Tuesday, June 23, 2026
spot_imgspot_img
spot_imgspot_img

ದಿನಗೂಲಿ ಕಾರ್ಮಿಕನ ಖಾತೆಗೆ ಜಮಾ ಆಯ್ತು ಬರೋಬ್ಬರಿ ₹9.99 ಕೋಟಿ; ಹೇಗೆ ಗೊತ್ತಾ..?

- Advertisement -
- Advertisement -
driving

ಪಾಟ್ನಾ: ಇತ್ತೀಚೆಗೆ ಬಿಹಾರದಲ್ಲಿ ಇಬ್ಬರು ಮಕ್ಕಳ ಖಾತೆಗೆ ಸುಮಾರು 900 ಕೋಟಿ ರೂಪಾಯಿಗೂ ಹೆಚ್ಚು ಹಣ ಜಮಾ ಆಗಿತ್ತು. ಈ ಬೆನ್ನಲ್ಲೇ ರೈತನೋರ್ವನ ಖಾತೆಗೆ 50 ಕೋಟಿ ರೂಪಾಯಿ ಜಮೆಯಾದ ಬಳಿಕ ಈಗ ದಿನಗೂಲಿ ಕಾರ್ಮಿಕ ಬ್ಯಾಂಕ್​​ ಅಕೌಂಟ್​​ಗೆ 9.99 ಕೋಟಿ ರೂ. ಠೇವಣಿಯಾದ ಪ್ರಕರಣ ಬೆಳಕಿಗೆ ಬಂದಿದೆ.

ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾಗೆ ಖಾತೆ ತೆರೆಯಲು ಹೋದ ದಿನಗೂಲಿ ಕಾರ್ಮಿಕನಿಗೆ ಅಚ್ಚರಿ ಕಾದಿತ್ತು. ತನ್ನ ಖಾತೆಯಲ್ಲಿ 9.99 ಕೋಟಿ ರೂಪಾಯಿ ಜಮಾ ಆಗಿರುವುದಾಗಿ ಬ್ಯಾಂಕ್​​ ಮ್ಯಾನೇಜರ್​​ ಹೇಳಿದಾಗ ಈತ ಶಾಕ್​​ಗೆ ಈಡಾಗಿದ್ದಾರೆ.

ವಿಚಿತ್ರವೆಂದರೆ, ವಿಪಿನ್ ಚೌಹಾಣ್ ಎಂಬ ಕಾರ್ಮಿಕ ತಾನು ಯಾವುದೇ ಬ್ಯಾಂಕಿನಲ್ಲಿ ಖಾತೆ ತೆರೆದಿಲ್ಲ ಎಂದು ಹೇಳಿಕೊಂಡಿದ್ದಾನೆ. ಬಿಹಾರದ ಸುಪಾಲ್ ಪಟ್ಟಣದ ಸಿಸೌನಿ ಪ್ರದೇಶದ ಚೌಹಾಣ್​​ ಹೊಸ ಖಾತೆ ತೆರೆಯಲು ಹೋದಾಗ ಈ ವಿಚಾರ ಬೆಳಕಿಗೆ ಬಂದಿದೆ.

ಖಾತೆ ತೆರೆಯಲು ಹೋದಾಗ ಈತನ ಹೆಸರಿನ ಆಧಾರ್ ಕಾರ್ಡ್​ ಮೂಲಕ ಬ್ಯಾಂಕ್ ನಲ್ಲಿ ​​ಪರಿಶೀಲಿಸಿದ್ದಾರೆ. ಈ ವೇಳೆ ಇವರ ಹೆಸರಿನಲ್ಲಿ 10 ಕೋಟಿಯಷ್ಟು ಹಣ ಬಂದು ಜಮಾ ಆಗಿರುವುದಾಗಿ ಪತ್ತೆಯಾಗಿದೆ. ಇದರಿಂದ ಚೌಹಾಣ್ ದಿಗ್ಭ್ರಾಂತರಾಗಿದ್ದಾರೆ. ಅಲ್ಲದೇ ನಾನು ಖಾತೆಯೇ ತೆರೆದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

- Advertisement -

Related news

error: Content is protected !!