Sunday, May 5, 2024
spot_imgspot_img
spot_imgspot_img

ದಕ್ಷಿಣ ಕನ್ನಡ ಜಿಲ್ಲಾ ತೆಂಗು ರೈತ ಉತ್ಪಾದಕರ ಸಂಸ್ಥೆಯಿಂದ ಕಾಡಾನೆ ದಾಳಿಗೊಳಗಾದ ರೈತರಿಗೆ ವಿಮಾ ಪರಿಹಾರ

- Advertisement -G L Acharya panikkar
- Advertisement -
vtv vitla
vtv vitla
vtv vitla

ಸುಳ್ಯ: ಹರಿಹರ ಪಲ್ಲತಡ್ಕದ ಬಾಳುಗೋಡಿನ.ಕೆ. ವಿ.ಸುಧೀರ್ ಎಂಬುವವರ ತೋಟಕ್ಕೆ ಎರಡು ದಿನಗಳ ಹಿಂದೆ ಕಾಡಾನೆ ದಾಳಿ ಮಾಡಿದ್ದು, 40 ವರ್ಷದ ಹಳೆಯ ತೆಂಗಿನ ಮರವನ್ನು ನಾಶಪಡಿಸಿವೆ.

vtv vitla

ಇವರು ದಕ್ಷಿಣ ಕನ್ನಡ ಜಿಲ್ಲಾ ತೆಂಗು ರೈತ ಉತ್ಪಾದಕರ ಸಂಸ್ಥೆಯಲ್ಲಿ ಆರು ತಿಂಗಳ ಹಿಂದೆ ನೋಂದಾವಣೆ ಮಾಡಿದುದರಿಂದ ಇವರಿಗೆ ಸಂಸ್ಥೆಯು ಹಾನಿಯಾದ ತೆಂಗಿನ ಮರಕ್ಕೆ ಬೆಳೆ ನಷ್ಟ ವಿಮೆಯನ್ನು ನೀಡಿದೆ.

ಸಂಸ್ಥೆಯು ನೋಂದಾವಣೆಯಾದ ರೈತರಿಗೆ ತೆಂಗಿನ ಮರಗಳಿಗೆ ಪ್ರಕೃತಿ ವಿಕೋಪದಿಂದ ಮತ್ತು ಪ್ರಾಣಿಗಳ ದಾಳಿಯಿಂದ ತೆಂಗಿನ ಮರ ನಾಶವಾದರೆ ವಿಶೇಷ ವಿಮೆ ಯೋಜನೆಯ ಜಾರಿಯಲ್ಲಿರುತ್ತದೆ. ಈ ವಿಮಾ ಸೌಲಭ್ಯ ನಮ್ಮ ಸಂಸ್ಥೆಯಲ್ಲಿ ಸದಸ್ಯತ್ವ ಪಡೆದ ಆರು ತಿಂಗಳ ಬಳಿಕ ಅನ್ವಯವಾಗುತ್ತದೆ.

vtv vitla

ದಕ್ಷಿಣ ಕನ್ನಡ ಜಿಲ್ಲಾ ತೆಂಗು ರೈತ ಉತ್ಪಾದಕ ಸಂಸ್ಥೆಯು ತೆಂಗು ರೈತರಿಗಾಗಿಯೇ ಸ್ಥಾಪನೆಯಾದ ಸಂಸ್ಥೆಯಾಗಿದ್ದು, ಸಂಸ್ಥೆಯು ರೈತರಿಗೆ ಅನೇಕ ಯೋಜನೆಗಳನ್ನು ಬಡ ರೈತರಿಗೆ ಸಹಕಾರವನ್ನು ರೈತ ಕುಟುಂಬದ ಮಕ್ಕಳಿಗೆ ಉದ್ಯೋಗ ಅವಕಾಶವನ್ನು ತೆಂಗು ರೈತರಿಗೆ ವಿಶೇಷ ವಿಮಾ ಯೋಜನೆಯನ್ನು ಹಾಗೂ ತೆಂಗು ಮತ್ತು ಅಡಿಕೆ ತೆಗೆಯುವ ಕಾರ್ಮಿಕ ವರ್ಗದವರನ್ನು ಗುರುತಿಸಿ ರೂ .25 ಲಕ್ಷದವರೆಗಿನ ವಿಮೆ ಸೌಲಭ್ಯ ಒದಗಿಸಿದೆ.

ಶೀಘ್ರದಲ್ಲಿ ರೈತರಿಂದ ನೇರ ತೆಂಗಿನಕಾಯಿಯನ್ನು ಖರೀದಿ ಮಾಡುವ ವ್ಯವಸ್ಥೆ ಮಾಡಲಾಗುವುದು. ರೈತರು ಈ ಸಂಸ್ಥೆಯಲ್ಲಿ ಸದಸ್ಯತ್ವವನ್ನು ಪಡೆದು ರೈತರಿಗೆ ದೊರಕುವ ಎಲ್ಲಾ ಸೌಲಭ್ಯಗಳನ್ನು ಪಡೆಯಲು ಅವಕಾಶವಿದೆ ಎಂದು ಸಂಸ್ಥೆಯ ಅಧ್ಯಕ್ಷರು ತಿಳಿಸಿರುತ್ತಾರೆ.

vtv vitla
vtv vitla
vtv vitla
vtv vitla
- Advertisement -

Related news

error: Content is protected !!