Sunday, June 14, 2026
spot_imgspot_img
spot_imgspot_img

ತನಗಿಂತ ಚಿಕ್ಕ ವಯಸ್ಸಿನವರೊಂದಿಗೆ ಡೇಟಿಂಗ್​​.. ರಶ್ಮಿಕಾ ಮಂದಣ್ಣ ಸೆನ್ಷೇಷನಲ್​ ಕಾಮೆಂಟ್ಸ್​

- Advertisement -
- Advertisement -

ಕರ್ನಾಟಕ ಕ್ರಶ್ ರಶ್ಮಿಕಾ ಮಂದಣ್ಣ ಡೇಟಿಂಗ್ ಮಾಡೋಕೆ ವಯಸ್ಸು ಮುಖ್ಯವಲ್ಲ.. ಆ ವ್ಯಕ್ತಿಯ ಗುಣ ಮುಖ್ಯವೆಂದು ಹೇಳಿದ್ದಾರೆ. ಹೌದು, ನಟಿ ರಶ್ಮಿಕಾ ಮಂದಣ್ಣ ಸದ್ಯ ಸೌತ್ ಸಿನಿ ದುನಿಯಾದ ಬಹುಬೇಡಿಕೆಯ ನಟಿಮಣಿಯರ ಪೈಕಿ ಒಬ್ಬರು. ಸೌತ್ ಸಿನಿಮಾಗಳನ್ನು ಹೊರತು ಪಡಿಸಿ ರಶ್ಮಿಕಾ ಬಾಲಿವುಡ್ ಚಿತ್ರರಂಗದಲ್ಲೂ ಸಖತ್ ಬ್ಯುಸಿಯಾಗಿದ್ದಾರೆ.

ಇನ್ನೂ ನಟಿ ರಶ್ಮಿಕಾ ಮಂದಣ್ಣ ಯಾವುದೇ ವಿಷಯದ ಬಗ್ಗೆ ಮಾತನಾಡಿದರೂ ಅದು ದೊಡ್ಡ ಮಟ್ಟದಲ್ಲಿ ಸುದ್ದಿಯಾಗುತ್ತದೆ. ರಶ್ಮಿಕಾ ಮತ್ತು ನಟ ರಕ್ಷಿತ್ ಶೆಟ್ಟಿ ನಿಶ್ಚಿತಾರ್ಥ ಮುರಿದು ಬಿದ್ದಾಗಿನಿಂದ ರಶ್ಮಿಕಾ ಯಾವುದೇ ಸಂದರ್ಶನದಲ್ಲಿ ಭಾಗಿಯಾಗಲಿ ಲವ್, ಡೇಟಿಂಗ್ ಮತ್ತು ಮದುವೆ ಕುರಿತಾದ ಪ್ರಶ್ನೆಗಳು ಎದುರಾಗುತ್ತವೆ.

ಅದರಂತೆ ಇತ್ತೀಚೆಗೆ ನಡೆದ ಸಂದರ್ಶನವೊಂದರಲ್ಲಿ ರಶ್ಮಿಕಾಗೆ ನಿಮ್ಮಗಿಂತ ಚಿಕ್ಕ ವಯಸ್ಸಿನವರನ್ನು ಮದುವೆಯಾಗುವ ಬಗ್ಗೆ ನಿಮ್ಮ ಅಭಿಪ್ರಾಯವೇನು ಎಂಬ ಪ್ರಶ್ನೆ ಎದುರಾಯಿತ್ತು . ಈ ಪ್ರಶ್ನೆಗೆ ಬಹಳ ಜಾಣ್ಮೆಯಿಂದ ಉತ್ತರಿಸಿದ ರಶ್ಮಿಕಾ, ಡೇಟಿಂಗ್ ಮಾಡೋಕೆ ವ್ಯಕ್ತಿಯ ವಯಸ್ಸು ಮುಖ್ಯವಾಗುವುದಿಲ್ಲ ಬದಲಾಗಿ ಆತನ ಗುಣ ಮತ್ತು ಅವನ್ನು ನಮ್ಮನ್ನು ಯಾವ ರೀತಿ ಟ್ರೀಟ್ ಮಾಡುತ್ತಾನೆ ಎಂಬುದು ಮುಖ್ಯವಾಗುತ್ತದೆ ಎಂದು ರಶ್ಮಿಕಾ ಹೇಳಿದ್ದಾರೆ. 25 ವರ್ಷದ ರಶ್ಮಿಕಾ ತಮಗಿಂತ ಚಿಕ್ಕವಯಸ್ಸಿನವರನ್ನು ಡೇಟ್ ಮಾಡುವುದರಲ್ಲಿ ಯಾವುದೇ ತಪ್ಪಿಲ್ಲ ಎಂದು ಹೇಳಿದ್ದಾರೆ.

- Advertisement -

Related news

error: Content is protected !!