Sunday, June 21, 2026
spot_imgspot_img
spot_imgspot_img

ದರ್ಗಾ ನೋಡಲು ಬಂದ ಒಂದೇ ಕುಟುಂಬದ ನಾಲ್ವರು ನೀರುಪಾಲು!

- Advertisement -
- Advertisement -

ಹೈದರಾಬಾದ್: ದರ್ಗಾ ನೋಡಲೆಂದು ಬಂದ ಒಂದೇ ಕುಟುಂಬದ ನಾಲ್ವರು ನೀರು ಪಾಲಾಗಿರುವ ದಾರುಣ ಘಟನೆ ಬೀದರ್ ಜಿಲ್ಲೆಯ ಹುಮ್ನಾಬಾದ್ ತಾಲೂಕಿನ ಘೋಡಾವಾಡಿಯ ದರ್ಗಾ ಕೆರೆಯಲ್ಲಿ ನಡೆದಿದೆ.

ಮೃತರು ಹೈದರಾಬಾದ್ ನಗರದ ಬೊರಾಬಂಡಾ ನಿವಾಸಿಗಳಾದ ಮೊಹಮ್ಮದ್ ಜುಲೇದ್ ಖಾನ್ (19), ಸಲೀಂ ಖಾನ್ (18), ಅಕ್ಬರ್ ಸೈಯದ್ (17), ಸೈಯದ್ (15) ಎನ್ನಲಾಗಿದೆ.

ಹೈದರಾಬಾದ್ ನಿಂದ ಬೀದರ್ ಗೆ ಆಗಮಿಸಿದ್ದ ಕುಟುಂಬ ಸದಸ್ಯರು, ಘೋಡಾವಾಡಿಯ ದರ್ಗಾ ದರ್ಶನಕ್ಕೆಂದು ತೆರಳಿದ್ದರು. ಈ ವೇಳೆ ಕುಟುಂಬ ಸದಸ್ಯರು ಕೆರೆಯಲ್ಲಿ ಈಜಲು ಇಳಿದಿದ್ದಾರೆ. ನೀರಿನಲ್ಲಿ ಮುಳುಗಿ ನಾಲ್ವರು ಸಾವನ್ನಪ್ಪಿದ್ದಾರೆ. ನೀರುಪಾಲಾದ ನಾಲ್ವರ ಪೈಕಿ ಸೈಯದ್ ಅಕ್ಬರ್ ಶವ ಮಾತ್ರ ಸಿಕ್ಕಿದ್ದು, ಉಳಿದ ಮೂವರ ಶವಗಳಿಗಾಗಿ ಅಗ್ನಿಶಾಮಕ ಸಿಬ್ಬಂದಿ ಹುಡುಕಾಟ ನಡೆಸುತ್ತಿದ್ದಾರೆ.

- Advertisement -

Related news

error: Content is protected !!