Thursday, March 28, 2024
spot_imgspot_img
spot_imgspot_img

ದೇಶದಲ್ಲೇ ಮೊದಲ ಬಾರಿಗೆ ಅತೀ ಕಡಿಮೆ ಬೆಲೆಯ 5ಜಿ ಮೊಬೈಲ್‌ ಬಿಡುಗಡೆ..! ಇಲ್ಲಿದೆ ಕಂಪ್ಲೀಟ್‌ ಡೀಟೈಲ್ಸ್‌

- Advertisement -G L Acharya panikkar
- Advertisement -

ಇತ್ತೀಚಿಗೆ 5ಜಿ ನೆಟ್‌ವರ್ಕ್‌ ಸೇವೆ ದೇಶದೆಲ್ಲೆಡೆ ಪ್ರಾರಂಭವಾಗಿದ್ದು. ಈ ಮಧ್ಯೆ 5ಜಿ ಮೊಬೈಲ್‌ಗಳನ್ನೇ ಕಂಪನಿಗಳು ಉತ್ಪಾದಿಸುತ್ತಿದೆ. ಇದರಿಂದ ಗ್ರಾಹಕರು ಕೂಡ ಉತ್ತಮ ಗುಣಮಟ್ಟದ 5ಜಿ ಫೋನ್‌ಗಳನ್ನು ಖರೀದಿ ಮಾಡಲು ಕಾಯ್ತಾ ಇದ್ದಾರೆ.

ದುಬಾರಿ ಫೋನ್‌ಗಳು ಎಂಟ್ರಿಕೊಡುತ್ತಿರುವ ಈ ಕಾಲಘಟ್ಟದಲ್ಲಿ ಇಂಡಿಯನ್ ಮೊಬೈಲ್‌ ಉತ್ಪಾದನಾ ಕಂಪೆನಿ ಲಾವಾ ಕಡಿಮೆ ದರದ 5G ಫೋನ್‌ ತಯಾರಿಸಿದೆ. ಲಾವಾ ಬ್ಲೇಜ್‌ 5ಜಿ (Lava Blaze 5G) ಎಂಬ ಮೊಬೈಲ್‌ ಬಿಡುಗಡೆಯಾಗುತ್ತಿರುವ ಅತೀ ಕಡಿಮೆಯ ಮೊಬೈಲ್‌ ಆಗಿದೆ.

ಲಾವಾ ಬ್ಲೇಜ್‌ 5ಜಿ ಮೊಬೈಲ್‌
ಭಾರತದ ಪ್ರಮುಖ ಮೊಬೈಲ್ ತಯಾರಕರಾದ ಲಾವಾ (LAVA) ಅಂತಿಮವಾಗಿ ತನ್ನ ಕೈಗೆಟುಕುವ 5G ಸ್ಮಾರ್ಟ್‌ಫೋನ್ ಲಾವಾ ಬ್ಲೇಜ್ 5G (Lava Blaze 5G) ಅನ್ನು ಅಧಿಕೃತವಾಗಿ ಘೋಷಿಸಿದೆ. ಕೆಲವೇ ದಿನಗಳಲ್ಲಿ ಫೋನ್‌ನ ಫೀಚರ್ಸ್ ಬಗ್ಗೆ ಅತ್ಯಂತ ರಹಸ್ಯವಾಗಿಟ್ಟಿದ್ದ ಲಾವಾ ಇಂದು ಫೋನ್‌ನ ಬೆಲೆ ವಿವರಗಳನ್ನು ಬಹಿರಂಗಪಡಿಸಿದೆ.

ವಾಸ್ತವವಾಗಿ ಈ ಫೋನ್‌ನ ಬೆಲೆ 10,000 ರೂಪಾಯಿಗಳ ಒಳಗೆ ಇರುತ್ತದೆ ಎಂದು ಈ ಹಿಂದೆ ಸುಳಿವು ನೀಡಿತ್ತು. ಈ ಲಾವಾ ಬ್ಲೇಜ್ 5G ಫೋನ್ ಬೆಲೆ ಕೇವಲ ರೂ.9999 ಆಗಿದ್ದರೂ ಸಹ ಫೋನ್‌ನ ವಿಶೇಷತೆಗಳು ಮತ್ತು ವೈಶಿಷ್ಟ್ಯಗಳು ಆಕರ್ಷಕವಾಗಿವೆ ಎಂಬುದರಲ್ಲಿ ಸಂದೇಹವಿಲ್ಲ.

ಲಾವಾ ಬ್ಲೇಜ್ 5ಜಿ ಫೀಚರ್ಸ್‌ಗಳು:
6.5 ಇಂಚಿನ HD+ ರೆಸಲ್ಯೂಶನ್ ಮತ್ತು 90Hz ರಿಫ್ರೆಶ್ ರೇಟ್ ಡಿಸ್‌ಪ್ಲೇ
ಡಿಸ್ಪ್ಲೇಯು ವಾಟರ್ ಡ್ರಾಪ್ ನಾಚ್ ವಿನ್ಯಾಸ
ನಾಚ್ 8MP ಸೆಲ್ಫಿ ಕ್ಯಾಮೆರಾ
ಫಿಂಗರ್‌ಪ್ರಿಂಟ್ ಸ್ಕ್ಯಾನರ್
ಮೀಡಿಯಾಟೆಕ್ 5G ಪ್ರೊಸೆಸರ್ ಡೈಮೆನ್ಸಿಟಿ 700 ಆಕ್ಟಾ ಕೋರ್
4G RAM ಮತ್ತು 3GB ವರ್ಚುವಲ್ RAM
ಇಂಟರ್ನಲ್‌ ಸ್ಟೋರೇಜ್ 128ಜಿಬಿ
ಮ್ಯಾಕ್ರೋ ಕ್ಯಾಮೆರಾಗಳೊಂದಿಗೆ EIS ಬೆಂಬಲದೊಂದಿಗೆ 50MP ಮೈನ್ ಕ್ಯಾಮೆರಾ
ಈ 5ಜಿ ಸ್ಮಾರ್ಟ್‌ಫೋನ್ Android 12 OS ನಲ್ಲಿ ಕಾರ್ಯನಿರ್ವಹಿಸುತ್ತದೆ.‌
ಇದು 5,000mAh ಬ್ಯಾಟರಿ ಸಾಮರ್ಥ್ಯ

ಇನ್ನು ಈ ಫೋನ್‌ನ ನೆಟ್‌ವರ್ಕ್‌ ಫೀಚರ್ಸ್‌ ಬಗ್ಗೆ ಹೇಳುವುದಾದರೆ ಇದು ಡ್ಯುಯಲ್ ಸಿಮ್, ವೈ-ಫೈ 6, ಬ್ಲೂಟೂತ್ 5.1, ಜಿಪಿಎಸ್, ಯುಎಸ್‌ಬಿ ಟೈಪ್-ಸಿ ಪೋರ್ಟ್ ಮತ್ತು 3.5 ಎಂಎಂ ಆಡಿಯೊ ಜಾಕ್ ಅನ್ನು ಬೆಂಬಲಿಸುತ್ತದೆ.

- Advertisement -

Related news

error: Content is protected !!