- Advertisement -
- Advertisement -


ಬೆಂಗಳೂರು: ಜೆಸಿಬಿ ಹರಿದು ಮೂರು ವರ್ಷದ ಮಗು ಸಾವನಪ್ಪಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಮೃತ ಬಾಲಕ ಸಿಮಿಯಾನ್(3) ಎನ್ನಲಾಗಿದೆ.

ನಿರ್ಮಾಣ ಹಂತದ ಕಟ್ಟಡದ ಕೆಲಸದ ವೇಳೆ ಜೆಸಿಬಿ ಚಾಲಕನ ಅಚಾತುರ್ಯದಿಂದಾಗಿ ಈ ಅವಘಡ ಸಂಭವಿಸಿದೆ. ಮುಂಜಾನೆ 5 ಗಂಟೆ ಸುಮಾರಿಗೆ ತಂದೆ ಡೇವಿಡ್ ಮೂರು ವರ್ಷದ ಮಗು ಸಿಮಿಯಾನ್ ಕರೆದುಕೊಂಡು ಹೋಗುತ್ತಿದ್ದರು.

ಹಿಂಬದಿಯಿಂದ ಜೆಸಿಬಿ ಚಾಲನೆ ಮಾಡಿಕೊಂಡು ಬಂದಿರುವ ಚಾಲಕ ಮಗುವಿನ ಮೇಲೆ ಹತ್ತಿಸಿದ್ದಾನೆ. ಜೆಸಿಬಿ ಚಾಲಕ ಶಂಕರ್ ನಾಯಕ್ ನನ್ನು ಉಪ್ಪಾರಪೇಟೆ ಪೊಲೀಸರು ವಶಕ್ಕೆ ಪಡೆದಿದ್ದಾರೆ.

- Advertisement -








