Saturday, April 27, 2024
spot_imgspot_img
spot_imgspot_img

ಪುಲ್ವಾಮ ದಾಳಿಯ ಸಂಚುಕೋರ; ಉಗ್ರವಾದಿ ಸೈಫುಲ್ಲಾ ಎನ್ ಕೌಂಟರ್ ನಲ್ಲಿ ಹತ್ಯೆ

- Advertisement -G L Acharya panikkar
- Advertisement -

ನವದೆಹಲಿ: ಭದ್ರತಾ ಪಡೆಯ ಎನ್ ಕೌಂಟರ್ ನಲ್ಲಿ 2019ರ ಪುಲ್ವಾಮಾ ಭಯೋತ್ಪಾದಕ ದಾಳಿ ರೂವಾರಿಗಳಲ್ಲಿ ಒಬ್ಬನಾದ ಜೈಶ್ ಎ ಮೊಹಮ್ಮದ್ ಸಂಘಟನೆಯ ಉಗ್ರ ಅಬು ಸೈಫುಲ್ಲಾ ಅಲಿಯಾಸ್ ಲಂಬೂ ಹತ್ಯೆಗೀಡಾಗಿರುವ ಘಟನೆ ಜಮ್ಮು-ಕಾಶ್ಮೀರದಲ್ಲಿ ಶನಿವಾರ(ಜುಲೈ 31) ನಡೆದಿದೆ.

ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದ ನಿವಾಸಿಯಾಗಿರುವ ಸೈಫುಲ್ಲಾ 2019ರಲ್ಲಿ ನಡೆದ ಪುಲ್ವಾಮಾ ಭಯೋತ್ಪಾದಕ ದಾಳಿಯ ರೂವಾರಿಗಳಲ್ಲಿ ಒಬ್ಬನಾಗಿದ್ದ. ಈ ಘಟನೆಯಲ್ಲಿ 40 ಮಂದಿ ಸಿಆರ್ ಪಿಎಫ್ ಯೋಧರು ಹುತಾತ್ಮರಾಗಿದ್ದರು. ಈ ದಾಳಿ ನಡೆಸಲು ಸೈಫುಲ್ಲಾ ಐಇಡಿಯನ್ನು ತಯಾರಿಸಿಕೊಟ್ಟಿರುವುದಾಗಿ ವರದಿ ತಿಳಿಸಿದೆ.

ಸೈಫುಲ್ಲಾ ಜೈಶ್ ಉಗ್ರಗಾಮಿ ಸಂಘಟನೆ ಸ್ಥಾಪಕ ಮೌಲಾನಾ ಮಸೂದ್ ಅಝರ್ ನ ಸಂಬAಧಿಯಾಗಿದ್ದು, ಸೈಫುಲ್ಲಾ 2017ರಲ್ಲಿ ಭಾರತಕ್ಕೆ ನುಸುಳಿ ಬಂದ ಮೇಲೆ ಭಯೋತ್ಪಾದಕ ಚಟುವಟಿಕೆಯಲ್ಲಿ ತೊಡಗಿಕೊಂಡಿರುವುದಾಗಿ ವರದಿ ವಿವರಿಸಿದೆ.

ಸೈಫುಲ್ಲಾ ಪುಲ್ವಾಮಾ ಸೇರಿದಂತೆ ಹಲವಾರು ಭಯೋತ್ಪಾದಕ ದಾಳಿಯಲ್ಲಿ ಶಾಮೀಲಾಗಿದ್ದ. ಈತ ಪಾಕಿಸ್ತಾನದ ಮೂಲದ ಜೈಶ್ ಎ ಮೊಹಮ್ಮದ್ ಉಗ್ರಗಾಮಿ ಸಂಘಟನೆಯ ಸ್ಥಾಪಕನಾದ ಮೌಲಾನಾ, ರೌಫ್ ಅಝರ್ ಹಾಗೂ ಅಮ್ಮಾರ್ ಜತೆ ನಿಕಟ ಸಂಪರ್ಕ ಹೊಂದಿದ್ದ ಎಂದು ವರದಿ ತಿಳಿಸಿದೆ.

- Advertisement -

Related news

error: Content is protected !!