Friday, May 17, 2024
spot_imgspot_img
spot_imgspot_img

ದೇವರ ಪಲ್ಲಕ್ಕಿ ಹೊತ್ತು ವಿವಾದಕ್ಕೆ ಕಾರಣರಾದ ಶಾಸಕ ಹರೀಶ್ ಪೂಂಜಾ

- Advertisement -G L Acharya panikkar
- Advertisement -

vtv vitla

ಬೆಳ್ತಂಗಡಿ : ಗೌಡ ಸಾರಸ್ವತ ಬ್ರಾಹ್ಮಣರಿಗೆ ಸೇರಿದ ವೆಂಕಟರಣ ದೇವಸ್ಥಾನದ ದೇವರ ಪಲ್ಲಕಿಯನ್ನು ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ ಹೊತ್ತಿರುವುದು ಇದೀಗ ವಿವಾದಕ್ಕೆ ಕಾರಣವಾಗಿದೆ.

ಕಾರ್ಯಕ್ರಮವನ್ನು ಮುಗಿಸಿ ಮನೆ ತೆರಳುತ್ತಿದ್ದ ಶಾಸಕ ಹರೀಶ್ ಪೂಂಜಾ ಅವರನ್ನು ಬೆಳ್ತಂಗಡಿ ಲಾಯಿಲ ವೆಂಕಟರಮಣ ದೇವರ ಪಲ್ಲಕ್ಕಿ ಹೊರಲು ಸ್ಥಳೀಯ ಯುವಕರು ಒತ್ತಾಯಿಸಿದ್ದಾರೆ. ಈ ಹಿನ್ನಲೆ ಶಾಸಕರು ಪಲ್ಲಕ್ಕಿಗೆ ಹೆಗಲು ಕೊಟ್ಟಿದ್ದಾರೆ. ಇದು ಸದ್ಯ ವಿವಾದಕ್ಕೆ ಕಾರಣವಾಗಿದ್ದು. ಗೌಡ ಸಾರಸ್ವತ ಬ್ರಾಹ್ಮಣರಿಗೆ ಸೇರಿದ ವೆಂಕಟರಮಣ ದೇವಸ್ಥಾನದಲ್ಲಿ ಗೌಡ ಸಾರಸ್ವತರಲ್ಲದೆ ಬೇರೆ ಜಾತಿಗೆ ಪಲ್ಲಕ್ಕಿ ಹೊರಲು ನಿಷೇಧ ಇದೆ.

ಈ ಹಿನ್ನಲೆ ಶಾಸಕ ಹರೀಶ್ ಪೂಂಜಾ ಅವರು ಪಲ್ಲಕಿ ಹೊತ್ತಿರುವುದರಿಂದ ಸಮುದಾಯ ಸಂಪ್ರದಾಯಕ್ಕೆ ಚ್ಯುತಿ ಬಂದಿದೆ ಎಂದು ಸಮುದಾಯದ ಮುಖಂಡರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದು ವಿವಾದಕ್ಕೆ ಕಾರಣವಾದ ಬಳಿಕ ಶಾಸಕರನ್ನು ಒತ್ತಾಯಿಸಿದ ಯುವಕರು ದೇವರ ಮುಂದೆ ತಪ್ಪಿನ ಕಾಣಿಕೆ ಇಟ್ಟು ಕ್ಷಮೆ ಕೇಳಿದ್ದಾರೆ.

- Advertisement -

Related news

error: Content is protected !!