Friday, June 19, 2026
spot_imgspot_img
spot_imgspot_img

ತಿಂಗಳಾಡಿ: ಮಹಿಳೆಗೆ ಲೈಂಗಿಕ ಕಿರುಕುಳ ನೀಡಿದ ಪ್ರಕರಣ; ಆರೋಪಿ ಬದ್ರುದ್ದಿನ್ ನ ಬಂಧನ; ಹಿಂದೂ ಸಂಘಟನೆಗಳಿಂದ ಬಂದ್ ಕರೆ ಹಿಂತೆಗೆತ

- Advertisement -
- Advertisement -

ಪುತ್ತೂರು: ಸ್ವೀಟ್ ಖರೀದಿಸಲು ಬಂದ ಯುವತಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪಿಯನ್ನು ಸಂಪ್ಯ ಗ್ರಾಮಾಂತರ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಘಟನೆ ಪುತ್ತೂರು ತಾಲೂಕಿನ ತಿಂಗಳಾಡಿಯ ಅಂಗಡಿಯೊಂದರಲ್ಲಿ ನಡೆದಿತ್ತು. ಪುತ್ತೂರು ತಾಲೂಕಿನ ಸರ್ವೆ ಗ್ರಾಮದ ಸೊರಕೆ ಮನೆಯ ಬದ್ರುದ್ದಿನ್ ಬಂಧಿತ ಆರೋಪಿ. ಈತನ ವಿರುದ್ಧ ಐಪಿಸಿ ಸೆಕ್ಷನ್ 354 ರಂತೆ ಪ್ರಕರಣ ದಾಖಲಾಗಿದೆ.

ಪುತ್ತೂರು ತಾಲೂಕು ಕೆದಂಬಾಡಿ ಗ್ರಾಮದತಿಂಗಳಾಡಿ ಎಂಬಲ್ಲಿರುವ ನ್ಯೂ ಸೂಪರ್ ಬಜಾರ್ ಜನರಲ್ ಸ್ಟೋರ್ ಸ್ವೀಟ್ ಸ್ಟಾಲ್ ಎಂಬ ಅಂಗಡಿಯಲ್ಲಿ ಸಂತ್ರಸ್ತ ಯುವತಿ ಸ್ವೀಟ್ ಖರೀದಿಸಿದ್ದರು. ಆಕೆ ಅಂಗಡಿ ಮಾಲೀಕರಿಗೆ ದುಡ್ಡು ಕೊಡುತ್ತಿದ್ದಾಗ ಏಕಾಏಕಿ ಅಂಗಡಿಗೆ ಬಂದ ಅಪರಿಚಿತ ಆರೋಪಿಯು ಮಹಿಳೆಯ ದೇಹವನ್ನು ಅಸಭ್ಯವಾಗಿ ಸ್ಪರ್ಶಿದ್ದಾನೆ.

ಈ ವೇಳೆ ಯುವತಿಯು ಬೊಬ್ಬೆ ಹಾಕಿ ಯುವತಿಯನ್ನು ದೂರ ತಳ್ಳಿದ್ದು ಆತ ಅಂಗಡಿಯಿಂದ ಪರಾರಿಯಾಗಿರುತ್ತಾನೆ. ಬಳಿಕ ಆರೋಪಿಯ ಬಗ್ಗೆ ಮಾಹಿತಿ ಸಂಗ್ರಹಿಸಿದ ಯುವತಿಯು ಈ ಬಗ್ಗೆ ದೂರು ನೀಡಿದ್ದಾರೆ.

ಸಾರ್ವಜನಿಕ ಸ್ಥಳದಲ್ಲಿ ಅಸಭ್ಯವಾಗಿ ದೇಹವನ್ನು ಸ್ಪರ್ಶಿಸಿ ಮಾನಭಂಗ ಉಂಟು ಮಾಡಿದ ಆರೋಪಿಯ ವಿರುದ್ಧ ಕ್ರಮ ಕೈಗೊಳ್ಳುವಂತೆ ಯುವತಿ ನೀಡಿದ ದೂರಿನಂತೆ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಮಿಂಚಿನ ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಬಂಧಿಸಿದ್ದಾರೆ.

ಆರೋಪಿಯ ಬಂಧನದ ಸುದ್ದಿ ಖಚಿತವಾಗುತ್ತಲೇ ಹಿಂದೂ ಸಂಘಟನೆಗಳು ಕರೆ ನೀಡಿದ್ದ ಬಂದ್ ಅನ್ನು ಹಿಂತೆಗೆದುಕೊಂಡಿದ್ದಾರೆ ಎಂದು ತಿಳಿದು ಬಂದಿದೆ. ಆದರೇ ಖಂಡನಾ ಸಭೆ ಪೂರ್ವ ನಿಗದಿಯಂತೆ ನಡೆಯಲಿದೆ.

- Advertisement -

Related news

error: Content is protected !!