Tuesday, April 23, 2024
spot_imgspot_img
spot_imgspot_img

ತುಳು, ಕನ್ನಡ ರಂಗಭೂಮಿಯ ಹಿರಿಯ ರಂಗಕಲಾವಿದೆ ಸುಮಿತ್ರ ರೈ ವಿಧಿವಶ

- Advertisement -G L Acharya panikkar
- Advertisement -
vtv vitla

ಕಾಸರಗೋಡು: ತುಳು ಕನ್ನಡ ರಂಗಭೂಮಿಯ ಹಿರಿಯ ರಂಗಕಲಾವಿದೆ , ಶ್ರೀ ನಂದಿಕೇಶ್ವರ ನಾಟಕ ಸಂಘದ ರೂವಾರಿ ದಿ. ಪಿ.ಬಿ ರೈ ಯವರ ಧರ್ಮ ಪತ್ನಿ, ನಾಟಕ ಕಲಾವಿದೆ ಶ್ರೀಮತಿ ಬೇಬಿ ಯಾನೆ ಸುಮಿತ್ರ ರೈ (76) ಭಾನುವಾರ ಮಂಜೇಶ್ವರ ಸಮೀಪದ ಕುಂಜತ್ತೂರಿನ ತಮ್ಮ ಸ್ವ ಗೃಹದಲ್ಲಿ ನಿಧನ ಹೊಂದಿದರು.

vtv vitla

ದಿವಂಗತರು ಖ್ಯಾತ ಗುಬ್ಬಿ ವೀರಣ್ಣ ನಾಟಕ ಕಂಪನಿ, ಬಸವರಾಜ ಬಡಿಗೇರ ಮತ್ತು ತಮ್ಮ ಪತಿಯವರು ಕಟ್ಟಿ ಬೆಳೆಸಿದ ಶ್ರೀ ನಂದಿಕೇಶ್ವರ ನಾಟಕ ಸಂಘದಲ್ಲಿ ರಂಗನಟಿಯಾಗಿ, ಹಾಗೂ ಹಲವಾರು ಚಲನಚಿತ್ರಗಳಲ್ಲಿ ಸುಮಾರು ಐವತ್ತು ವರುಷಗಳ ಕಾಲ ನಟಿಸಿದ್ದಾರೆ. ಅಗಲಿದ ದಿವ್ಯಾತ್ಮಕ್ಕೆ, ತುಳು ನಾಟಕ ಕಲಾವಿದರ ಒಕ್ಕೂಟ ರಿ. ಮಂಗಳೂರು ತೀವ್ರ ಸಂತಾಪ ಸೂಚಿಸಿದೆ.

vtv vitla
vtv vitla

ಅವರು ಪುತ್ರ ಕಿರುತೆರೆ ಮತ್ತು ರಂಗಭೂಮಿ ನಟ ರಾಘವೇಂದ್ರ ರೈ ಮತ್ತು ಪುತ್ರಿ ಸಿನಿಮಾ ರಂಗಭೂಮಿ ಕಿರುತೆರೆ ನಟಿ ಶೋಭಾ ರೈ ಯವರನ್ನು ಅಗಲಿದ್ದಾರೆ.

vtv vitla
vtv vitla
- Advertisement -

Related news

error: Content is protected !!