Saturday, May 18, 2024
spot_imgspot_img
spot_imgspot_img

ದುಷ್ಕರ್ಮಿಗಳಿಂದ ಹತ್ಯೆಗೀಡಾದ ಹರ್ಷ ನಿವಾಸಕ್ಕೆ ನಳಿನ್ ಕುಮಾರ್ ಕಟೀಲ್ ಸೇರಿ ಬಿಜೆಪಿಯ ಪ್ರಮುಖ ನಾಯಕರ ಭೇಟಿ, ಸಾಂತ್ವನ

- Advertisement -G L Acharya panikkar
- Advertisement -

ಶಿವಮೊಗ್ಗ: ದುಷ್ಕರ್ಮಿಗಳಿಂದ ಹತ್ಯೆಗೀಡಾಗಿದ್ದ ಬಜರಂಗದಳ ಕಾರ್ಯಕರ್ತ ಹರ್ಷ ಸೀಗೆಹಟ್ಟಿಯ ನಿವಾಸಕ್ಕೆ ಬುಧವಾರ ಬಿಜೆಪಿಯ ಪ್ರಮುಖ ನಾಯಕರು ಭೇಟಿ ನೀಡಿ ಕುಟುಂಬ ಸದಸ್ಯರಿಗೆ ಸಾಂತ್ವನ ಹೇಳಿ ಧೈರ್ಯ ತುಂಬಿದ್ದಾರೆ.

ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್, ಸಚಿವ ಈಶ್ವರಪ್ಪ, ಕೋಟ ಶ್ರೀನಿವಾಸ ಪೂಜಾರಿ, ಬಿಜೆಪಿ ರಾಜ್ಯ ಉಪಾಧ್ಯಕ್ಷ ವಿಜಯೇಂದ್ರ ಸೇರಿ ಕೆಲ ಶಾಸಕರು ಭೇಟಿ ನೀಡಿ ಕುಟುಂಬಸ್ಥರಿಗೆ ಧೈರ್ಯ ತುಂಬಿದ್ದಾರೆ.

ಕಾಣದ ಶಕ್ತಿಗಳನ್ನು ಮಟ್ಟ ಹಾಕುತ್ತೇವೆ: ನಳೀನ್ ಕುಮಾರ್

ಹರ್ಷನ ಕುಟುಂಬಕ್ಕೆ ಧೈರ್ಯ ಹಾಗೂ ಆತ್ಮಸ್ಥೈರ್ಯ ತುಂಬುವ ಕೆಲಸ ಮಾಡಿದ್ದೇವೆ.ಘಟನೆಯ ಸಂಪೂರ್ಣ ವರದಿ ಕೇಳಿದ್ದೇವೆ.ಈ ಘಟನೆ ಗೆ ಸಂಬಂಧಿಸಿದವರ ಬಂಧನ ಮಾಡಿದ್ದೇವೆ.ಇದರ ಹಿಂದಿರುವ ಕಾಣದ ಶಕ್ತಿಗಳನ್ನು ಮಟ್ಟ ಹಾಕುತ್ತೇನವೆ. ಸರಕಾರ ಮತ್ತೆ ಈ ರೀತಿಯ ಘಟನೆ ನಡೆಯದಂತೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುತ್ತದೆ. ಮೂರುವರೆ ವರ್ಷಗಳ ನಮ್ಮ ಅಡಳಿತದಲ್ಲಿ ಇದೊಂದು ನಡೆಯಬಾರದಿತ್ತು, ಮುಂದೆ ನಡೆಯದ ಹಾಗೇ ನೋಡಿಕೊಳ್ಳುತ್ತೇವೆ ಎಂದರು.

ನಾಳೆ ಸಂಜೆ ಕಾಂಗ್ರೆಸ್ ನಾಯಕರಿಂದ ವಿಧಾನಸೌಧದಿಂದ ರಾಜಭವನದ ವರೆಗೆ ಪಾದಯಾತ್ರೆಸಂಘಟನೆ ಗಳನ್ನು ಬ್ಯಾನ್ ಮಾಡಲು ಅದರದ್ದೇ ಆದಂತಹ ಮಾನದಂಡಗಳಿವೆ. ಒಂದು ಸಂಘಟನೆ ರಾಜಕೀಯ ಸಂಘಟನೆ ಎಂದು ಬಂದಿದೆ ಎಂದು ಕಟೀಲ್ ಹೇಳಿದರು.

