Friday, May 3, 2024
spot_imgspot_img
spot_imgspot_img

ದಾಂಪತ್ಯ ಜೀವನಕ್ಕೆ ಕಾಲಿಟ್ಟರಾ ನಟ ನರೇಶ್‌ ಹಾಗೂ ಪವಿತ್ರ ಲೋಕೇಶ್‌..? ವಿಡಿಯೋ ವೈರಲ್‌

- Advertisement -G L Acharya panikkar
- Advertisement -
vtv vitla

ಪವಿತ್ರ ಲೋಕೇಶ್‌ ಹಾಗೂ ತೆಲುಗು ನಟ ನರೇಶ್‌ ವಿವಾಹವಾಗಿದ್ದು, ಈ ಮೂಲಕ ಅವರ ವಿರುದ್ಧ ಹಲವು ದಿನಗಳಿಂದ ಕೇಳಿ ಬರುತ್ತಿದ್ದ ಗಾಸಿಪ್‌ಗಳಿಗೆ ತೆರೆ ಎಳೆದಿದ್ದಾರೆ. ಹೊಸ ವರ್ಷದಂದು ಇಬ್ಬರೂ ಒಬ್ಬರಿಗೊಬ್ಬರು ಮುತ್ತಿಟ್ಟು ಲವ್ ಸ್ಟೋರಿ ಅಧಿಕೃತಗೊಳಿಸಿದ್ದರು. ಅಲ್ಲದೇ ಇಬ್ಬರೂ ಸದ್ಯದಲ್ಲೇ ಮದುವೆ ಆಗುವುದಾಗಿಯೂ ಹೇಳಿದ್ದರು. ಈಗ ಇಬ್ಬರು ಮದ್ವೆಯಾದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಆದರೆ ಇದು ನಿಜವಾದ ಮದುವೆನಾ ಅಥವಾ ಸೀರಿಯಲ್ ,ಸಿನಿಮಾ ದೃಶ್ಯನಾ ಎಂಬುದು ಇನ್ನಷ್ಟೇ ತಿಳಿಯಬೇಕಾಗಿದೆ.

ನಟ ನರೇಶ್‌ ವಿರುದ್ಧ ಅವರ 2ನೇ ಪತ್ನಿ ಕನ್ನಡತಿ ರಮ್ಯಾ ವಿರುದ್ಧ ಹಲವು ಆರೋಪಗಳನ್ನು ಮಾಡಿದ್ದರು. ಪವಿತ್ರ ಕಾರಣಕ್ಕೆ ನಟ ನರೇಶ್‌ ತನಗೆ ವಿಚ್ಛೇದನ ನೀಡಲು ಮುಂದಾಗಿದ್ದಾರೆ. ಆದರೆ ನನಗೆ ಮಕ್ಕಳಿದ್ದು, ವಿಚ್ಛೇದನ ನೀಡಲಾರೆ ಎಂದು ರಮ್ಯಾ ಹೇಳಿದ್ದರು. ಈ ವಿವಾದ ತಣ್ಣಗಾಯಿತು ಎನ್ನುವಾಗ ಪವಿತ್ರಾಗೆ ಕಿಸ್ ಮಾಡುತ್ತಿರುವ ವಿಡಿಯೋನ ಹೊಸ ವರ್ಷದ ಸಂದರ್ಭದಲ್ಲಿ ನರೇಶ್ ಶೇರ್ ಮಾಡಿಕೊಂಡಿದ್ದರು. ಈಗ ಅವರ ಮದುವೆ ವಿಡಿಯೋ ಬಿಡುಗಡೆ ಆಗಿದ್ದು, ಇದು ನಿಜವೇ ಆಗಿದ್ದಲ್ಲಿ ಪವಿತ್ರ ಹಾಗೂ ನರೇಶ್‌ ತಮ್ಮ ಸಂಬಂಧಕ್ಕೆ ಮದುವೆಯ ಮುದ್ರೆ ಒತ್ತುವ ಮೂಲಕ ತಮ್ಮ ಸಂಬಂಧವನ್ನು ಅಧಿಕೃತಗೊಳಿಸಿದಂತಾಗಿದೆ.

- Advertisement -

Related news

error: Content is protected !!