Tuesday, May 21, 2024
spot_imgspot_img
spot_imgspot_img

ಜೆಸಿಐ ವಲಯ 15ರ Zoncon 2021ರಲ್ಲಿ ಜೆಸಿಐ ವಿಟ್ಲ ಘಟಕದ ಅಧ್ಯಕ್ಷ JFD ಚಂದ್ರಹಾಸ ಶೆಟ್ಟಿಯವರಿಗೆ ‘ಅತ್ಯುತ್ತಮ ಘಟಕಾಧ್ಯಕ್ಷ ವಿನ್ನರ್’ ವಲಯ ಪ್ರಶಸ್ತಿ

- Advertisement -G L Acharya panikkar
- Advertisement -
vtv vitla

ಜೆಸಿಐ ವಲಯ-15ರ ಝೋನ್‌ಕಾನ್ 2021 ‘ಅದ್ಧೂರಿ’ ಕಾರ್ಯಕ್ರಮವು ಡಿಸೆಂಬರ್ 4 ಮತು 5 ರಂದು ‘ಬಂಟವಾಳದ ಬಂಟರ ಭವನ’ದಲ್ಲಿ ನಡೆಯಿತು. ಈ ಕಾರ್ಯಕ್ರಮದಲ್ಲಿ 2021ರಲ್ಲಿ ಸಾಧನೆಗೈದು ಘಟಕಗಳಲ್ಲಿ ಮನ್ನಣೆ ಹಾಗೂ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು.

vtv vitla

2021ರಲ್ಲಿ ಜೆಸಿಐ ವಿಟ್ಲ ಘಟಕವು ಅತ್ಯುತ್ತಮವಾಗಿ ಕಾರ್ಯನಿರ್ವಹಿಸಿದ್ದು ಎಲ್ಲಾ ವಿಭಾಗಗಳಲ್ಲಿಯೂ ಸಾಧನೆಗೈದು ಹಲವಾರು ಮನ್ನಣೆಗಳನ್ನು ಹಾಗೂ ಪ್ರಶಸ್ತಿಗಳನ್ನು ಮುಡಿಗೇರಿಸಿದೆ. ಈ ಮೂಲಕ 41 ವರ್ಷ ಇತಿಹಾಸವುಳ್ಳ ವಿಟ್ಲ ಜೆಸಿಐಯ ಘನತೆ ವಲಯ ಮಟ್ಟದಲ್ಲಿ ಹಾಗೂ ರಾಷ್ಟ್ರೀಯ ಮಟ್ಟದಲ್ಲಿ ಮಿಂಚುವಂತಾಗಿದೆ. ಜೆಸಿಐ ವಿಟ್ಲ ಘಟಕದ ಅಧ್ಯಕ್ಷರಾದ JFD ಚಂದ್ರಹಾಸ ಶೆಟ್ಟಿಯವರು “ಅತ್ಯುತ್ತಮ ಘಟಕಾಧ್ಯಕ್ಷ ವಿನ್ನರ್” ವಲಯ ಪ್ರಶಸ್ತಿಯನ್ನು ಪಡೆದರು.

ಅಲ್ಲದೆ ಕಾರ್ಯಕ್ರಮ ವಿಭಾಗದಲ್ಲಿ ಜೆಸಿಐ ವಿಟ್ಲ ಘಟಕವು Top-1 ಸ್ಥಾನವನ್ನು, UNSDG ವಿಭಾಗದಲ್ಲಿ ಅತ್ಯುತ್ತಮ ಘಟಕ ರನ್ನರ್ ಪ್ರಶಸ್ತಿ, ಅಭಿವೃದ್ಧಿ ಹಾಗೂ ಬೆಳವಣಿಗೆ ವಿಭಾಗದಲ್ಲಿ ಅತ್ಯುತ್ತಮ ಘಟಕ ರನ್ನರ್ ಪ್ರಶಸ್ತಿ, ಮ್ಯಾನೆಜ್‌ಮೆಂಟ್ ವಿಭಾಗದ ಡೈಮಂಡ್ ಲೋಮ್ ಎವರ್ಡ್, ತರಬೇತಿ ವಿಭಾಗದಲ್ಲಿ ಅತ್ಯುತ್ತಮ ಘಟಕ ಪ್ರಶಸ್ತಿ ಹಾಗೂ ಜೆಸಿರೇಟ್ ವಿಭಾಗದಲ್ಲಿ ಅತ್ಯುತ್ತಮ ಘಟಕ ಪ್ರಶಸ್ತಿ ಹೀಗೆ ಒಟ್ಟು 21 ಮನ್ನಣೆ ಹಾಗೂ ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡಿದೆ. ಈ ಪ್ರಶಸ್ತಿಗಳನ್ನು ಝೋನ್‌ಕಾನ್ ಕಾರ್ಯಕ್ರಮದಲ್ಲಿ ಜೆಸಿಐ ವಲಯ 15ರ ವಲಯಾಧ್ಯಕ್ಷ ಜೆಸಿಐ ಸೆನೆಟರ್ PPP ಸೌಜನ್ಯ ಹೆಗ್ಡೆ ನೀಡಿದರು.

vtv vitla
vtv vitla

ಈ ಸಂದರ್ಭದಲ್ಲಿ IPZP ಹಾಗೂ G&D ವಿಭಾಗದ ರಾಷ್ಟ್ರೀಯ ನಿರ್ದೇಶಕರಾದ ಜೆಸಿಐ PPP ಕಾರ್ತಿಕೇಯ ಮದ್ಯಸ್ಥ ಹಾಗೂ, ವಲಯ ಉಪಾಧ್ಯಕ್ಷರು, ವಲಯ ನಿರ್ದೇಶಕರು ಉಪಸ್ಥಿತರಿದ್ದರು.

ವಿಟ್ಲ ಘಟಕದ ಅಧ್ಯಕ್ಷರಾದ JFD ಚಂದ್ರಹಾಸ ಶೆಟ್ಟಿಯವರು ಪ್ರಶಸ್ತಿ ಸ್ವೀಕರಿಸುವ ಸಂದರ್ಭದಲ್ಲಿ ಪೂರ್ವಾಧ್ಯಕ್ಷರಾದ JFP ಮೋಹನ್, ಜೆಸಿಐ ಸೆನೆಟರ್ ಬಾಬು ಕೆ.ವಿ., ಜೆಸಿ ರಶೀದ್ ವಿಟ್ಲ, ಜೆಸಿ ಈಶ್ವರ ಭಟ್, ಜೆಸಿಐ ಸೆನೆಟರ್ ಬಾಲಕೃಷ್ಣ, ನಿಕಟಪೂರ್ವ ಅಧ್ಯಕ್ಷರಾದ JFM ದಿನೇಶ್ ಶೆಟ್ಟಿ, ವಲಯಾಧಿಕಾರಿ JFM ಜೈಕಿಶನ್, ಕಾರ್ಯದರ್ಶಿ JFD ಪರಮೇಶ್ವರ ಹೆಗಡೆ, ಜೆಸಿರೇಟ್ ಅಧ್ಯಕ್ಷರಾದ JFM ಸಾರಿಕಾ ಚಂದ್ರಹಾಸ್ ಶೆಟ್ಟಿ ಹಾಗೂ ಪದಾಧಿಕಾರಿಗಳು, ಸದಸ್ಯರು, ಜೆಜೆಸಿ ಸದಸ್ಯರು, ಜೇಸಿರೇಟ್ ಸದಸ್ಯರು ಭಾಗವಹಿಸಿದರು.

vtv vitla
vtv vitla
vtv vitla
- Advertisement -

Related news

error: Content is protected !!