Saturday, April 27, 2024
spot_imgspot_img
spot_imgspot_img

ದಿ ಕೇರಳ ಸ್ಟೋರಿ ಇಂಪಾಕ್ಟ್; ಪ್ರಿಯಕರನ ಮೇಲೆ ಅತ್ಯಾಚಾರ, ಬಲವಂತವಾಗಿ ಮತಾಂತರದ ಆರೋಪ – ಯುವಕ ಅರೆಸ್ಟ್

- Advertisement -G L Acharya panikkar
- Advertisement -

ದಿ ಕೇರಳ ಸ್ಟೋರಿ ಸಿನೆಮಾ ಹಲವು ಅಂಶಗಳಿಂದ ಸುದ್ದಿಯಲ್ಲಿದೆ. ಸಿನೆಮಾ ನೋಡಿದ ಹೆಂಗಳೆಯರು ಮುಸ್ಲಿಂ ಯುವಕರೊಂದಿಗೆ ಮದುವೆಯನ್ನು ರದ್ದು ಮಾಡಿದ್ದೂ ಇದೆ. ಈಗ ಚಿತ್ರಕ್ಕೆ ಸಂಬಂಧಿಸಿದ ಹೊಸ ಬೆಳವಣಿಗೆಯೊಂದರಲ್ಲಿ, ಮಧ್ಯಪ್ರದೇಶದ ಇಂದೋರ್‌ನಲ್ಲಿ ನಡೆದಿದೆ. ಮಹಿಳೆಯೊಬ್ಬರು ದಿ ಕೇರಳ ಸ್ಟೋರಿ ಚಿತ್ರವನ್ನು ವೀಕ್ಷಿಸಿದ ನಂತರ ತನ್ನ ಪ್ರಿಯಕರನ ಮೇಲೆ ಅತ್ಯಾಚಾರ ಮತ್ತು ಬಲವಂತವಾಗಿ ಮತಾಂತರಕ್ಕೆ ಪ್ರಯತ್ನಿಸುತ್ತಿದ್ದಾನೆ ಎಂದು ಆರೋಪಿಸಿ ಪೊಲೀಸ್ ಠಾಣಾ ಮೆಟ್ಟಿಲೇರಿದ್ದಾರೆ.

ವರದಿಗಳ ಪ್ರಕಾರ, ‘ದಿ ಕೇರಳ ಸ್ಟೋರಿ’ ವೀಕ್ಷಿಸಿದ ನಂತರ ಸಂತ್ರಸ್ತೆ ಮತ್ತು ಆರೋಪಿಯ ನಡುವೆ ಉಂಟಾದ ಜಗಳದ ನಂತರ 23 ವರ್ಷದ ಯುವತಿ ತನ್ನ ಗೆಳೆಯನ ವಿರುದ್ಧ ಎಫ್‌ಐಆರ್ ದಾಖಲಿಸಿದ್ದಾರೆ. ಬಲವಂತದ ಮತಾಂತರಗಳನ್ನು ನಿಷೇಧಿಸುವ ಮಧ್ಯಪ್ರದೇಶ ಧರ್ಮ ಸ್ವಾತಂತ್ರ್ಯ ಕಾಯಿದೆ 2021 ಮತ್ತು ಭಾರತೀಯ ದಂಡ ಸಂಹಿತೆ ಅಡಿಯಲ್ಲಿ ಆರೋಪಿಯನ್ನು ನಂತರ ಬಂಧಿಸಲಾಯಿತು.

“ತನ್ನ ಗೆಳೆಯ ತನ್ನ ಮೇಲೆ ಅತ್ಯಾಚಾರ ಎಸಗಿದ್ದಲ್ಲದೆ, ತನ್ನ ಧರ್ಮವನ್ನು ಬದಲಾಯಿಸುವಂತೆ ಒತ್ತಾಯಿಸಿದ್ದಾನೆ. ಇದು ಮಾನಸಿಕ ಯಾತನೆ ಉಂಟುಮಾಡಿದೆ” ಎಂದು ಮಹಿಳೆ ತನ್ನ ಎಫ್‌ಐಆರ್‌ನಲ್ಲಿ ಆರೋಪಿಸಿದ್ದಾರೆ. ಚಲನಚಿತ್ರವನ್ನು ವೀಕ್ಷಿಸಿದ ನಂತರ, ಈ ಜೋಡಿ ಜಗಳವಾಡಿದರು. ಈ ಸಮಯದಲ್ಲಿ ಆರೋಪಿ ತನ್ನ ಮೇಲೆ ಹಲ್ಲೆ ನಡೆಸಿದ್ದಾನೆ ಎಂದು ಮಹಿಳೆ ಆರೋಪಿಸಿದ್ದಾರೆ. ಮೇ 19 ರಂದು ಸಂತ್ರಸ್ತೆ ಪೊಲೀಸರನ್ನು ಸಂಪರ್ಕಿಸಿ ಎಫ್‌ಐಆರ್ ದಾಖಲಿಸಿದ್ದಾರೆ.

ಆರೋಪಿ ಒಬ್ಬ 12ನೇ ತರಗತಿ ಉತ್ತೀರ್ಣರಾದ ನಿರುದ್ಯೋಗಿ ಮತ್ತು ಉನ್ನತ ಶಿಕ್ಷಣ ಪಡೆದು ಮಹಿಳೆ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿರುವ ಬಗ್ಗೆ ವರದಿ ತಿಳಿಸುತ್ತದೆ. ಐದು ವರ್ಷದ ಹಿಂದೆ ಇವರರಿಬ್ಬರು ಟ್ಯೂಷನ್ ಒಂದರಲ್ಲಿ ಬೇಟಿಯಾಗಿದ್ದಾಗಿ ಸಂತ್ರಸ್ತೆ ಮಾಹಿತಿ ನೀಡಿದ್ದಾರೆ. ಮಹಿಳೆಗೆ ಪ್ರೀತಿ ಮತ್ತು ಮದುವೆಯ ನೆಪದಲ್ಲಿ ಆಮಿಷವೊಡ್ಡುತ್ತಿದ್ದ ಎಂದು ಆರೋಪಿಸಲಾಗಿದೆ. ಸದ್ಯ ಮಹಿಳೆ ಮಾಡಿರುವ ಆರೋಪದ ಬಗ್ಗೆ ಪೊಲೀಸರು ಸಮಗ್ರ ತನಿಖೆ ನಡೆಸುತ್ತಿದ್ದಾರೆ.

- Advertisement -

Related news

error: Content is protected !!