Friday, May 3, 2024
spot_imgspot_img
spot_imgspot_img

ದೇಹದ ರಕ್ತವನ್ನು ಶುದ್ಧೀಕರಿಸಲು ಈ ಆಹಾರಗಳನ್ನು ಸೇವಿಸಿ

- Advertisement -G L Acharya panikkar
- Advertisement -

ದೇಹದಲ್ಲಿ ಹರಿಯುವ ರಕ್ತ ಸದಾ ಆರೋಗ್ಯಕರವಾಗಿರ ಬೇಕೆಂದರೆ, ಕೆಲವೊಂದು ಬಗೆಯ ಆಹಾರ ಪದಾರ್ಥಗಳನ್ನು ನಮ್ಮ ಆರೋಗ್ಯ ಪದ್ಧತಿ ಯಲ್ಲಿ ಸೇರಿಸಿಕೊಳ್ಳಲೇಬೇಕು. ಉದಾಹರಣೆಗೆ ನೋಡುವುದಾದರೆ, ಹಸಿರೆಲೆ ತರಕಾರಗಳು, ಬೀಟ್ರೂಟ್ ಜ್ಯೂಸ್, ತಾಜಾ ಹಣ್ಣುಗಳನ್ನು ಸೇವಿಸುವ ಅಭ್ಯಾಸ ಮಾಡಿ ಕೊಳ್ಳಬೇಕು.

ಆರೋಗ್ಯಕಾರಿ ಜೀವನ ನಡೆಸಬೇಕೆಂದರೆ, ನಾವು ಸೇವಿಸುವ ಆಹಾರಪದಾರ್ಥಗಳು ಎಷ್ಟು ಪ್ರಮುಖ್ಯ ತೆಯೋ, ಅದೇ ರೀತಿಯಾಗಿ ದೇಹದಲ್ಲಿ ಹರಿಯುವ ರಕ್ತ ಕೂಡ ಅಷ್ಟೇ ಪ್ರಾಮುಖ್ಯತೆಯನ್ನು ಪಡೆದು ಕೊಂಡಿದೆ. ಇದಕ್ಕೆ ಹೇಳುವುದು, ದೇಹದಲ್ಲಿ ಹರಿಯುವ ರಕ್ತ ಎನ್ನುವುದು, ನಮಗೆ ಜೀವದ್ರವ ಇದ್ದ ಹಾಗೆ, ಇದಕ್ಕೆ ಬೆಲೆಕಟ್ಟುವುದಾಗಲಿ ಅಥವಾ ಪರ್ಯಾಯ ದ್ರವನ್ನು ಒದಗಿಸುವುದಾಗಲೀ ಸಾಧ್ಯವಿಲ್ಲದ ಮಾತು.

ಕೆಲವೊಮ್ಮೆ ನಮ್ಮ ಅನಾರೋಗ್ಯಕಾರಿ ಜೀವನಶೈಲಿಯಿಂದಾಗಿ ಅಥವಾ ಕೆಟ್ಟ ದುರಾಭ್ಯಾಸಗಳಿಂದಾಗಿ, ಜೀವಕೋಶಗಳಿಗೆ ಶಕ್ತಿಯನ್ನು ಒದಗಿಸಿ, ದೇಹದೊಳಗಿನ ಕಲ್ಮಶಗಳನ್ನು ಶುದ್ದೀಕರಿಸುವ ರಕ್ತ, ಸಡನ್ ಆಗಿ ಮಲಿನಗೊಳ್ಳುತ್ತದೆ. ಇದು ನಿಜಕ್ಕೂ ಆತಂಕಕಾರಿ ಸಂಗತಿ, ಯಾಕೆಂದರೆ ಇದರಿಂದಾಗಿ ಇತರ, ಪ್ರಮುಖ ಅಂಗಾಂಗಗಳಿಗೂ ಕೂಡ ತೊಂದರೆ ಉಂಟಾಬಹುದು. ಹೀಗಾಗಿ ರಕ್ತದ ಗುಣ ಮಟ್ಟ ಉತ್ತಮವಾಗಿರ ಬೇಕೆಂದರೆ, ಈಗಾಗಲೇ ಮಲೀನಗೊಂಡಿರುವ ರಕ್ತ, ಶುದ್ಧೀಕರಣಗೊಳ್ಳಬೇಕು. ಹೀಗಾಗಿ ಈ ಸಮಸ್ಯೆಗೆ ಸೂಕ್ತವಾಗಿರುವ ಆಹಾರಗಳನ್ನು ಸೇವಿಸಬೇಕು. ಬನ್ನಿ ಹಾಗಾದ್ರೆ ದೇಹದ ರಕ್ತವನ್ನು ಶುದ್ಧೀಕರಿಸುವ ಅಂತಹ ಆಹಾರಗಳು ಯಾವುದು ಎಂಬುದನ್ನು ನೋಡೋಣ.

