Friday, May 3, 2024
spot_imgspot_img
spot_imgspot_img

ಬೆಂಗಳೂರು: ನೈಜೀರಿಯಾ ಪ್ರಜೆಗಳಿಂದ ಸಿಸಿಬಿ ಪೊಲೀಸರ ಮೇಲೆ ಹಲ್ಲೆ; 8 ಆರೋಪಿಗಳ ಬಂಧನ..!

- Advertisement -G L Acharya panikkar
- Advertisement -

ಬೆಂಗಳೂರು: ನಗರದಲ್ಲಿ ನೈಜೀರಿಯಾ ಪ್ರಜೆಗಳ ದಾಂಧಲೆ ಮುಂದುವರಿದಿದ್ದು, ಮಾಹಿತಿ ಕಲೆ ಹಾಕಲು ತೆರಳಿದ್ದ ಸಿಸಿಬಿ ಪೊಲೀಸರ ಮೇಲೆ ನೈಜೀರಿಯಾ ಪ್ರಜೆಗಳು ದಾಳಿ ಮಾಡಿ ಹಲ್ಲೆ ನಡೆಸಿರುವ ಘಟನೆ ರಾಜಾನುಕುಂಟೆಯ ಮಾವಳ್ಳಿಪುರದಲ್ಲಿ ನಿನ್ನೆ ಮಧ್ಯರಾತ್ರಿ ನಡೆದಿದೆ.

ನೈಜೀರಿಯಾ ಪ್ರಜೆಗಳು ಸಿಸಿಬಿ ಪೊಲೀಸರ ಮೇಲೆ ಹಲ್ಲೆ ನಡೆಸಿದ್ದಲ್ಲದೆ ಹೆಲ್ಮೆಟ್‌ನಿಂದ ಕಾರಿನ ಗಾಜು ಒಡೆದು ಹಾನಿ ಮಾಡಿದ್ದಾರೆ. ಘಟನೆಯಲ್ಲಿ ನಾಲ್ವರು ಪೊಲೀಸರಿಗೆ ಗಾಯವಾಗಿದೆ. ನೈಜೀರಿಯಾ ಪ್ರಜೆಗಳು ಸಿಸಿಬಿ ಪೊಲೀಸರ ಮೇಲೆ ಹಲ್ಲೆ ಮಾಡಿರುವ ದೃಶ್ಯವು ಸಿಸಿಟಿವಿಯಲ್ಲಿ ಸೆರೆಯಾಗಿದೆ.

ಪೊಲೀಸರು ಮತ್ತು ನೈಜೀರಿಯಾ ಪ್ರಜೆಗಳ ಮಧ್ಯೆ ವಾಗ್ವಾದ ನಡೆದಿದ್ದು, ರಸ್ತೆಯಲ್ಲೇ ರಾದ್ಧಾಂತ ಮಾಡಿದ್ದಾರೆ. ಇದೇ ವೇಳೆ ನೈಜೀರಿಯಾ ಪ್ರಜೆಗಳು ತಮ್ಮವರಿಗೆ ಫೋನ್ ಮಾಡಿ ಕರೆಸಿಕೊಂಡಿದ್ದಾರೆ. ಬೈಕ್‌ನಲ್ಲಿ ಬೇರೆ ಬೇರೆ ಕಡೆಯಿಂದ 10ಕ್ಕೂ ಹೆಚ್ಚು ಮಂದಿ ಬಂದಿದ್ದಾರೆ. ಪೊಲೀಸರು ಜೀಪ್ ಹತ್ತಿಸುತ್ತಿದ್ದಂತೆ ತಿರುಗಿ ಬಿದ್ದ ನೈಜೀರಿಗಳು, ಕಲ್ಲು ದೊಣ್ಣೆಗಳಿಂದ ಪೊಲೀಸರ ಮೇಲೆ ದಾಳಿ ಮಾಡಿ ಅಟ್ಟಾಡಿಸಿಕೊಂಡು ಹಲ್ಲೆ ನಡೆಸಿದ್ದಾರೆ.

ಬೆಂಗಳೂರು ಗ್ರಾಮಾಂತರದ ಎಸ್‌ಪಿ ಮಲ್ಲಿಕಾರ್ಜುನ ಬಾಲದಂಡಿ ಈ ಬಗ್ಗೆ ಮಾಹಿತಿ ನೀಡಿ ಹಿಂದೆ ಸಿಸಿಬಿ ಅಧಿಕಾರಿ ಸುಬ್ರಹ್ಮಣ್ಯ ಸ್ವಾಮಿ ಅವರು ಬಾಗಲಗುಂಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಅದರ ಮುಂದುವರಿದ ತನಿಖೆಗಾಗಿ ಸಿಸಿಬಿ ಟೀಂ ತೆರಳಿದ್ದರು. ಆರೋಪಿಯನ್ನು ಹಿಂಬಾಲಿಸಿಕೊಂಡು ಹೋದಾಗ ನೈಜೀರಿಯನ್ ಪ್ರಜೆಗಳು ಕಿರಿಕ್ ತೆಗೆದಿದ್ದರು. ತಾವು ಸಿಸಿಬಿ ಪೊಲೀಸರು ಎಂದು ತಿಳಿಸಿದರೂ ಏಕಾಏಕಿ ಹಲ್ಲೆಯನ್ನು ನಡೆಸಿದ್ದಾರೆ. ನಿನ್ನೆ ರಾತ್ರಿ 11 ಗಂಟೆ ಸುಮಾರಿಗೆ ಘಟನೆ ನಡೆದಾಗ ಸಿಸಿಬಿ ಇನ್ಸ್ಸ್ಪೆಕ್ಟರ್ ಕೂಡಲೇ ಕಂಟ್ರೋಲ್ ರೂಂಗೆ ಕಾಲ್ ಮಾಡಿ ವಿಚಾರ ಮುಟ್ಟಿಸಿದ್ದರು. ವಿಚಾರ ತಿಳಿದು ರಾಜಾನುಕುಂಟೆ ಪೊಲೀಸರು ಸ್ಥಳಕ್ಕಾಗಮಿಸಿ ಸಿಸಿಬಿ ಅಧಿಕಾರಿಗಳನ್ನು ರಕ್ಷಣೆ ಮಾಡಲಾಗಿದೆ.

ಗಾಯಾಳುಗಳನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಆರೋಪಿಗಳಿಗಾಗಿ ಹುಡುಕಾಟ ಮುಂದುವರೆದಿದೆ. ಅವರಿಗೆ ಮನೆ ಬಾಡಿಗೆ ಕೊಟ್ಟ ಮಾಲೀಕನ ಜತೆ ಮಾತನಾಡಿದ್ದೇವೆ. ನೈಜೀರಿಯನ್ ಪ್ರಜೆಗಳು ದಾಖಲಾತಿ ಕೊಡುವುದಾಗಿ ಹೇಳಿ ಮನೆ ಮಾಲೀಕರಿಂದ ಬಾಡಿಗೆ ಪಡೆದಿದ್ದಾರೆ ಎಂದು ತಿಳಿಸಿದರು.

- Advertisement -

Related news

error: Content is protected !!