Monday, June 15, 2026
spot_imgspot_img
spot_imgspot_img

ಬಂಟ್ವಾಳ: ಅನ್ಯಕೋಮಿನ ಯುವಕನೊಂದಿಗೆ ಬೆಂಗಳೂರಿಗೆ ತೆರಳುತ್ತಿದ್ದ ಹಿಂದೂ ಯುವತಿ; ಬಸ್ ತಡೆದು ನಿಲ್ಲಿಸಿದ ಬಜರಂಗದಳ ಕಾರ್ಯಕರ್ತರು

- Advertisement -
- Advertisement -

ಬಂಟ್ವಾಳ: ಮುಸ್ಲಿಂ ಹುಡುಗನೊಂದಿಗೆ ಬಸ್ಸಿನಲ್ಲಿ ಬೆಂಗಳೂರಿಗೆ ತೆರಳುತ್ತಿದ್ದ ಹಿಂದೂ ಹುಡುಗಿಯನ್ನು ಬಜರಂಗದಳ ಕಾರ್ಯಕರ್ತರು ಬಸ್ ತಡೆದು ನಿಲ್ಲಿಸಿದ ಘಟನೆ ಕಲ್ಲಡ್ಕ ಸಮೀಪದ ದಾಸಕೋಡಿ ಎಂಬಲ್ಲಿ ನಡೆದಿದೆ.

ಕಾನೂನು ಪದವಿ ಮುಗಿಸಿರುವ ಭಟ್ಕಳ ಮೂಲದ ಮುಸ್ಲಿಂ ಯುವಕ ಮತ್ತು ಆತನ ಜೊತೆಗೆ ಕಾಲೇಜು ಓದಿದ್ದಳು ಎನ್ನಲಾದ ಬಂಟ ಸಮುದಾಯದ ಮಂಗಳೂರಿನ ಹುಡುಗಿ ಬೆಂಗಳೂರು ತೆರಳುತ್ತಿದ್ದ ದುರ್ಗಾಂಬಾ ಬಸ್ಸಿನಲ್ಲಿ ಜೊತೆಗೆ ಪ್ರಯಾಣಿಸುತ್ತಿದ್ದಾರೆ ಎಂಬ ಮಾಹಿತಿ ಪಡೆದು ಸಂಘಟನೆ ಕಾರ್ಯಕರ್ತರು ಬಂಟ್ವಾಳದ ದಾಸಕೋಡಿ ಎಂಬಲ್ಲಿ ತಡೆದು ನಿಲ್ಲಿಸಿ ಅವರಿಬ್ಬರನ್ನು ವಿಚಾರಿಸಿ, ಪೊಲೀಸರಿಗೊಪ್ಪಿಸಿದ್ದಾರೆ ಎಂದು ತಿಳಿದು ಬಂದಿದೆ.

ಸಂಘಟನೆ ಕಾರ್ಯಕರ್ತರು ಬಸ್ ನಿಲ್ಲಿಸಿ, ಮಾತಿನ ಚಕಮಕಿ ನಡೆಸಿರುವ ವಿಡಿಯೋ ತುಣುಕು ವೈರಲ್ ಆಗಿದೆ. ಘಟನೆ ಬಗ್ಗೆ ಬಂಟ್ವಾಳ ನಗರ ಠಾಣೆ ಪೊಲೀಸರು ಸ್ವಯಂಪ್ರೇರಿತ ಪ್ರಕರಣ ದಾಖಲಿಸಿದ್ದಾರೆ.

- Advertisement -

Related news

error: Content is protected !!