ಹಸಿರೆಲೆ ತರಕಾರಿಗಳು

ಹಸಿರೆಲೆ ತರಕಾರಿಗಳನ್ನು ಹೇಗೆ, ಅಳೆದು ತೂಗಿದರೂ ಕೂಡ, ಇದು ತುಂಬಾನೇ ಆರೋಗ್ಯಕರವಾದ, ತರಕಾರಿ ಎನ್ನುವುದರಲ್ಲಿ ಎರಡು ಮಾತಿಲ್ಲ! ಅದರಲ್ಲು ಹಸಿರೆಲೆ ಸೊಪ್ಪುಗಳಲ್ಲಿ ಮನುಷ್ಯನ ಆರೋ ಗ್ಯಕ್ಕೆ ಬೇಕಾಗುವ ಎಲ್ಲಾ ರೀತಿಯ ಪೌಷ್ಟಿಕ ಸತ್ವಗಳು ಕೂಡ ಇದರಲ್ಲಿ ಅಡಗಿದೆ. ಮುಖ್ಯವಾಗಿ ನಮ್ಮ ದೇಹದ ರಕ್ತದ ಶುದ್ಧೀಕರಣ ಮಾಡುವುದರ ಜೊತೆಗೆ, ಆರೋಗ್ಯವನ್ನು ವೃದ್ಧಿಸುವಲ್ಲಿಯೂ ಕೂಡ ಪ್ರಮುಖ ಪಾತ್ರವಹಿಸುತ್ತದೆ.

ಕೆಲವೊಂದು ಹಸಿರೆಲೆ ತರಕಾರಿಗಳನ್ನುಉದಾಹರಣೆಗೆ ನೋಡುವುದಾದರೆ, ಪಾಲಕ್ ಸೊಪ್ಪು, ಮೆಂತೆ ಸೊಪ್ಪು, ಬೀನ್ಸ್, ಕೋಸುಗಡ್ಡೆ, ಕ್ಯಾರೆಟ್, ಹೂಕೋಸು, ಬ್ರೊಕೋಲಿ, ಬೀಟ್ರೋಟ್, ಇಂತಹ ಹಸಿರೆಲೆ ಸೊಪ್ಪು ತರಕಾರಿಗಳಲ್ಲಿ, ಯಥೇಚ್ಛವಾಗಿ ಆಂಟಿಆಕ್ಸಿಡೆಂಟ್ ಗುಣಲಕ್ಷಣಗಳು ಕಂಡು ಬರುವುದರಿಂದ, ಇವು ದೇಹದ ರಕ್ತವನ್ನು ಶುದ್ಧೀಕರಿಸುವುದು ಮಾತ್ರವಲ್ಲದೆ, ದೇಹದ ಲಿವರ್ ಭಾಗ ದಲ್ಲಿ ಕಂಡು ಬರುವ ವಿಷಕಾರಿ ಕಲ್ಮಶಗಳನ್ನು ಹೋಗಲಾಡಿಸಿ, ದೇಹದ ಆರೋಗ್ಯವನ್ನು ಕಾಪಾ ಡುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ.

ಹಣ್ಣುಗಳು

ಸೇಬು, ವಿಟಮಿನ್ ಸಿ ಇರುವ ಸೀಬೆ ಹಣ್ಣು, ಪ್ಲಮ್, ಪಿಯರ್ಸ್, ದ್ರಾಕ್ಷಿಹಣ್ಣು, ದಾಳಿಂಬೆ ಹಣ್ಣು ಇಂತಹ ಕಲ್ಲಂಗಡಿ ಹಣ್ಣು, ಕಿತ್ತಳೆ ಹಣ್ಣು, ಪರಂಗಿ ಹಣ್ಣು, ಬೆರ್ರಿ ಹಣ್ಣು, ಇಂತಹ ಹಣ್ಣುಗಳನ್ನು ಹೆಚ್ಚಾಗಿ ಸೇವಿ ಸುವ ಅಭ್ಯಾಸ ಮಾಡಿಕೊಂಡರೆ ಒಳ್ಳೆಯದು. ಅದರಲ್ಲೂ ಸೇಬು, ಪಿಯರ್ಸ್ ಹಾಗೂ ಪ್ಲಮ್‌ನಂತಹ ಹಣ್ಣುಗಳಲ್ಲಿ ಕರಗುವ ನಾರಾಗಿರುವ ಪೆಕ್ಟಿನ್ ಎನ್ನುವ ಸಂಯುಕ್ತ ಅಂಶ ಹೆಚ್ಚಿನ ಪ್ರಮಾಣದಲ್ಲಿ ಕಂಡು ಬರುತ್ತದೆ. ಇದು ರಕ್ತವನ್ನು ಶುದ್ಧೀಕರಿಸಲು ಪರಿಣಮಕಾರಿಯಾಗಿ ಕಾರ್ಯ ನಿರ್ವಹಿಸುತ್ತದೆ.
ಇದರ ಜೊತೆಗೆ, ದೈನಂದಿನ ಆಹಾರ ಪದಾರ್ಥಗಳಲ್ಲಿ ಬ್ಲ್ಯಾಕ್‌ಬೆರ್ರಿ ಸ್ಟ್ರಾಬೆರಿ, ಹಾಗೂ ಕ್ರ್ಯಾನ್‌ಬೆರ್ರಿ ಗಳಂತಹ ಹಣ್ಣುಗಳನ್ನು ಕೂಡ ಸೇವನೆ ಮಾಡುವುದರಿಂದ, ದೇಹದ ಲಿವರ್‌ನ ಆರೋಗ್ಯ ಉತ್ತಮ ವಾಗಿರುವುದರ ಜೊತೆಗೆ, ದೇಹದ ರಕ್ತ ಕೂಡ ಶುದ್ಧವಾಗಿರುತ್ತದೆ.

