮನ್ ಕಿ ಬಾತ್‌ನ 95 ನೇ ಆವೃತ್ತಿಯನ್ನು ಉದ್ದೇಶಿಸಿ ಭಾನುವಾರ ಮಾತನಾಡಿದ ಅವರು, ಇದೇ ಡಿಸೆಂಬರ್‌1ರಿಂದ ಮುಂದಿನ ಒಂದು ವರ್ಷದವರೆಗೆ ಭಾರತ ಜಿ20 ಅಧ್ಯಕ್ಷ ಸ್ಥಾನವನ್ನು ವಹಿಸಿಕೊಳ್ಳಲಿದೆ. ದೇಶಕ್ಕೆ ಜಿ20 ಅಧ್ಯಕ್ಷ ಸ್ಥಾನ ಸಿಕ್ಕಿರುವುದ ಹೆಮ್ಮೆಯೊಂದಿಗೆ ದೇಶದ ಹಲವು ಮಂದಿ ಪತ್ರ ಬರೆದು ಶುಭ ಕೋರಿದ್ದಾರೆ ಎಂದರು.

ಜಾಗತಿಕ ಶಾಂತಿ, ಏಕತೆ, ಸುಸ್ಥಿರ ಅಭಿವೃದ್ದಿಗೆ ನಾವು ಗಮನ ಹರಿಸುವ ಮೂಲಕ ಜಾಗತಿಕ ಒಳಿತಿಗೆ ಪ್ರಾಧಾನ್ಯ ನೀಡಬೇಕು. ಈ ವಿಚಾರಗಳಲ್ಲಿ ಎದುರಾಗುವ ಸವಾಲುಗಳಿಗೂ ತಕ್ಕ ಪರಿಹಾರ ಭಾರತದಲ್ಲಿದೆ. ಒಂದು ಭೂಮಿ, ಒಂದು ಕುಟುಂಬ, ಒಂದು ಭವಿಷ್ಯ ಧ್ಯೇಯವನ್ನು ವಿಶ್ವಕ್ಕೇ ಪಸರಿಸಿದ ದೇಶ ನಮ್ಮದು ಎಂದವರು ತಿಳಿಸಿದರು.

ಈ ಅಪೂರ್ವ ಅವಕಾಶದ ಸಂದರ್ಭದಲ್ಲಿ ಜಾಗತಿಕ ಒಳಿತು ಮತ್ತು ಕಲ್ಯಾಣವೇ ನಮ್ಮ ಆದ್ಯತೆ ಎಂದರು.

ಇನ್ನು ವಿಕ್ರಮ್ ಎಸ್’ ರಾಕೆಟ್‌ನ್ನು ಬಾಹ್ಯಾಕಾಶಕ್ಕೆ ಉಡಾವಣೆ ಮಾಡಿದ ಇಸ್ರೋ ಸಾಧನೆಯನ್ನು ಶ್ಲಾಘಿಸಿದ ಪ್ರಧಾನಿ ಮೋದಿ, ಇದು ನಮ್ಮ ದೇಶದ ಹೆಮ್ಮೆ. ಖಾಸಗಿ ಸ್ಟಾರ್ಟ್ ಅಪ್ ಈ ರಾಕೆಟ್‌ನ್ನು ವಿನ್ಯಾಸಗೊಳಿಸಿ ಅಭಿವೃದ್ದಿಪಡಿಸಿದ್ದು, ಹಲವಾರ ವೈಶಿಷ್ಟ್ಯಗಳನ್ನೊಳಗೊಂಡ ರಾಕೆಟ್ ಬಾಹ್ಯಾಕಾಶಕ್ಕೆ ಉಡಾವಣೆಗೊಂಡಿದೆ. ಬಾಹ್ಯಾಕಾಶ ಕ್ಷೇತ್ರದಲ್ಲಿ ಭಾರತ ಯಶಸ್ಸು ಸಾಧಿಸುತ್ತಿದೆ ಎಂದು ಬಣ್ಣಿಸಿದರು.

ಭಾರತದ ಯುವಶಕ್ತಿಗೆ ಅವಕಾಶ ಹೆಚ್ಚಿದೆ. ದೊಡ್ಡ ಯೋಚನೆ, ಸಾಧನೆಗಳು ಗುರಿಯಾಗಬೇಕು. ನವೆಂಬರ್ 18ರಂದು ಬಾಹ್ಯಾಕಾಶಕ್ಕೆ ಉಡಾವಣೆಗೊಂಡಿರುವ ವಿಕ್ರಮ್ ಎಸ್‌ನ ಉಡಾವಣಾ ಮಿಷನ್‌ಗೆ ಪ್ರಾರಂಭ ಎಂದು ಹೆಸರಿಡಲಾಗಿದೆ. ಇದು ಯುವಕರಿಗೆ ಬಾಹ್ಯಾಕಾಶ ಕ್ಷೇತ್ರದಲ್ಲಿ ಹೊಸ ಅವಕಾಶ ಸೃಷ್ಟಿಸುವ ಪ್ರಾರಂಭವಾಗಿದೆ ಎಂದು ಇದೇ ವೇಳೆ ತಿಳಿಸಿದರು.

- Advertisement -

Related news

error: Content is protected !!