Sunday, April 28, 2024
spot_imgspot_img
spot_imgspot_img

“ಜೇಮ್ಸ್ ವೆಬ್” ಸೆರೆ ಹಿಡಿದ ಬಾಹ್ಯಾಕಾಶದ ರೋಮಾಂಚಕಾರಿ ಚಿತ್ರ

- Advertisement -G L Acharya panikkar
- Advertisement -

ಅತ್ಯಾಧುನಿಕ ಜೇಮ್ಸ್ ವೆಬ್ ದೂರದರ್ಶಕ ಸೆರೆಹಿಡಿದ ಬಾಹ್ಯಾಕಾಶದ ರೋಮಾಂಚಕಾರಿ ಚಿತ್ರವನ್ನು ಅಮೆರಿಕದ ಬಾಹ್ಯಾಕಾಶ ಅಧ್ಯಯನ ಸಂಸ್ಥೆ ನಾಸಾ ಮೊದಲ ಬಾರಿಗೆ ಬಿಡುಗಡೆ ಮಾಡಿದೆ.

ಇಲ್ಲಿ ಕಾಣಿಸುವ ನಕ್ಷತ್ರಗಳು ಕೋರೈಸುವ ಪರ್ವತ- ಕಣಿವೆಯಂಥ ರಚನೆಗಳು ಕರೀನಾ ತಾರಾಪುಂಜದಲ್ಲಿ ಇರುವ ಎನ್‌ಜಿಸಿ 3324 ಎಂಬ ನಕ್ಷತ್ರ ರೂಪು ಗೊಳ್ಳುತ್ತಿರುವ ಪ್ರದೇಶದವು. ಬ್ರಹ್ಮಾಂಡದ ಉಗಮ ಹೇಗಾಯಿತು, ಬಾಹ್ಯಾಕಾಶದಲ್ಲಿ ಏನೇನೆಲ್ಲ ಇದೆ ಎಂಬಿತ್ಯಾದಿ ತಣಿಸಿಕೊಳ್ಳುವುದಕ್ಕಾಗಿ ದೂರದರ್ಶಕವನ್ನು ಕಳುಹಿಸಿದೆ. ಬಾಹ್ಯಾಕಾಶಕ್ಕೆ ಕಳುಹಿಸಿರುವ ದೂರದರ್ಶಕಗಳಲ್ಲೇ ಅತ್ಯಂತ ಶಕ್ತಿಶಾಲಿ ಈ ಜೇಮ್ಸ್ ವೆಬ್.

ಇದು ಇನ್‌ಫ್ರಾರೆಡ್ ಕೆಮರಾಗಳನ್ನು ಹೊಂದಿದೆ. ಇದುವರೆಗೆ ಅತೀ ಶಕ್ತಿಶಾಲಿ ಎನಿಸಿದ ಹಬಲ್ ದೂರದರ್ಶಕಕ್ಕೂ ಸಿಗದ ಮಸುಕಾದ, ಪುರಾತನ, ಅತೀ ದೂರದ ಬಾಹ್ಯಾಕಾಶ ಕಾಯಗಳನ್ನೂ ಕಾಣಬಲ್ಲ ಸಾಮರ್ಥ್ಯ ಹೊಂದಿದೆ. 2021ರ ಡಿಸೆಂಬರ್ 25ರಂದು ಹಾರಿಬಿಡಲಾಗಿದ್ದು, ಇದರ ಮೌಲ್ಯ ೧೦ ದಶಲಕ್ಷ ಡಾಲರ್‍.

- Advertisement -

Related news

error: Content is protected !!