Wednesday, May 22, 2024
spot_imgspot_img
spot_imgspot_img

‘ತಿರುಚಲ್ಪಟ್ಟ ಇತಿಹಾಸ ಪುನಃ ಬರೆಯಿರಿ’-ಅಮಿತ್ ಶಾ ಸಲಹೆ

- Advertisement -G L Acharya panikkar
- Advertisement -

ನವದೆಹಲಿ: ತಿರುಚಲ್ಪಟ್ಟ ಭಾರತದ ಇತಿಹಾಸವನ್ನು ಸರಿಪಡಿಸಬೇಕಾಗಿದೆ. ಹೀಗಾಗಿ ಭಾರತದ ಇತಿಹಾಸವನ್ನು ಪುನಃ ಬರೆಯಿರಿ. ಇದಕ್ಕೆ ಅಗತ್ಯವಿರುವ ಎಲ್ಲಾ ಬೆಂಬಲವನ್ನು ಸರ್ಕಾರ ನೀಡಲಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಇತಿಹಾಸಕಾರರಿಗೆ ಸಲಹೆ ಮಾಡಿದ್ದಾರೆ.

ಅಸ್ಸಾಂ ಸರ್ಕಾರದ ವತಿಯಿಂದ ದೆಹಲಿಯಲ್ಲಿ ಏರ್ಪಡಿಸಲಾಗಿದ್ದ 17ನೇ ಶತಮಾನದ ಅಹೋಮ್ ಜನರಲ್ ಲಚಿತ್ ಬರ್ಫುಕನ್ ಅವರ 400ನೇ ಜನ್ಮದಿನಾಚರಣೆಯ ಮೂರು ದಿನಗಳ ಆಚರಣೆಯ 2ನೇ ದಿನ ಸಮಾರಂಭದಲ್ಲಿ ಮಾತನಾಡಿದ ಅವರು, ನಾನು ಇತಿಹಾಸದ ವಿದ್ಯಾರ್ಥಿ. ಹಲವು ಬಾರಿ ನಮ್ಮ ಇತಿಹಾಸವನ್ನು ತಿರುಚಲಾಗಿದೆ ಎಂದೇ ಅನಿಸಿತ್ತು. ಈಗ ಆ ತಿರುಚಿದ ಇತಿಹಾಸವನ್ನು ನಾವು ಸರಿಪಡಿಸಬೇಕಿದೆ. ಭಾರತೀಯ ದೃಷ್ಟಿಕೋನದಲ್ಲಿ ಇತಿಹಾಸವನ್ನು ಪುನಃ ಬರೆಯಬೇಕು ಎಂದರು.

ನೈಜ ಇತಿಹಾಸವನ್ನು ಪ್ರಸ್ತುತಪಡಿಸುವುದನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ. ದೇಶದಲ್ಲಿ 150 ವರ್ಷಗಳ ಕಾಲ ಆಳಿದ 30 ರಾಜವಂಶಗಳು ಹಾಗೂ ಸ್ವಾತಂತ್ರ್ಯಕ್ಕಾಗಿ ಹೋರಾಡಿದ 300 ಮಹನೀಯರ ಬಗ್ಗೆ ಸಂಶೋಧನೆಗೆ ಪ್ರಯತ್ನಿಸುತ್ತೇನೆ ಎಂದವರು ಇದೇ ವೇಳೆ ತಿಳಿಸಿದರು.

ಇತಿಹಾಸಕಾರರು ಮತ್ತು ವಿದ್ಯಾರ್ಥಿಗಳು ಈ ಸಂಬಂಧ ಸಂಶೋಧನೆ ನಡೆಸಿದರೆ, ಇತಿಹಾಸವನ್ನು ಪುನಃ ಬರೆದರೆ ಅದಕ್ಕೆ ಬೇಕಾದ ಎಲ್ಲಾ ಸಹಾಯವನ್ನು ಸರ್ಕಾರ ನೀಡಲಿದೆ ಎಂದು ಭರವಸೆ ನೀಡಿದರು.

- Advertisement -

Related news

error: Content is protected !!