Friday, May 17, 2024
spot_imgspot_img
spot_imgspot_img

ಟೋಯಿಂಗ್ ವಿಚಾರಕ್ಕೆ ಅಂಗವಿಕಲೆಯನ್ನು ತುಳಿದ ಎಎಸ್ಐ.! ಅಂಗವಿಕಲೆ ಮಹಿಳೆಗೆ ಬೂಟುಗಾಲಿನಲ್ಲಿ ಒದ್ದ ಎಎಸ್ಐ ನಾರಾಯಣ ಸಸ್ಪೆಂಡ್

- Advertisement -G L Acharya panikkar
- Advertisement -

ಬೆಂಗಳೂರು: ಬೆಂಗಳೂರಿನಲ್ಲಿ ಟೋಯಿಂಗ್ ವಿಚಾರ ಮತ್ತೆ ಸುದ್ದಿಯಲ್ಲಿದ್ದು, ಇದೀಗ ಟೋಯಿಂಗ್ ವಿಚಾರಕ್ಕೆ ಎಎಸ್ಐ ಒಬ್ಬರು ಅಂಗವಿಕಲೆ ಮಹಿಳೆಯ ಮೇಲೆ ನಡು ರಸ್ತೆಯಲ್ಲಿ ಹಲ್ಲೆ ನಡೆಸಿದ್ದಾರೆ. ಅಂಗವಿಕಲೆ ಮಹಿಳೆ ಎಂದು ನೋಡದೆ ಬೂಟುಗಾಲಿನಲ್ಲಿ ನಡು ರಸ್ತೆಯಲ್ಲಿ ಮನಬಂದಂತೆ ಥಳಿಸಿದ ಎಎಸ್ಐ ನಾರಾಯಣ ಅವರನ್ನು ಸೇವೆಯಿಂದ ಅಮಾನತು ಮಾಡಲಾಗಿದೆ.

ವಾಹನಗಳ ಟೋಯಿಂಗ್ ಮಾಡುತ್ತಿದ್ದ ಪೊಲೀಸ್‌ಗೆ ಕಲ್ಲಿನಿಂದ ಹೊಡೆದರೆಂಬ ಕಾರಣಕ್ಕೆ, ಅಂಗವಿಕಲ‌ ಮಹಿಳೆಗೆ ಬೂಟುಗಾಲಿನಿಂದ ಒದ್ದಿದ್ದರು. ಈ ಘಟನೆಯ ವಿಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ಪ್ರಕಟವಾದ ಸುದ್ದಿ ಆಧರಿಸಿ ಗೃಹ ಸಚಿವ ಆರಗ ಜ್ಞಾನೇಂದ್ರ ಅವರು ತನಿಖೆಗೆ ಸೂಚನೆ ನೀಡಿದ್ದರು.

ಪ್ರಾಥಮಿಕ ತನಿಖೆ ‌ನಡೆಸಿದ‌ ಸಂಚಾರ ವಿಭಾಗದ ಜಂಟಿ‌ ಕಮಿಷನರ್ ಬಿ.ಆರ್. ರವಿಕಾಂತೇಗೌಡ ಅವರು, ಹಲಸೂರು ಗೇಟ್ ಸಂಚಾರ ಠಾಣೆ ಎಎಸ್ಐ ನಾರಾಯಣ ಅವರನ್ನು ‌ಅಮಾನತು ಮಾಡಿದ್ದಾರೆ. ‘ಎಎಸ್ಐ ಅವರನ್ನು ತಕ್ಷಣದಿಂದ ಜಾರಿಗೆ ಬರುವಂತೆ ಅಮಾನತು‌ ಮಾಡಲಾಗಿದೆ. ಅವರ ಮೇಲಿನ ಆರೋಪದ ಬಗ್ಗೆ ಇಲಾಖಾ ವಿಚಾರಣೆ ನಡೆಯಲಿದೆ’ ಎಂದು ರವಿಕಾಂತೇಗೌಡ ತಿಳಿಸಿದ್ದಾರೆ.

vtv vitla
suvarna gold
- Advertisement -

Related news

error: Content is protected !!