vtv vitla
vtv vitla

ಕಗ್ಗೊಲೆ ಅಗುತ್ತೆ ಆಂತಾ ಕಲ್ಪನೆ ಇರ್ಲಿಲ್ಲ: ಸಚಿವ ಕೆ.ಎಸ್.ಈಶ್ವರಪ್ಪ

ಹರ್ಷ ಕಗ್ಗೊಲೆ ಅಗುತ್ತೆ ಆಂತಾ ಕಲ್ಪನೆ ಇರ್ಲಿಲ್ಲ.ಸರ್ಕಾರ ಯಾರು ಗೂಂಡಾಗಳಿದ್ದಾರೆ ಅವರ ಬಂಧನ ಮಾಡಿದೆ. ಇಡೀ ರಾಜ್ಯದ ಹಿಂದೂ ಸಮಾಜ ಹರ್ಷನ ಕೊಲೆಯನ್ನು ಖಂಡಿಸುತ್ತಿದೆ. ಕುಟುಂಬಕ್ಕೆ ಆಗಿರುವ ಅನ್ಯಾಯ ವನ್ನು ಬಿಡೋದಿಲ್ಲ ಅಂತಾ ಸಿಎಂ ಹೇಳಿದ್ದಾರೆ.ಕುಟುಂಬಕ್ಕೆ ಏನೇನೂ ಪರಿಹಾರ ಕೊಡಬೇಕು ಅದನ್ನು ಕೊಡೋ ಭರವಸೆ ಸಿಎಂ ನೀಡಿದ್ದಾರೆ ಎಂದು ಸಚಿವ ಈಶ್ವರಪ್ಪ ಹೇಳಿಕೆ ನೀಡಿದ್ದಾರೆ.

ಕುಟುಂಬದ ಜೊತೆ ನಾವಿದ್ದೇವೆ: ಸಚಿವ ಕೋಟ

ಮತಾಂಧ ಶಕ್ತಿಗಳು ಹರ್ಷ ಹತ್ಯೆ ಮಾಡಿವೆ.ಬೇರೆಯವರಿಗೆ ಹೀಗೆ ಆಗಬಾರದು.ಕಠಿಣ ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದೇವೆ, ವ್ಯವಸ್ಥಿತವಾಗಿ ಷಡ್ಯಂತ್ರ ಮಾಡಿ ಹತ್ಯೆ ಮಾಡಿದ್ದಾರೆ.ಸರ್ಕಾರ ಸಮಾಜಕ್ಕೆ ದೊಡ್ಡ ಸವಾಲು ಇದು.ಹಿಂದೆ ಯಾವ ಸಂಘಟನೆ ಇದ್ದರೂ ಜೈಲಿಗೆ ‌ಕಳುಹಿಸುವ ಕ್ರಮ ಅಗುತ್ತದೆ.ಟೀ ಕುಡಿಯಲು ಹೋದ ಹುಡುಗನನ್ನ ಕೊಲೆ ಮಾಡಿದ್ದಾರೆ.ಅವರ ಕುಟುಂಬದ ಜೊತೆ ನಾವಿದ್ದೇವೆ ಎಂದು ಧೈರ್ಯ ತುಂಬಿದ್ದೆವೆ ಎಂದು ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದ್ದಾರೆ.

ಇನ್ಯಾರು ದುಷ್ಕೃತ್ಯಕ್ಕೆ ಕೈಹಾಕಬಾರದು: ವಿಜಯೇಂದ್ರ

ರಾಜ್ಯ ಸರ್ಕಾರ ಗಂಭೀರವಾಗಿ ತೆಗೆದುಕೊಂಡಿದೆ. ಈ ಘಟನೆ ನಡೆಯಬಾರದಿತ್ತು.ಸರ್ಕಾರ ಗಂಭೀರ ತೆಗೆದುಕೊಂಡಿದ್ದರಿಂದ ಅರೋಪಿತರ ಬಂಧನವಾಗಿದೆ.ಕಾಂಗ್ರೆಸ್ ಮುಖಂಡರ ನಡುವಳಿಕೆ ತಲೆತಗ್ಗಿಸುವಂತಹದ್ದು ಎಂದು ವಿಜಯೇಂದ್ರ ಹೇಳಿದರು.

ಯಾವ ರೀತಿ ಕ್ರಮ ಕೈಗೊಳ್ಳಬೇಕು ಅಂದ್ರೆ ಇನ್ಯಾರು ದುಷ್ಕೃತ್ಯಕ್ಕೆ ಕೈಹಾಕಬಾರದು ಎಂದು ಬಿಜೆಪಿ ರಾಜ್ಯ ಉಪಾಧ್ಯಕ್ಷ ಬಿ.ವೈ ವಿಜಯೇಂದ್ರ ಹೇಳಿಕೆ ನೀಡಿದರು.

- Advertisement -

Related news

error: Content is protected !!