ಬೀಟ್ರೂಟ್

ಬೀಟ್ರೂಟ್ ನಲ್ಲಿ ವಿಟಮಿನ್ ಸಿ, ಮ್ಯಾಂಗನೀಸ್, ಪೊಟಾಶಿಯಂ, ಕ್ಯಾಲ್ಸಿಯಂ ಮುಖ್ಯವಾಗಿ ಕಬ್ಬಿನಾಂಶ, ಹೆಚ್ಚಿನ ಪ್ರಮಾಣದಲ್ಲಿ ಇರುವುದರಿಂದ, ಇದೊಂದು ಆರೋಕಾರಿ ತರಕಾರಿ ಎನ್ನುವುದರಲ್ಲಿ ಎರಡು ಮಾತಿಲ್ಲ! ಆದರೆ ನೋಡಲು ರಕ್ತದ ಬಣ್ಣದಂತೆ ಕಾಣುವ, ಈ ತರಕಾರಿ ಯನ್ನು ಹೆಚ್ಚಿನವರು ಇಷ್ಟ ಪಡುವುದಿಲ್ಲ.

ಆದರೆ ಈ ತರಕಾರಿಯಲ್ಲಿರುವ ಬೀಟೈನ್ ಎನ್ನುವ ಅಂಶವು, ದೇಹದ ಲಿವರ್ ಭಾಗದಲ್ಲಿ ಯಾವುದೇ ರೀತಿಯ ಕಲ್ಮಶಗಳು ಸಂಗ್ರಹಣೆ ಆಗದಂತೆ ನೋಡಿಕೊಂಡು, ರಕ್ತವನ್ನು ಶುದ್ಧೀಕರಿಸುವ ಕೆಲಸವನ್ನು ಅಚ್ಚುಕಟ್ಟಾಗಿ ಮಾಡುತ್ತದೆ. ಹಾಗಾಗಿ ಇಷ್ಟವಾಗದಿದ್ದರೂ ಪರವಾಗಿಲ್ಲ, ಈ ಕೆಂಪು ಬಣ್ಣದ ತರಕಾರಿ ಯನ್ನು ಹಸಿಯಾಗಿಯೂ ಅಥವಾ ಬೇಯಿಸಿಯೂ ಸೇವಿಸುವ ಅಭ್ಯಾಸ ಮಾಡಿ ಕೊಂಡರೆ ಒಳ್ಳೆಯದು.

ಬೆಲ್ಲ

ಸಕ್ಕರೆಯ ಪರ್ಯಾಯವಾಗಿ ಬಳಸುವ ಬೆಲ್ಲದಲ್ಲಿ ಆರೋಗ್ಯಕ್ಕೆ ಬೇಕಾಗುವ ಎಲ್ಲಾ ರೀತಿಯ ಆರೋಗ್ಯ ಪ್ರಯೋಜನಗಳು ಕೂಡ ಸಿಗುತ್ತದೆ! ಜಿಂಕ್ ಮತ್ತು ಸೆಲೆನಿಯಂ ಅಂಶಗಳ ಪ್ರಮಾಣ ಬೆಲ್ಲದಲ್ಲಿ ಹೆಚ್ಚಾಗಿ ಕಂಡುಬರುವುರಿಂದ, ಇದು ದೇಹದ ರೋಗನಿರೋಧಕ ಶಕ್ತಿಯನ್ನು ಹೆಚ್ಚು ಮಾಡುವುದು ಮಾತ್ರವಲ್ಲದೆ, ಇದರಲ್ಲಿ ಕಂಡು ಬರುವ ಕಬ್ಬಿಣದ ಅಂಶ, ರಕ್ತದಲ್ಲಿ ಹಿಮೋ ಗ್ಲೋಬಿನ್ ಮಟ್ಟವನ್ನು ಹೆಚ್ಚಿಸಿ, ದೇಹದ ರಕ್ತವನ್ನು ಕೂಡ ಶುದ್ಧೀಕರಣ ಮಾಡುತ್ತದೆ.

ಇನ್ನು ತಜ್ಞರು ಹೇಳುವ ಪ್ರಕಾರ, ಬೆಲ್ಲ ನೈಸರ್ಗಿಕ ರಕ್ತಶುದ್ದೀಕಾರಕವಾಗಿದೆ. ಇದರಲ್ಲಿ ಕಂಡು ಬರುವ ಪೌಷ್ಟಿಕ ಸತ್ವಗಳು, ದೇಹದ ಕಲ್ಮಶಗಳನ್ನು ವಿಸರ್ಜಿಸಲು ನೆರವಾಗುತ್ತದೆ.

- Advertisement -

Related news

error: Content is protected !!